ಮನಾಲಿ ಕಾಯುತ್ತದೆ, ಕೊರೋನಾ ವೈರಸ್ ಕಾಯಲ್ಲ: ದಾಂಗುಡಿ ಇಡುತ್ತಿರುವ ಜನರಿಗೆ ಸರ್ಕಾರದ ಎಚ್ಚರಿಕೆ!

ಭಾರತದ 73 ಜಿಲ್ಲೆಗಳಲ್ಲಿ ಇನ್ನೂ ಕೊರೋನಾ ಪಾಸಿಟಿವಿಟಿ ದರ ಶೇಕಡ 10ಕ್ಕಿಂತ ಜಾಸ್ತಿ ಬರುತ್ತಿರುವ ವರದಿಗಳ ಕುರಿತಂತೆ ಒತ್ತಿ ಹೇಳಿರುವ ಹಿಮಾಚಲ ಪ್ರದೇಶ ಸರ್ಕಾರ ಹೊಸ ಎಚ್ಚರಿಕೆ ನೀಡಿದ್ದು, ಎರಡನೇ ಅಲೆ ಇನ್ನೂ ಮುಗಿದಿಲ್ಲ ಎಂದು ಹೇಳಿದೆ.
ಮನಾಲಿ
ಮನಾಲಿ

ನವದೆಹಲಿ: ಭಾರತದ 73 ಜಿಲ್ಲೆಗಳಲ್ಲಿ ಇನ್ನೂ ಕೊರೋನಾ ಪಾಸಿಟಿವಿಟಿ ದರ ಶೇಕಡ 10ಕ್ಕಿಂತ ಜಾಸ್ತಿ ಬರುತ್ತಿರುವ ವರದಿಗಳ ಕುರಿತಂತೆ ಒತ್ತಿ ಹೇಳಿರುವ ಹಿಮಾಚಲ ಪ್ರದೇಶ ಸರ್ಕಾರ ಹೊಸ ಎಚ್ಚರಿಕೆ ನೀಡಿದ್ದು, ಎರಡನೇ ಅಲೆ ಇನ್ನೂ ಮುಗಿದಿಲ್ಲ ಎಂದು ಹೇಳಿದೆ.

ಸಾವಿರಾರು ಸಂಖ್ಯೆಯಲ್ಲಿ ಸ್ಥಳೀಯರು ಹಾಗೂ ಪ್ರವಾಸಿಗರು ಹೊರಬರುತ್ತಿರುವುದರಿಂದ ಕೋವಿಡ್ ಸೂಕ್ತ ಮಾರ್ಗಸೂಚಿಗಳನ್ನು ಕಾಪಾಡಿಕೊಳ್ಳುವಂತೆ ಜನರಿಗೆ ಎಚ್ಚರಿಕೆ ನೀಡಿದೆ.  

ಭಾರತದಲ್ಲಿ ಸಕಾರಾತ್ಮಕ ದರವನ್ನು ವರದಿಯಾಗುತ್ತಿರುವ 73 ಜಿಲ್ಲೆಗಳಲ್ಲಿ ಅತಿ ಹೆಚ್ಚು ಅಂದರೆ 18 ಜಿಲ್ಲೆಗಳು ಈಶಾನ್ಯದ ಅರುಣಾಚಲ ಪ್ರದೇಶದಲ್ಲಿವೆ. ಪ್ರಸ್ತುತ ಅತ್ಯಂತ ಕೆಟ್ಟ ಕೋವಿಡ್ -19 ಪರಿಸ್ಥಿತಿ ಎದುರಿಸುತ್ತಿರು ಪ್ರದೇಶ. ಇನ್ನು ಅಂತಹ 10 ಜಿಲ್ಲೆಗಳನ್ನು ಹೊಂದಿರುವ ರಾಜಸ್ಥಾನವೂ ಹೆಚ್ಚು ಹಿಂದೆ ಉಳಿದಿಲ್ಲ. ಸಾಂಕ್ರಾಮಿಕ ರೋಗವು ನಿಯಂತ್ರಣದಲ್ಲಿರಲು ಪಾಸಿಟಿವಿಟಿ ದರ ಪ್ರಮಾಣವು ಶೇಕಡ 5ಕ್ಕಿಂತ ಕಡಿಮೆ ಇರಬೇಕು ಎಂದು ಅಧಿಕಾರಿಗಳು ಹೇಳುತ್ತಾರೆ.

ಪಾಸಿಟಿವಿಟಿ ದರ ಬಗ್ಗೆ ಚಿಂತೆ ಮಾಡುವ ಈಶಾನ್ಯದ ಇತರ ರಾಜ್ಯಗಳಲ್ಲಿ ಮಣಿಪುರ, ತ್ರಿಪುರ, ಮೇಘಾಲಯ ಮತ್ತು ನಾಗಾಲ್ಯಾಂಡ್ ಸೇರಿವೆ. ಅಲ್ಲದೆ ಕೇರಳ, ಮಹಾರಾಷ್ಟ್ರ ಮತ್ತು ಒಡಿಶಾದ ಅನೇಕ ಜಿಲ್ಲೆಗಳು ಸಹ ಈ ವಿಭಾಗದಲ್ಲಿವೆ. ಪಾಸಿಟಿವಿಟಿ ದರವು ಯಾವುದೇ ಜಿಲ್ಲೆಯಲ್ಲಿ ಶೇಕಡ 5ಕ್ಕಿಂತ ಹೆಚ್ಚಿರುತ್ತದೆಯೋ ಅಲ್ಲಿ ಸ್ಥಳೀಯ ನಿರ್ಬಂಧಗಳನ್ನು ವಿಧಿಸಬೇಕು ಎಂದು ಐಸಿಎಂಆರ್ ಮಹಾನಿರ್ದೇಶಕ ಬಲ್ರಾಮ್ ಭಾರ್ಗವ ಹೇಳಿದ್ದರು. 

ಜನದಟ್ಟಣೆಯ ಗಿರಿಧಾಮಗಳ 'ಭಯಾನಕ' ಚಿತ್ರಗಳನ್ನು ಸಹ ಉಲ್ಲೇಖಿಸಿದ್ದಾರೆ. ಜನರು ಬೆಟ್ಟದ ತಪ್ಪಲಿನಲ್ಲಿರುವ ಮನಾಲಿ, ಕುಲ್ಲು, ಶಿಮ್ಲಾ ಮತ್ತು ಧರ್ಮಶಾಲಾಗಳಿಗೆ ಧಾವಿಸಿದ್ದಾರೆ. ನಿರ್ಬಂಧಗಳಿಂದಾಗಿ ಮನೆಯಲ್ಲಿ ಕುಳಿತುಕೊಳ್ಳುವುದರಿಂದ ಬೇಸರಗೊಂಡ ಜನರು, ನಿರ್ಬಂಧಗಳನ್ನು ತೆಗೆದುಹಾಕುತ್ತಿದ್ದಂತೆ ಕೋವಿಡ್ ವೈರಸ್ ಕಣ್ಮರೆಯಾಯಿತು ಎಂದೂ ನಂಬಿದಂತಿದೆ ಎಂದು ಲಾವ್ ಅಗ್ರವಾಲ್ ಹೇಳಿದರು. 

ಒಂದು ಸಣ್ಣ ತಪ್ಪು ಕೂಡ ದುಬಾರಿಯಾಗುತ್ತದೆ. ಜನರಿಗೆ ಎಚ್ಚರಿಕೆ ನೀಡಲು ಸರ್ಕಾರ ಟ್ವೀಟ್ ಮಾಡಿದ್ದು ಮನಾಲಿ ಕಾಯುತ್ತದೆ, ಆದರೆ ವೈರಸ್ ಕಾಯಲ್ಲ. ನಿಮ್ಮನ್ನು ಮತ್ತು ನಿಮ್ಮ ಸುತ್ತಮುತ್ತಲಿನ ಇತರರನ್ನು ಸುರಕ್ಷಿತವಾಗಿರಿಸಲು ನೀವು 2 ಗಜ ದೂರವಿದ್ದೀರಿ ಎಂಬುದನ್ನು ಖಚಿತಪಡಿಸಿಕೊಳ್ಳಿ. ಜವಾಬ್ದಾರರಾಗಿರಿ, ಸುರಕ್ಷಿತವಾಗಿರಿ! ಎಂದು ಟ್ವೀಟಿಸಿದೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com