ಜಮ್ಮು-ಕಾಶ್ಮೀರದಲ್ಲಿ ಗುಂಡಿನ ಅಬ್ಬರ: ಯೋಧ ಹುತಾತ್ಮ, ಮೂವರು ಯೋಧರಿಗೆ ಗಾಯ, ಆರು ಉಗ್ರರು ಹತ್ಯೆ

ಕಣಿವೆ ಪ್ರದೇಶ ಜಮ್ಮು-ಕಾಶ್ಮೀರದ ಅನಂತ್ ನಾಗ್ ಮತ್ತು ಕುಲ್ಗಾಮ್ ಜಿಲ್ಲೆಗಳಲ್ಲಿ ನಸುಕಿನ ಜಾವ ನಡೆದ ಎರಡು ಪ್ರತ್ಯೇಕ ಎನ್ ಕೌಂಟರ್ ನಲ್ಲಿ 6 ಮಂದಿ ನಿಷೇಧಿತ ಜೈಶ್ ಎ ಮೊಹಮ್ಮದ್(JeM) ಭಯೋತ್ಪಾದಕ ಸಂಘಟನೆಯ ಉಗ್ರರು ಹತರಾಗಿದ್ದಾರೆ ಎಂದು ವರದಿಯಾಗಿದೆ.
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ

ಜಮ್ಮು-ಕಾಶ್ಮೀರ: ಕಣಿವೆ ಪ್ರದೇಶ ಜಮ್ಮು-ಕಾಶ್ಮೀರದ ಅನಂತ್ ನಾಗ್ ಮತ್ತು ಕುಲ್ಗಾಮ್ ಜಿಲ್ಲೆಗಳಲ್ಲಿ ನಸುಕಿನ ಜಾವ ನಡೆದ ಎರಡು ಪ್ರತ್ಯೇಕ ಎನ್ ಕೌಂಟರ್ ನಲ್ಲಿ 6 ಮಂದಿ ನಿಷೇಧಿತ ಜೈಶ್ ಎ ಮೊಹಮ್ಮದ್(JeM) ಭಯೋತ್ಪಾದಕ ಸಂಘಟನೆಯ ಉಗ್ರರು ಹತರಾಗಿದ್ದಾರೆ ಎಂದು ವರದಿಯಾಗಿದೆ.

ಹತ್ಯೆಗೊಂಡ ಭಯೋತ್ಪಾದಕರಲ್ಲಿ ಇಬ್ಬರು ಪಾಕಿಸ್ತಾನಿಗಳಾಗಿದ್ದು ಮತ್ತಿಬ್ಬರು ಸ್ಥಳೀಯ ಉಗ್ರರಾಗಿದ್ದಾರೆ. ಉಳಿದಿಬ್ಬರ ಗುರುತು ಕೂಡ ಪತ್ತೆಯಾಗಿದೆ, ಎಲ್ಲಾ 6 ಮಂದಿ ಜೈಶ್ ಎ ಮೊಹಮ್ಮದ್ ಸಂಘಟನೆ ಜೊತೆ ಗುರುತಿಸಿಕೊಂಡವರಾಗಿದ್ದಾರೆ.

ಕುಲ್ಗಾಮ್ ನ ಮಿರ್ಹಮ ಪ್ರದೇಶದಲ್ಲಿ ಎನ್ ಕೌಂಟರ್ ನಡೆದಿದೆ ಎಂದು ಕಾಶ್ಮೀರ ಐಜಿಪಿ ತಿಳಿಸಿದ್ದಾರೆ. ಹತ್ಯೆಗೊಂಡ ಉಗ್ರರು ಹಲವು ಭಯೋತ್ಪಾದಕ ಅಪರಾಧ ಕೃತ್ಯಗಳು ಮತ್ತು ನಾಗರಿಕ ಹಿಂಸಾಚಾರಗಳಲ್ಲಿ ಹಿಂದೆ ಭಾಗಿಯಾಗಿದ್ದರು ಎಂದು ಸಹ ಪೊಲೀಸರು ತಿಳಿಸಿದ್ದಾರೆ.

ಕುಲ್ಗಾಮ್‌ನಲ್ಲಿ ಮೂವರು ಜೆಇಎಂ ಭಯೋತ್ಪಾದಕರು, ಒಬ್ಬ ಪಾಕಿಸ್ತಾನಿ ಉಗ್ರಗಾಮಿ ಮತ್ತು 2 ಸ್ಥಳೀಯ ಭಯೋತ್ಪಾದಕರು ಎನ್ ಕೌಂಟರ್ ನಲ್ಲಿ ಹತ್ಯೆಗೊಂಡಿದ್ದಾರೆ. ಯಾವುದೇ ಹಾನಿಯಾದ ಬಗ್ಗೆ ವರದಿಯಾಗಿಲ್ಲ. ಅನಂತನಾಗ್ ಎನ್‌ಕೌಂಟರ್‌ನಲ್ಲಿ ರಾತ್ರಿ ವೇಳೆ ಓರ್ವ ಉಗ್ರ ಮತ್ತು ಮಧ್ಯರಾತ್ರಿ 2 ಗಂಟೆಯ ಹೊತ್ತಿಗೆ ಆರಂಭಿಕ ಗುಂಡಿನ ದಾಳಿಯಲ್ಲಿ ಇನ್ನೊಬ್ಬ ಭಯೋತ್ಪಾದಕನನ್ನು ಕೊಲ್ಲಲಾಯಿತು ಎಂದು ಕಾಶ್ಮೀರ ಐಜಿಪಿ ವಿಜಯ್ ಕುಮಾರ್ ತಿಳಿಸಿದ್ದಾರೆ. 

ಮೂವರು ಯೋಧರು, ಪೊಲೀಸ್ ಗೆ ಗಾಯ: ಎನ್ ಕೌಂಟರ್ ನಲ್ಲಿ ಮೂವರು ಸೇನಾ ಯೋಧರು ಮತ್ತು ಓರ್ವ ಜಮ್ಮು-ಕಾಶ್ಮೀರ ಪೊಲೀಸ್ ಜವಾನರಿಗೆ ಗಾಯವಾಗಿದೆ. ನಂತರ ಯೋಧರೊಬ್ಬರು ಹುತಾತ್ಮರಾಗಿದ್ದಾರೆ. ಉಳಿದವರ ಆರೋಗ್ಯ ಸ್ಥಿತಿ ಸ್ಥಿರವಾಗಿದೆ. ಸ್ಥಳದಿಂದ ಎರಡು ಎಂ4 ರೈಫಲ್ಸ್ ಮತ್ತು ನಾಲ್ಕು ಎಕೆ 47 ವಶಪಡಿಸಿಕೊಳ್ಳಲಾಗಿದೆ ಎಂದು ವಿವರ ನೀಡಿದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com