ಕೇಂದ್ರ ಸಂಪುಟ ಭರ್ತಿಗೆ 'ಮಾನವ ಸಂಪನ್ಮೂಲ' ಒದಗಿಸಿದ ಶಿವಸೇನೆ, ಎನ್ ಸಿಪಿಗೆ ಬಿಜೆಪಿ ಧನ್ಯವಾದ ಹೇಳಬೇಕು: ಸಂಜಯ್ ರಾವತ್

ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸಚಿವ ಸಂಪುಟ ಭರ್ತಿ ಮಾಡಲು ಮಾನವ ಸಂಪನ್ಮೂಲ ಒದಗಿಸಿದ್ದಕ್ಕೆ ಬಿಜೆಪಿ ಶಿವಸೇನೆ ಮತ್ತು ಎನ್ ಸಿಪಿಗೆ ಧನ್ಯವಾದ ಹೇಳಬೇಕು ಎಂದು ಶಿವಸೇನಾ ನಾಯಕ, ಸಂಸದ ಸಂಜಯ್ ರಾವತ್ ಹೇಳಿದ್ದಾರೆ.
ಸಂಜಯ್ ರಾವತ್
ಸಂಜಯ್ ರಾವತ್

ಮುಂಬೈ: ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸಚಿವ ಸಂಪುಟ ಭರ್ತಿ ಮಾಡಲು ಮಾನವ ಸಂಪನ್ಮೂಲ ಒದಗಿಸಿದ್ದಕ್ಕೆ ಬಿಜೆಪಿ ಶಿವಸೇನೆ ಮತ್ತು ಎನ್ ಸಿಪಿಗೆ ಧನ್ಯವಾದ ಹೇಳಬೇಕು ಎಂದು ಶಿವಸೇನಾ ನಾಯಕ, ಸಂಸದ ಸಂಜಯ್ ರಾವತ್ ಹೇಳಿದ್ದಾರೆ.

ಇಂದು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕೇಂದ್ರ ಪಂಜಾಯತ್ ರಾಜ್ ಮತ್ತು ಆರೋಗ್ಯ ಇಲಾಖೆಯ ರಾಜ್ಯ ಸಚಿವರಾಗಿರುವ ಕಪೀಲ್ ಪಾಟೀಲ್ ಮತ್ತು ಭಾರ್ತಿ ಪವರ್ ಹಿಂದೆ ಎನ್ ಸಿಪಿಯಲ್ಲಿದ್ದರು, ಇನ್ನು ಭಾರೀ ಮತ್ತು ಮಧ್ಯಮ, ಸಣ್ಣ ಕೈಗಾರಿಕಾ ಖಾತೆ ಸಚಿವ ನಾರಾಯಣ್ ರಾಣೆ ಶಿವಸೇನೆ ಹಾಗೂ ಅದಕ್ಕೂ ಮುನ್ನ ಕಾಂಗ್ರೆಸ್ ನಲ್ಲಿದ್ದರು ಎಂದರು.

ಮಹಾರಾಷ್ಟ್ರದಿಂದ ಕೇಂದ್ರ ಸಚಿವರಾಗಿ ನಿನ್ನೆ ಪ್ರಮಾಣವಚನ ಸ್ವೀಕರಿಸಿದವ ನಾಲ್ವರಲ್ಲಿ ಮೂವರು ಬಿಜೆಪಿ ಹಿನ್ನೆಲೆಯವರು ಅಲ್ಲ. ನಿನ್ನೆ ಸಚಿವರಾಗಿ ಪ್ರಮಾಣವಚನ ವಹಿಸಿಕೊಂಡವರಲ್ಲಿ ಏನೋ ಶಕ್ತಿ ನೋಡಿ ಪ್ರಧಾನಿಯವರು ಖಾತೆ ಕೊಟ್ಟಿರಬೇಕು. ಅವರಿಗೆ ಉತ್ತಮ ಮಾನವ ಸಂಪನ್ಮೂಲ ನೀಡಿದ್ದಕ್ಕಾಗಿ ಬಿಜೆಪಿ ಮತ್ತು ಪ್ರಧಾನಿಯವರು ಶಿವಸೇನೆ ಹಾಗೂ ಎನ್ ಸಿಪಿಗೆ ಧನ್ಯವಾದ ಹೇಳಬೇಕು ಎಂದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com