ಕಾಸರಗೋಡು ದೋಣಿ ದುರಂತ: ನಾಪತ್ತೆಯಾದ ಮೂವರು ಮೀನುಗಾರರು ಶವವಾಗಿ ಪತ್ತೆ

ಜುಲೈ 4 ರಂದು ದೋಣಿ ದುರಂತದಲ್ಲಿ ನಾಪತ್ತೆಯಾದ ಮೂವರ ಮೃತದೇಹಗಳು ಇಂದು (ಸೋಮವಾರ) ಕಾಸರಗೋಡು ಬೇಕಲ್ ಕೋಟಿಕುಳಂ ಕಡಲತೀರದಲ್ಲಿ ಪತ್ತೆಯಾಗಿವೆ.
ಮೃತ ಮೀನುಗಾರರು
ಮೃತ ಮೀನುಗಾರರು

ಕಾಸರಗೋಡು: ಜುಲೈ 4 ರಂದು ದೋಣಿ ದುರಂತದಲ್ಲಿ ನಾಪತ್ತೆಯಾದ ಮೂವರ ಮೃತದೇಹಗಳು ಇಂದು (ಸೋಮವಾರ) ಕಾಸರಗೋಡು ಬೇಕಲ್ ಕೋಟಿಕುಳಂ ಕಡಲತೀರದಲ್ಲಿ ಪತ್ತೆಯಾಗಿವೆ.

ಮೃತರನ್ನು ಕಸಬಾ ಬೀಚ್‌ನ ನಿವಾಸಿಗಳಾದ ಸಂದೀಪ್ (34), ರತೀಶ್ (35), ಮತ್ತು ಕಾರ್ತಿಕ್ (22) ಎಂದು ಗುರುತಿಸಲಾಗಿದೆ. ಭಾನುವಾರ ಬೆಳಿಗ್ಗೆ ಏಳು ಜನರಿದ್ದ ಆಂಜನೇಯ ಹೆಸರಿನ ಫೈವರ್ ದೋಣಿ ಮೀನುಗಾರಿಕೆಗೆ ತೆರಳಿದ್ದಾಗ ಕಿಯೂರು ಸಮೀಪದಲ್ಲಿ ದೋಣಿ ಅಲೆಗೆ ಸಿಕ್ಕು ಮಗುಚಿ ದುರಂತ ಸಭವಿಸಿತ್ತು. ಆ ವೇಳೆ ಇನ್ನೊಂದು ದೋಣಿಯಲ್ಲಿದ್ದ ಮೀನುಗಾರರು ದುರಂತಕ್ಕೀಡಾದ ದೀಣಿಯಲ್ಲಿನ ನಾಲ್ವರನ್ನು ರಕ್ಷಿಸಿದ್ದರು.

ಅಡ್ಯತ್ತಬೈಲ್ಬೀಚ್ ನಿವಾಸಿ ಬಿ.ಮಣಿಕುಟ್ಟನ್ (36), ಕೋಟಿಕುಳಂ ಕಡಪ್ಪುರದ ರವಿ(22), ನೆಲ್ಲಿಕುಂಜೆ ನಿವಾಸಿ ಶಶಿ (35) ಮತ್ತು ಕಸಾಬಾ ನಿವಾಸಿ ಶಿಬಿನ್ (23) ಅಬರನ್ನು ರಕ್ಷಿಸಲಾಗಿತ್ತು.

ಸ್ಥಳೀಯ ಮೀನುಗಾರರು, ಕರಾವಳಿ ಪೊಲೀಸರು ಮತ್ತು ಅಗ್ನಿಶಾಮಕ ಸಿಬ್ಬಂದಿ ಭಾನುವಾರ ತಡರಾತ್ರಿಯವರೆಗೆ ನಾಪತ್ತೆಯಾದವರಿಗಾಗಿ ಶೋಧ ಮುಂದುವರಿಸಿದ್ದರು. ತೀರಕ್ಕೆ ಬಂದಿದ್ದ ಮೂವರ ಮೃತದೇಹವನ್ನು  ಮೀನುಗಾರರು ಗಮನಿಸಿದರು, ಅವರು ಈ ವಿಷಯವನ್ನು ಪೊಲೀಸರಿಗೆ ತಿಳಿಸಿದರು.

ಮೃತದೇಹಗಳನ್ನು ಮರಣೋತ್ತರ ಪರೀಕ್ಷೆಗೆ ಕಾಸರಗೋಡು ಜನರಲ್ ಆಸ್ಪತ್ರೆಗೆ ಕಳುಹಿಸಲಾಗಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com