ನಿಮ್ಮ ಮಾಸ್ಕ್ ಎಲ್ಲಿ?: 3ನೇ ಅಲೆ ಆತಂಕದ ನಡುವೆ ಸಣ್ಣ ಹುಡುಗನ ಮಾತಿಗೆ ಬೆಲೆ ಕೊಡದೆ ಅಸಡ್ಡೆ ತೋರಿದ ಜನ, ವಿಡಿಯೋ!

ದೇಶಾದ್ಯಂತ ರಾಜ್ಯಗಳು ಕೊರೋನಾ ಲಾಕ್‌ಡೌನ್ ನಿರ್ಬಂಧಗಳನ್ನು ಹಂತ ಹಂತವಾಗಿ ಅನ್ ಲಾಕ್ ಮಾಡುತ್ತಿವೆ. ಇನ್ನು ತಿಂಗಳುಗಳಿಂದ ಮನೆಯಲ್ಲೇ ಇದ್ದ ಜನರು ಎರಡನೇ ಅಲೆಯಿಂದ ಕಲಿತ ಕಠಿಣ ಪಾಠಗಳನ್ನು ಮರೆತು ಸ್ವಾತಂತ್ರ್ಯವನ್ನು ಆನಂದಿಸಲು ಮುಂದಾಗುತ್ತಿದ್ದಾರೆ.
ವಿಡಿಯೋ ಚಿತ್ರ
ವಿಡಿಯೋ ಚಿತ್ರ

ದೇಶಾದ್ಯಂತ ರಾಜ್ಯಗಳು ಕೊರೋನಾ ಲಾಕ್‌ಡೌನ್ ನಿರ್ಬಂಧಗಳನ್ನು ಹಂತ ಹಂತವಾಗಿ ಅನ್ ಲಾಕ್ ಮಾಡುತ್ತಿವೆ. ಇನ್ನು ತಿಂಗಳುಗಳಿಂದ ಮನೆಯಲ್ಲೇ ಇದ್ದ ಜನರು ಎರಡನೇ ಅಲೆಯಿಂದ ಕಲಿತ ಕಠಿಣ ಪಾಠಗಳನ್ನು ಮರೆತು ಸ್ವಾತಂತ್ರ್ಯವನ್ನು ಆನಂದಿಸಲು ಮುಂದಾಗುತ್ತಿದ್ದಾರೆ.

ಮನಾಲಿಯಲ್ಲಿ ಜನನಿಬಿಡ ಸಾರ್ವಜನಿಕ ಸ್ಥಳಗಳಲ್ಲಿ ಜನರು ಸಾಮಾಜಿಕ ಅಂತರ ಮರೆತು ಸಾವಿರಾರೂ ಸಂಖ್ಯೆಯಲ್ಲಿ ಸೇರಿದ್ದಾರೆ. ಅಲ್ಲದೆ ಮಾಸ್ಕ್ ಗಳನ್ನು ಧರಿಸದೆ ಇರುವುದು ಜನರು ಎಷ್ಟು ಅಸಡ್ಡೆ ತೋರಿದ್ದಾರೆ ಎಂಬುದನ್ನು ತೋರಿಸಿದೆ. ಈ ಚಿತ್ರಗಳು ಸಾಮಾಜಿಕ ಮಾಧ್ಯಮ ವೇದಿಕೆಗಳಲ್ಲಿ ವೈರಲ್ ಆಗಿವೆ.

ಮುಚ್ಚಲ್ಪಟ್ಟಿದ್ದ ಅಂಗಡಿಗಳು, ಮಾಲ್‌ಗಳು ಮತ್ತು ಇತರ ಚಟುವಟಿಕೆಗಳು ತೆರೆದುಕೊಳ್ಳುವುದರೊಂದಿಗೆ ಜನರು ಹೆಜ್ಜೆ ಹಾಕಲು ಪ್ರಾರಂಭಿಸಿರುವುದು ಅಚ್ಚರಿಯೇನಲ್ಲ. ಆದರೆ ಸಾಮಾಜಿಕ ಅಂತರ ಮರೆತಿರುವುದು ಮೂರನೇ ಅಲೆಯ ಆತಂಕಕ್ಕೆ ಕಾರಣವಾಗಿದೆ. 

ಇನ್ನು ವಿಡಿಯೋವೊಂದರಲ್ಲಿ ಬಾಲಕನೋರ್ವ ಮಾಸ್ಕ್ ಧರಿಸದೆ ಸುತ್ತುತ್ತಿದ್ದವರನ್ನು ಪ್ರಶ್ನಿಸಿದ್ದಾನೆ. ಆದರೆ ಜನರು ಬಾಲಕನ ಮಾತಿಗೆ ಹೆಚ್ಚಿನ ಮನ್ನಣೆ ನೀಡದೆ ಮುಂದೆ ಸಾಗಿದ್ದಾರೆ. ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು ನೆಟ್ಟಿಗರು ಕಿಡಿಕಾರಿದ್ದಾರೆ. 

ಮೊದಲ ಮತ್ತು ಎರಡನೆಯ ಅಲೆಗಳ ನಡುವೆ ಏನಾಯಿತು ಎಂಬುದನ್ನು ನಾವು ಕಲಿತಂತೆ ಕಾಣುತ್ತಿಲ್ಲ. ಹೆಚ್ಚು ಹೆಚ್ಚು ಜನರು ಒಂದೆಡೆ ಸೇರುತ್ತಿದ್ದಾರೆ. ಪ್ರಕರಣಗಳು ರಾಷ್ಟ್ರೀಯ ಮಟ್ಟದಲ್ಲಿ ಏರಿಕೆಯಾಗಲು ಸ್ವಲ್ಪ ಸಮಯ ತೆಗೆದುಕೊಳ್ಳುತ್ತದೆ. ಮೂರನೇ ಅಲೆ ಅನಿವಾರ್ಯ. ಇದು ಮುಂದಿನ ಆರರಿಂದ ಎಂಟು ವಾರಗಳಲ್ಲಿ ದೇಶವನ್ನು ಹೊಡೆಯಬಹುದು. ಇದು ಸ್ವಲ್ಪ ಸಮಯ ತೆಗೆದುಕೊಳ್ಳುತ್ತದೆ ಎಂದು ಅಖಿಲ ಭಾರತ ವೈದ್ಯಕೀಯ ವಿಜ್ಞಾನ ಸಂಸ್ಥೆ(ಏಮ್ಸ್) ಮುಖ್ಯಸ್ಥ ಡಾ.ರಂದೀಪ್ ಗುಲೇರಿಯಾ ಎಚ್ಚರಿಸಿದ್ದರು. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com