ಕಾಶ್ಮೀರಿಗಳ ಪ್ರೀತಿಯ 'ಮೊಘಲ್-ಎ-ಅಜಮ್' ಇನ್ನಿಲ್ಲ: ನೆಚ್ಚಿನ ನಟನ ಅಗಲಿಕೆಗೆ ಕಣ್ಣೀರಿಟ್ಟ ಕಣಿವೆ ರಾಜ್ಯ!

ಕಾಶ್ಮೀರಿಗಳ 'ಮೊಘಲ್-ಎ-ಅಜಮ್' (ಶ್ರೇಷ್ಠ ಮೊಘಲ್) ಇನ್ನಿಲ. ಬೇರೆಲ್ಲಾ ನಟ ನಟಿಯರಿಗಿಂತ ಕಾಶ್ಮೀರದ ಜನರಿಂದ ತುಂಬಾ ಉತ್ಸಾಹ, ಭಾವನಾತ್ಮಕವಾಗಿ ಮತ್ತು ವೈಯಕ್ತಿಕವಾಗಿ ಪ್ರೀತಿಸಲ್ಪಟ್ಟಿದ್ದ ನಟ ದಿಲೀಪ್ ಕುಮಾರ್. ಅವರಿಗಿಂತ ಕಾಶ್ಮೀರಿಗಳಿಗೆ ತೀರಾ ಹತ್ತಿರವಾಗಿದ್ದ ನಟರು, ನಿರ್ದೇಶಕರು ಬೇರೊಬ್ಬರಿರಲಿಲ್ಲ.
ದಿಲೀಪ್ ಕುಮಾರ್
ದಿಲೀಪ್ ಕುಮಾರ್

ಶ್ರೀನಗರ: ಕಾಶ್ಮೀರಿಗಳ 'ಮೊಘಲ್-ಎ-ಅಜಮ್' (ಶ್ರೇಷ್ಠ ಮೊಘಲ್) ಇನ್ನಿಲ. ಬೇರೆಲ್ಲಾ ನಟ ನಟಿಯರಿಗಿಂತ ಕಾಶ್ಮೀರದ ಜನರಿಂದ ತುಂಬಾ ಉತ್ಸಾಹ, ಭಾವನಾತ್ಮಕವಾಗಿ ಮತ್ತು ವೈಯಕ್ತಿಕವಾಗಿ ಪ್ರೀತಿಸಲ್ಪಟ್ಟಿದ್ದ ನಟ ದಿಲೀಪ್ ಕುಮಾರ್. ಅವರಿಗಿಂತ ಕಾಶ್ಮೀರಿಗಳಿಗೆ ತೀರಾ ಹತ್ತಿರವಾಗಿದ್ದ ನಟರು, ನಿರ್ದೇಶಕರು ಬೇರೊಬ್ಬರಿರಲಿಲ್ಲ.

ಹಿರಿಯ ನಟ ಪ್ರಪಂಚದಾದ್ಯಂತದ ಲಕ್ಷಾಂತರ ಜನರ ಜೀವನದಲ್ಲಿ ತಂದಿರುವ ಹಳೆ ಮನರಂಜನೆಯ ನೆನಪುಗಳನ್ನು ಪುನರುಜ್ಜೀವನಗೊಳಿಸಿದರೂ ಅವರ ಸಾವಿನ ಸುದ್ದಿ ಆಘಾತವನ್ನೇ ತಂದಿದೆ.

ಹಳೆಯ ತಲೆಮಾರಿನ ಕಾಶ್ಮೀರಿಗಳಿಗೆ ಪರಿಚಿತರಾಗಿದ್ದ ಈ ನಟ ಸ್ಥಳೀಯ ಯುವಜನರಿಗೂ ಪ್ರಿಯನಾಗಿದ್ದನ್ನು ಗಮನಿಸಿದರೆ ಆಶ್ಚರ್ಯವಾಗುತ್ತದೆ.

"ಅವರು ದಂತಕಥೆಯಾಗಿದ್ದರು ಮತ್ತು ದಂತಕಥೆಗಳ ಮ್ಯಾಜಿಕ್ ಕಾಲಾತೀತವಾಗಿದೆ." 

"ನಾನು ಮೊಘಲ್-ಎ-ಅಜಮ್" ಮತ್ತು "ನಯಾ ದೌರ್" ಎಂಬ ದೊಡ್ಡ ಚಿತ್ರಗಳನ್ನು  ಬಣ್ಣದಲ್ಲಿ ನೋಡಿದ್ದೇನೆ. ಈ ಎರಡು ಚಲನಚಿತ್ರಗಳು ನನ್ನ ಮನಸ್ಸಿನಲ್ಲಿ ಅಳಿಸಲಾಗದ ಗುರುತನ್ನು ಉಳಿಸಿದೆ. ದಿಲೀಪ್ ಅವರ ಪ್ರತಿಭೆಯನ್ನು ಮೆಚ್ಚಲು  ಒಂದು ನಿರ್ದಿಷ್ಟ ಪೀಳಿಗೆಗೆ ಸೇರಬೇಕಾಗಿಲ್ಲ" ಎಂದು ವಿಶ್ವವಿದ್ಯಾಲಯದ ವಿದ್ಯಾರ್ಥಿ 24 ವರ್ಷದ ಅದ್ನಾನ್ ಹೇಳಿದ್ದಾರೆ.

1950, 1960 ಮತ್ತು 1970 ರ ದಶಕಗಳಲ್ಲಿ ದಿಲೀಪ್ ಕುಮಾರ್ ಅವರ ಚಲನಚಿತ್ರಗಳನ್ನು ನೋಡಿದ ಕಾಶ್ಮೀರಿಗಳು ಈ ದುರಂತ ನಾಯಕನ ಬಗ್ಗೆ ವಿಸ್ಮಯ ಮತ್ತು ಗೌರವವನ್ನಿಟ್ಟುಕೊಂಡಿದ್ದಾರೆ.

"ಮೊಘಲ್-ಎ-ಅಜಮ್" ಅನ್ನು 1950 ರ ದಶಕದ ಉತ್ತರಾರ್ಧದಲ್ಲಿ ಶ್ರೀನಗರದ 'ಅಮ್ರೆಶ್' ಚಿತ್ರಮಂದಿರದಲ್ಲಿ ಮೊದಲ ಬಾರಿಗೆ ಪ್ರದರ್ಶಿಸಿದಾಗ ನಾನು ನೋಡಿದ್ದೇನೆ. 

"ಜನರು ಬುಕಿಂಗ್ ವಿಂಡೋವನ್ನು ತೆರೆಯಲು 10 ಗಂಟೆಗಳಿಗಿಂತ ಹೆಚ್ಚು ಕಾಲ ಕಾಯುತ್ತಿದ್ದರು. ದೇವರಾಣೆ  ಸಾರ್ವಕಾಲಿಕ ಶ್ರೇಷ್ಠ ಹಾಲಿವುಡ್ ಚಲನಚಿತ್ರ 'Benhur' ನಂತೆ ಪ್ರೇಕ್ಷಕರ ಮೇಲೆ ಉಂಟಾದ  ಅದ್ಭುತ ಪ್ರಭಾವ ಬೇರಾವ ಚಿತ್ರದ ಬಗ್ಗೆ ನಾನು ನೋಡಿಲ್ಲ. ಅವರ ಅಗಲಿಕೆ ನಮ್ಮೆಲ್ಲರನ್ನೂ ದುಃಖಕ್ಕೆ ದೂಡಿದೆ. ಅವರು ಕಾಶ್ಮೀರದ ಸಿನಿ  ಶ್ರೇಷ್ಠ ದಿನಗಳ ಬಗ್ಗೆ ನಮ್ಮನೆನಪಿನ ಒಂದು ಭಾಗವಾಗಿ ಉಳಿದಿದ್ದಾರೆ" ಎಂದು 74 ವರ್ಷದ ನೂರ್ ಮುಹಮ್ಮದ್ ಹೇಳಿದರು.

ಕಪ್ಪು ಬಿಳುಪು ಯುಗದ ಭಾಗವಾಗಿದ್ದರೂ, ಅವರ ನಂತರದ ಚಲನಚಿತ್ರಗಳಾದ "ಆನ್", "ಗಂಗಾ ಜಮುನಾ", "ದಿಲ್ ದಿಯಾ ದರ್ದ್ ಲಿಯಾ", "ನಾಯಕ್", "ರಾಮ್ ಔರ್ ಶ್ಯಾಮ್ ", "ಗೋಪಿ", "ಮಾಶಾಲ್", " ಆದ್ಮಿ"ಮತ್ತು" ಶಕ್ತಿ " ಅವರ ಗೋಲ್ಡನ್ ಕಪ್ಪು ಬಿಳುಪಿನ ಚಿತ್ರಗಳಿಗಿಂತ ಕಡಿಮೆ ಅಭಿಮಾನಿಗಳನ್ನೇನೂ ಹೊಂದಿರಲಿಲ್ಲ.

"ದೀದಾರ್", "ಆಜಾದ್", "ತರಾನಾ", "ದಿಲ್ಲಗಿ", "ಬಾಬುಲ್", "ಅರ್ಜೂ", "ನಯಾ ದೌರ್", "ಮಧುಮತಿ", "ಶಾಹೀದ್", "ಮೇಲಾ", "ಅಂದಾಜ್ " ಮತ್ತು "ದಾಗ್" ಆ ದಿನಗಳಲ್ಲಿ ಕಾಶ್ಮೀರದಲ್ಲಿ ಮನೆ ಮಾತಾಗಿದ್ದವು. ಕಳೆದ 30 ವರ್ಷಗಳಿಂದ ಹಿಂಸಾಚಾರದಿಂದಾಗಿ ಕಾಶ್ಮೀರದಲ್ಲಿ ಎಲ್ಲಾ ಸಿನೆಮಾ ಹಾಲ್‌ಗಳು ಮುಚ್ಚಲ್ಪಟ್ಟಿದ್ದರೂ, ಅವರ ಸಾವಿನ ಸುದ್ದಿ ಸ್ಥಳೀಯ ಜನರ ಹೃದಯ ಮತ್ತು ಮನಸ್ಸಿನ ಮೇಲೆ ದುಃಖದ ತೆರೆ ಬೀಳುವಂತೆ ಮಾಡಿದೆ.

"ಸರ್ಕಾರವು ಈ ಸಂದರ್ಭಕ್ಕೆ ಅವರಿಗೆ ಅತ್ಯುನ್ನತ ಪ್ರಶಸ್ತಿಯನ್ನು ಘೋಷಿಸುವ ಬಗ್ಗೆ ಯೋಚಿಸಬೇಕು. ಇದರಿಂದಾಗಿ ನಟ ಅನೇಕ ವರ್ಷಗಳ ಹಿಂದೆಯೇ ಅರ್ಹವಾಗಿದ್ದದ್ದನ್ನು ಪಡೆದಂತಾಗುತ್ತದೆ. ಎಂದು 72 ವರ್ಷದ ಬಶೀರ್ ಅಹ್ಮದ್ ಹೇಳಿದರು.

ದುಃಖದ ಸುದ್ದಿ ಕಣಿವೆಯನ್ನು ತಲುಪಿದ ಕ್ಷಣದಿಂದ, ಸ್ಥಳೀಯರು ತಮ್ಮ ಹಳೆಯ ದಿನಗಳನ್ನು  ಅಂದಿನ  ಪ್ರಣಯ ಮತ್ತು ನಿರಾತಂಕದ ಜೀವನವನ್ನು ನೆನೆದು ಪರಸ್ಪರ ಕರೆ ಮಾಡಲು ಪ್ರಾರಂಭಿಸಿದ್ದಾರೆ. "ಆ ದಿನಗಳಲ್ಲಿ ನಮಗೆ ಇದ್ದ ಏಕೈಕ ಮನರಂಜನೆ ಸಿನೆಮಾ ಮತ್ತು ಸಾರ್ವಕಾಲಿಕ ಶ್ರೇಷ್ಠ ನಟರಾದ ದಿಲೀಪ್ ಕುಮಾರ್, ಅಶೋಕ್ ಕುಮಾರ್, ಶಾಮ್ ಮತ್ತು ರಾಜ್ ಕಪೂರ್ ಅವರ ಅಭಿನಯ  ನಮ್ಮ ಯೌವನದಲ್ಲಿ ನಮ್ಮ ದಿನವನ್ನು ರೂಪಿಸಿತು" ಎಂದು 79 ವರ್ಷದ ಗುಲಾಮ್ ನಬಿ ಹೇಳಿದರು.

ಅವರ ನಿಧನದೊಂದಿಗೆ, ಚಲನಚಿತ್ರ ವೀಕ್ಷಣೆ ಮತ್ತು ಚಲನಚಿತ್ರ ನಿರ್ಮಾಣದ ಯುಗವು ಕೊನೆಗೊಂಡಿದೆ, ಆದರೆ ಅವರ ಅದ್ಭುತ ಅಭಿನಯದಿಂದ ಉಳಿದಿರುವ ಪರಿಣಾಮ  ಕಾಶ್ಮೀರಿಗಳ ಹೃದಯದಲ್ಲಿ ಸ್ಥಾನವನ್ನು ಗಳಿಸಿದೆ, ಅದು ಬಹುಶಃ ಬೇರೆಯವರಿಗೆ ಸಿಗಲಾರದೇನೋ? "ಸಾಯಿರಾ ಬಾನು ಅವರ ಪತಿ ಮಾತ್ರ ಇಂದು ನಿಧನ ಹೊಂದಿಲ್ಲ. ಅವರು ಪ್ರತಿ ಕಾಶ್ಮೀರಿ ಪ್ರೀತಿಯ ಹೃದಯದ ಒಂದು ಭಾಗವಾಗಿದ್ದರು" ಎಂದು 73 ವರ್ಷದ ಅಬ್ದುಲ್ ಮಜೀದ್ ಹೇಳಿದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com