ಭೋಪಾಲ್ ಶವಾಗಾರದಲ್ಲಿ ಉದ್ಯಾನವನ ಅಭಿವೃದ್ಧಿಪಡಿಸಲು ಕೊರೋನಾ ಮೃತರ ಚಿತಾಭಸ್ಮ ಬಳಕೆ

ಕೊರೋನಾ ಎರಡನೇ ಅಲೆಯಲ್ಲಿ ಸೋಂಕಿನಿಂದ ಸಾವನ್ನಪ್ಪಿದವರ ಚಿತಾಭಸ್ಮವನ್ನು ಬಳಸಿ ಭೋಪಾಲ್‌ನ ಹಿಂದೂ ಸ್ಮಶಾನದಲ್ಲಿ ಉದ್ಯಾನವನವನ್ನು ಅಭಿವೃದ್ಧಿಪಡಿಸಲಾಗುತ್ತಿದೆ ಎಂದು ಉದ್ಯಾನವನದ ನಿರ್ವಹಣಾ ಸಮಿತಿ ತಿಳಿಸಿದೆ.
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ

ಭೋಪಾಲ್: ಕೊರೋನಾ ಎರಡನೇ ಅಲೆಯಲ್ಲಿ ಸೋಂಕಿನಿಂದ ಸಾವನ್ನಪ್ಪಿದವರ ಚಿತಾಭಸ್ಮವನ್ನು ಬಳಸಿ ಭೋಪಾಲ್‌ನ ಹಿಂದೂ ಸ್ಮಶಾನದಲ್ಲಿ ಉದ್ಯಾನವನವನ್ನು ಅಭಿವೃದ್ಧಿಪಡಿಸಲಾಗುತ್ತಿದೆ ಎಂದು ಉದ್ಯಾನವನದ ನಿರ್ವಹಣಾ ಸಮಿತಿ ತಿಳಿಸಿದೆ.

ಭಾಭಾದಾ ವಿಶ್ರಮ್ ಘಾಟ್ ನಲ್ಲಿ 21 ಟ್ರಕ್ ಲೋಡ್ ಸತ್ತವರ ಚಿತಾಭಸ್ಮ ಬಳಸಿಕೊಳ್ಳಲಾಗುತ್ತದೆ. ಕೊರೋನಾದಿಂದ ಮೃತಪಟ್ಟವರ ಚಿತಾಭಸ್ಮವನ್ನು ಮೃತನ ಕುಟುಂಬಸ್ಥರು ಸಂಗ್ರಹಿಸಿಲ್ಲ. ಕಾರಣ ಕೊರೋನಾ ಪ್ರೇರಿತ ನಿರ್ಬಂಧಗಳು ಮತ್ತು ಅದರ ಸರಿಯಾದ ರೀತಿಯಲ್ಲಿ ವಿಲೇವಾರಿ ಮಾಡಲು ಸಾಧ್ಯವಾಗಿಲ್ಲ. 

ಸಾಂಕ್ರಾಮಿಕ ರೋಗದಿಂದ ಪ್ರಾಣ ಕಳೆದುಕೊಂಡವರ ನೆನಪಿಗಾಗಿ ಶವಾಗಾರದಲ್ಲಿ 12,000 ಚದರ ಅಡಿ ವಿಸ್ತೀರ್ಣದಲ್ಲಿ ಈ ಉದ್ಯಾನವನ್ನು ಅಭಿವೃದ್ಧಿಪಡಿಸಲಾಗುವುದು ಎಂದು ಶ್ಮಶಾನದ ನಿರ್ವಹಣಾ ಸಮಿತಿಯ ಪದಾಧಿಕಾರಿ ತಿಳಿಸಿದ್ದಾರೆ.

ಮಾರ್ಚ್ 15ರಿಂದ ಜೂನ್ 15ರವರೆಗಿನ 90 ದಿನಗಳ ಅವಧಿಯಲ್ಲಿ ಕೊರೋನಾ ಪ್ರೋಟೋಕಾಲ್ ಅನ್ನು ಅನುಸರಿಸಿ ಭಡ್ಭಾದಾ ವಿಶ್ರಮ್ ಘಾಟ್‌ನಲ್ಲಿ 6,000 ಕ್ಕೂ ಹೆಚ್ಚು ಶವಗಳನ್ನು ದಹಿಸಲಾಯಿತು. ಕುಟುಂಬದ ಹೆಚ್ಚಿನ ಸದಸ್ಯರು ಮೂಳೆಗಳನ್ನು ಸಂಗ್ರಹಿಸಿ ಕೊರೋನಾ ಪ್ರೇರಿತ ನಿರ್ಬಂಧಗಳಿಂದ ಚಿತಾಭಸ್ಮವನ್ನು ಬಿಟ್ಟರು ಎಂದು ಅದರ ನಿರ್ವಹಣಾ ಸಮಿತಿಯ ಕಾರ್ಯದರ್ಶಿ ಮಮತೇಶ್ ಶರ್ಮಾ ಪಿಟಿಐಗೆ ತಿಳಿಸಿದ್ದಾರೆ.

ಸ್ಮಶಾನದಲ್ಲಿ ಹೀಗ 21 ಟ್ರಕ್ ಲೋಡ್ ಚಿತಾಭಸ್ಮವಿದೆ. ಚಿತಾಭಸ್ಮವನ್ನು ನರ್ಮದಾ ನದಿಗೆ ಬಿಡುವುದು ಕಷ್ಟಕರ ಮತ್ತು ಪರಿಸರ ಸ್ನೇಹಿಯಲ್ಲ. ಹಾಗೆ ಮಾಡುವುದರಿಂದ ನದಿಯನ್ನು ಕಲುಷಿತಗೊಳಿಸಬಹುದು. ಆದ್ದರಿಂದ, ಪಾರ್ಕ್ ಅಭಿವೃದ್ಧಿಪಡಿಸುವುದಕ್ಕೆ ಚಿತಾಭಸ್ಮವನ್ನು ಬಳಸಿಕೊಳ್ಳುವ ನಿರ್ಧಾರ ತೆಗೆದುಕೊಳ್ಳಲಾಗಿದೆ ಅವರು ಹೇಳಿದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com