ಕಾಶ್ಮೀರ ಭಯೋತ್ಪಾದನೆಗೆ ಧನಸಹಾಯ: ನಾಲ್ವರು ಮುಜಾಹಿದೀನ್ ಸದಸ್ಯರ ವಿರುದ್ಧ ಆರೋಪ ಪಟ್ಟಿಗೆ ನ್ಯಾಯಾಲಯ ಆದೇಶ

ಜೈಲಿನಲ್ಲಿರುವ, ಹತ್ಯೆಗೀಡಾದ ಭಯೋತ್ಪಾದಕರ ರಕ್ತಸಂಬಂಧಿಗಳಿಗೆ ಹಣವನ್ನು ಒದಗಿಸುವ ಮೂಲಕ ಭಯೋತ್ಪಾದಕ ಸಂಘಟನೆಗಳು ತನ್ನ ನಿರೀಕ್ಷಿತ ಸದಸ್ಯರಿಗೆ ಪ್ರೇರಕ ಧೈರ್ಯವನ್ನು ನೀಡುತ್ತಿವೆ ಎಂದು ದೆಹಲಿ ನ್ಯಾಯಾಲಯವು ಶುಕ್ರವಾರ ಹೇಳಿದೆ.
ಭಯೋತ್ಪಾದಕರು
ಭಯೋತ್ಪಾದಕರು

ನವದೆಹಲಿ: ಜೈಲಿನಲ್ಲಿರುವ, ಹತ್ಯೆಗೀಡಾದ ಭಯೋತ್ಪಾದಕರ ರಕ್ತಸಂಬಂಧಿಗಳಿಗೆ ಹಣವನ್ನು ಒದಗಿಸುವ ಮೂಲಕ ಭಯೋತ್ಪಾದಕ ಸಂಘಟನೆಗಳು ತನ್ನ ನಿರೀಕ್ಷಿತ ಸದಸ್ಯರಿಗೆ ಪ್ರೇರಕ ಧೈರ್ಯವನ್ನು ನೀಡುತ್ತಿವೆ ಎಂದು ದೆಹಲಿ ನ್ಯಾಯಾಲಯವು ಶುಕ್ರವಾರ ಹೇಳಿದೆ.

ಜಮ್ಮು ಮತ್ತು ಕಾಶ್ಮೀರದಲ್ಲಿ ಭಯೋತ್ಪಾದಕ ಚಟುವಟಿಕೆಗಳನ್ನು ನಡೆಸಲು ಪಾಕಿಸ್ತಾನದಿಂದ ಹಣವನ್ನು ಪಡೆಯಲಾಗಿದೆ. ಪಾಕ್ ನಿಂದ ಹಣವನ್ನು ಪಡೆದಿರುವುದು 'ಪ್ರೈಮಾ ಫೇಸಿ' ಕಂಡುಬಂದ ನಂತರ ಹಿಜ್ಬ್-ಉಲ್-ಮುಜಾಹಿದ್ದೀನ್(ಎಚ್ಎಂ) ನ ನಾಲ್ಕು ಆಪಾದಿತ ಸದಸ್ಯರ ವಿರುದ್ಧ ಆರೋಪಗಳನ್ನು ರೂಪಿಸಲು ಆದೇಶಿಸಲಾಗಿದೆ.

ವಿಶೇಷ ನ್ಯಾಯಾಧೀಶ ಪರ್ವೀನ್ ಸಿಂಗ್ ಅವರು, ಎಚ್‌ಎಂ ಕಮಾಂಡರ್ ಸೈಯದ್ ಸಲಾಹುದ್ದೀನ್ ಅವರನ್ನೂ ಒಳಗೊಂಡ ಪ್ರಕರಣದಲ್ಲಿ, ಭಯೋತ್ಪಾದಕ ಸಂಘಟನೆಯು ಜೆಕೆಆರ್ಟಿ(ಜಮ್ಮು ಕಾಶ್ಮೀರ ಅಫೆಕ್ಟೀಸ್ ರಿಲೀಫ್ ಟ್ರಸ್ಟ್) ಹೆಸರಿನಲ್ಲಿ ಒಂದು ಸಂಘಟನೆಯನ್ನು ರಚಿಸಿತ್ತು. ಭಯೋತ್ಪಾದಕ ಚಟುವಟಿಕೆಗಳಿಗೆ ಧನಸಹಾಯ ನೀಡುವುದು ಮತ್ತು ಮುಖ್ಯವಾಗಿ ಭಯೋತ್ಪಾದಕರು ಮತ್ತು ಅವರ ಕುಟುಂಬಗಳಿಗೆ ಹಣವನ್ನು ಒದಗಿಸುವುದು ಟ್ರಸ್ಟ್‌ನ ಉದ್ದೇಶವಾಗಿತ್ತು ಹೇಳಿದ್ದಾರೆ. 

ಪ್ರತಿ ಭಯೋತ್ಪಾದಕ ಸಂಘಟನೆಗೂ ತನ್ನ ಚಟುವಟಿಕೆಗಳನ್ನು ಮುಂದುವರಿಸಲು ಹಣದ ಅಗತ್ಯವಿದೆ. ತಮ್ಮ ಸದಸ್ಯನಿಗೆ ಸಂಬಳ/ಸ್ಟೈಫಂಡ್/ ಶಸ್ತ್ರಾಸ್ತ್ರ ಮತ್ತು ಮದ್ದುಗುಂಡುಗಳನ್ನು ಸಂಗ್ರಹಿಸಲು ಮತ್ತು ಮತ್ತಷ್ಟು, ಸೆರೆವಾಸಕ್ಕೊಳಗಾದ ಭಯೋತ್ಪಾದಕರನ್ನು ಹಾಗೂ ಭದ್ರತಾ ಪಡೆಗಳಿಂದ ಹತ್ಯೆಗೀಡಾದ ಭಯೋತ್ಪಾದಕರ ಕುಟುಂಬಗಳನ್ನು ನೋಡಿಕೊಳ್ಳಲು ಹಣದ ಅಗತ್ಯವಿದೆ. ಕೊನೆಯ ಭಾಗವು ನೇರವಾಗಿ ಭಯೋತ್ಪಾದಕ ಚಟುವಟಿಕೆಗಳಿಗೆ ಧನಸಹಾಯವೆಂದು ತೋರುತ್ತಿಲ್ಲ, ಆದರೆ ವಾಸ್ತವವಾಗಿ ಭಯೋತ್ಪಾದಕ ಚಟುವಟಿಕೆಗಳ ಅವಿಭಾಜ್ಯ ಅಂಗವಾಗಿದೆ. 

ಆದಾಗ್ಯೂ, ಭಯೋತ್ಪಾದಕ ಸಂಘಟನೆಯು ಕೊಲ್ಲಲ್ಪಟ್ಟ ಅಥವಾ ಸೆರೆಹಿಡಿಯಲ್ಪಟ್ಟ ತನ್ನ ಸದಸ್ಯರ ಕುಟುಂಬಗಳಿಗೆ ಹಣದ ಸಹಾಯವನ್ನು ಒದಗಿಸುವುದನ್ನು ಮುಂದುವರಿಸಿದರೆ, ಆ ಸಂಸ್ಥೆ ನಿರಂತರವಾಗಿ ಕಾರ್ಯನಿರ್ವಹಿಸಲು ಅದರ ನಿರೀಕ್ಷಿತ ಕಾರ್ಯಕರ್ತರು ಮತ್ತು ಬಲದಲ್ಲಿರುವ ಕಾರ್ಯಕರ್ತರಿಗೆ ಇದು ಒಂದು ದೊಡ್ಡ ಪ್ರೇರಕ ಧೈರ್ಯವಾಗಿರುತ್ತದೆ ಎಂದು ನ್ಯಾಯಾಧೀಶರು ಹೇಳಿದರು. 

ಮೊಹಮ್ಮದ್ ಶಫಿ ಶಾ, ತಾಲಿಬ್ ಲಾಲಿ, ಮುಜಾಫರ್ ಅಹ್ಮದ್ ದಾರ್ ಮತ್ತು ಮುಷ್ತಾಕ್ ಅಹ್ಮದ್ ಲೋನ್ ವಿರುದ್ಧ "ಪ್ರೈಮಾ ಫೇಸಿ" ಭಾರತದ ವಿರುದ್ಧ ದಾಳಿ(ಐಪಿಸಿಯ ಸೆಕ್ಷನ್ 120-ಬಿ)ಗ ಮಾಡುವ ದೊಡ್ಡ ಪಿತೂರಿಗಾಗಿ (ಐಪಿಸಿಯ ಸೆಕ್ಷನ್ 121-ಎ) ರೂಪಿಸುವಂತೆ ಆದೇಶಿಸಿದ್ದಾರೆ. 

ಹಣವನ್ನು ಸಂಗ್ರಹಿಸಿ ಭಯೋತ್ಪಾದಕ ಕೃತ್ಯಗಳಿಗಾಗಿ(ಯುಎಪಿಎ ಸೆಕ್ಷನ್ 17 ಮತ್ತು 40) ವಿತರಿಸುವುದು, ನಿಷೇಧಿತ ಭಯೋತ್ಪಾದಕ ಸಂಘಟನೆಯ ಸದಸ್ಯರಾಗಿರುವುದು(ಯುಎಪಿಎ ಸೆಕ್ಷನ್ 20) ಮತ್ತು ಇತರ ಅಪರಾಧಗಳ ಮೇಲೂ ಅವರ ಮೇಲೆ ಆರೋಪ ಹೊರಿಸಲಾಯಿತು.

 ನ್ಯಾಯಾಲಯವು "ಜೆಕೆಎಆರ್ಟಿ ಎಚ್‌ಎಂನ ಮುಂಭಾಗದ ಸಂಘಟನೆಯಾಗಿದೆ ಎಂಬ ಅಂಶವು ಸಂರಕ್ಷಿತ ಸಾಕ್ಷಿಗಳ ಸಾಕ್ಷ್ಯಗಳಿಂದ ತಿಳಿದುಬಂದಿದೆ. ಒಟ್ಟಾರೆ ಆಡಳಿತ ನಿಯಂತ್ರಣ ಮತ್ತು ಕಾರ್ಯಾಚರಣೆಯ ನಿಯಂತ್ರಣ(ಜೆಕೆಆರ್‌ಟಿಯ) ಸೈಯದ್ ಸಲಾಹುದ್ದೀನ್ ಅವರ ಬಳಿ ಇದೆ ಎಂದು ಸಾಕ್ಷಿಗಳು ಹೇಳಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com