ಸಿಬಿಎಸ್ ಇ 10, 12ನೇ ತರಗತಿ ಪಠ್ಯಕ್ರಮ ಎರಡು ಅವಧಿಗೆ ವಿಂಗಡಣೆ, ಪ್ರತಿ ಅವಧಿ ಅಂತ್ಯದಲ್ಲಿ ಪರೀಕ್ಷೆ

ಕೋವಿಡ್‍ ಸಾಂಕ್ರಾಮಿಕ ಬಿಕ್ಕಟ್ಟಿನ ಹಿನ್ನೆಲೆಯಲ್ಲಿ 2021-22ನೇ ಶೈಕ್ಷಣಿಕ ವರ್ಷದಲ್ಲಿ  10 ಮತ್ತು 12ನೇ ತರಗತಿಯ ಪಠ್ಯಕ್ರಮವನ್ನು ಬದಲಾಯಿಸಿ ಎರಡು ಅವಧಿಗಳಿಗೆ ವಿಂಗಡಿಸಲಾಗಿದೆ.
ವಿದ್ಯಾರ್ಥಿಗಳು (ಸಾಂಕೇತಿಕ ಚಿತ್ರ)
ವಿದ್ಯಾರ್ಥಿಗಳು (ಸಾಂಕೇತಿಕ ಚಿತ್ರ)

ನವದೆಹಲಿ: ಕೋವಿಡ್‍ ಸಾಂಕ್ರಾಮಿಕ ಬಿಕ್ಕಟ್ಟಿನ ಹಿನ್ನೆಲೆಯಲ್ಲಿ 2021-22ನೇ ಶೈಕ್ಷಣಿಕ ವರ್ಷದಲ್ಲಿ 10 ಮತ್ತು 12ನೇ ತರಗತಿಯ ಪಠ್ಯಕ್ರಮವನ್ನು ಬದಲಾಯಿಸಿ ಎರಡು ಅವಧಿಗಳಿಗೆ ವಿಂಗಡಿಸಲಾಗಿದ್ದು, ಪ್ರತಿ ಅವಧಿಯ ಕೊನೆಯಲ್ಲಿ ಪರೀಕ್ಷೆಗಳನ್ನು ನಡೆಸಲು ಕೇಂದ್ರೀಯ ಪೌಢ ಶಿಕ್ಷ ಮಂಡಳಿ(ಸಿಬಿಎಸ್‍ಇ) ನಿರ್ಧರಿಸಿದೆ.  

ಈ ಕುರಿತಂತೆ ಸಿಬಿಎಸ್ ಇ ಸೋಮವಾರ ಪ್ರಕಟಣೆ ಹೊರಡಿಸಿದ್ದು, ಪ್ರಸಕ್ತ ಶೈಕ್ಷಣಿಕ ವರ್ಷದ ಪಠ್ಯಕ್ರಮವನ್ನು ಎರಡು ಅವಧಿಗಳಿಗೆ ವಿಂಗಡಿಸಲಾಗಿದೆ. ವಿಂಗಡಿಸಲಾದ ಪಠ್ಯಕ್ರಮದ ಆಧಾರದಡಿ ಪ್ರತಿ ಅವಧಿಯ ಕೊನೆಯಲ್ಲಿ ಪರೀಕ್ಷೆಯನ್ನು ಮಂಡಳಿ ನಡೆಸಲಿದೆ ಎಂದು ಹೇಳಿದೆ. 

ಶೈಕ್ಷಣಿಕ ವರ್ಷದ ಕೊನೆಯಲ್ಲಿ ಮಂಡಳಿ ಪರೀಕ್ಷೆಗಳನ್ನು ತೆಗೆದುಕೊಳ್ಳುವ ಸಂಭವನೀಯತೆ ಹೆಚ್ಚಿಸುವ ಉದ್ದೇಶದಿಂದ ಈ ಕ್ರಮಗಳನ್ನು ತೆಗೆದುಕೊಳ್ಳಲಾಗಿದೆ. ಹಿಂದಿನ ಶೈಕ್ಷಣಿಕ ವರ್ಷದಂತೆ ಪಠ್ಯಕ್ರಮದಲ್ಲಿ ಮಾರ್ಪಾಡು ಮಾಡಲಾಗಿದ್ದು, ಈ ತಿಂಗಳ ಅಂತ್ಯದ ವೇಳೆಗೆ ಹೊಸ ಪಠ್ಯಕ್ರಮದ ಬಗ್ಗೆ ಅಧಿಸೂಚನೆ ಹೊರಡಿಸಲಾಗುವುದು ಎಂದು ಮಂಡಳಿ ತಿಳಿಸಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com