ಫೆಬ್ರವರಿಯಿಂದ ಪ್ರತಿ ತಿಂಗಳು 75 ಮಿಲಿಯನ್ ಹೊಸ ಕೋವಿಡ್ ಲಸಿಕೆ ನಿರೀಕ್ಷೆ

ಕೋವಿಡ್-19 ವಿರುದ್ಧದ ಹೊಸ ಲಸಿಕೆ ಕೊರ್ಬೆವ್ಯಾಕ್ಸ್ ತಯಾರಿಕಾ ಸಂಸ್ಥೆ ಬಯೋಲಾಜಿಕಲ್ ಇ ಲಿಮಿಟೆಡ್ ಫೆಬ್ರವರಿ 2022 ರ ವೇಳೆಗೆ 75 ಮಿಲಿಯನ್ ಡೋಸ್ ಗಳನ್ನು ಪ್ರತಿ ತಿಂಗಳು ತಯಾರಿಸುವ ಯೋಜನೆ ಹೊಂದಿರುವುದಾಗಿ ಹೇಳಿದೆ.
ಕೋವಿಡ್-19 ಲಸಿಕೆ
ಕೋವಿಡ್-19 ಲಸಿಕೆ

ಹೈದಾರಾಬಾದ್: ಕೋವಿಡ್-19 ವಿರುದ್ಧದ ಹೊಸ ಲಸಿಕೆ ಕೊರ್ಬೆವ್ಯಾಕ್ಸ್ ತಯಾರಿಕಾ ಸಂಸ್ಥೆ ಬಯೋಲಾಜಿಕಲ್ ಇ ಲಿಮಿಟೆಡ್ ಫೆಬ್ರವರಿ 2022 ರ ವೇಳೆಗೆ 75 ಮಿಲಿಯನ್ ಡೋಸ್ ಗಳನ್ನು ಪ್ರತಿ ತಿಂಗಳು ತಯಾರಿಸುವ ಯೋಜನೆ ಹೊಂದಿರುವುದಾಗಿ ಹೇಳಿದೆ.
 
ಈ ಮೂಲಕ ಕೇಂದ್ರ ಸರ್ಕಾರಕ್ಕೆ ನೀಡಿದ್ದ ಭರವಸೆಯ 300 ಮಿಲೊಯನ್ ಡೋಸ್ ಗಳನ್ನು ಪೂರೈಕೆ ಮಾಡುವುದು ಸಾಧ್ಯವಾಗಲಿದೆ ಎಂದು ಬಿ.ಇ ಹೇಳಿದೆ. 

ದೇಶೀಯವಾಗಿ ಕೊರೋನಾ ತಡೆಗಾಗಿ ಅಭಿವೃದ್ಧಿಯಾಗಿರುವ ಪ್ರೊಟೀನ್ ಸಬ್-ಯುನಿಟ್ ಲಸಿಕೆ ಇದಾಗಿದ್ದು, ಡಿಜಿಸಿಐ ನಿಂದ ಅನುಮೋದನೆ ಪಡೆದಿದೆ. ಲಸಿಕೆ ತಯಾರಿಸಿರುವ ಸಂಸ್ಥೆಯ ಪತ್ರಿಕಾ ಪ್ರಕಟಣೆಯಲ್ಲಿ ಜಾಗತಿಕವಾಗಿ ಹೆಚ್ಚುವರಿ ಒಂದು ಬಿಲಿಯನ್ ಡೋಸ್ ಗಳನ್ನು ಪೂರೈಕೆ ಮಾಡುವುದಾಗಿ ತಿಳಿಸಿದೆ.

ಇದನ್ನೂ ಓದಿ: ಕೋವಿಡ್-19: ಮೊಲ್ನುಪಿರವಿರ್ ಮಾತ್ರೆ, ಕೋವೋವ್ಯಾಕ್ಸ್, ಕೋರ್ಬೆವ್ಯಾಕ್ಸ್ ಲಸಿಕೆಗಳ ತುರ್ತು ಬಳಕೆಗೆ ಕೇಂದ್ರ ಅನುಮೋದನೆ
 
ಬಯೋಲಾಜಿಕಲ್ ಇ. ಲಿಮಿಟೆಡ್ ಫೆ.2022 ರಿಂದ ಪ್ರತಿ ತಿಂಗಳು 75 ಮಿಲಿಯನ್ ಡೋಸ್ ಗಳ ದರದಲ್ಲಿ  ಪೂರ್ಣಗೊಳಿಸುವ ಯೋಜನೆ ಹೊಂದಿದ್ದು 100 ಮಿಲಿಯನ್ ಡೋಸ್ ಗಳನ್ನು ನಿರೀಕ್ಷಿಸುತ್ತಿದೆ ಎಂದು ಸಂಸ್ಥೆ ತಿಳಿಸಿದೆ. ಟೆಕ್ಸಾಸ್ ಮಕ್ಕಳ ಆಸ್ಪತ್ರೆ ಕೇಂದ್ರ (ಟೆಕ್ಸಾಸ್ ಚಿಲ್ಡ್ರನ್ ಸಿವಿಡಿ) ಹಾಗೂ ಬೇಲರ್ ಕಾಲೇಜ್ ಆಫ್ ಮೆಡಿಸಿನ್ ಬೇಲರ್ ಸಹಯೋಗದಲ್ಲಿ ಲಸಿಕೆಯನ್ನು ಅಭಿವೃದ್ಧಿಪಡಿಸಲಾಗಿದೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com