ಜೂನ್ 21 ರಿಂದ ಸರಾಸರಿ ದೈನಂದಿನ ಲಸಿಕೆ ನೀಡುವಿಕೆಯಲ್ಲಿ ಕುಸಿತ!

ಕೊರೋನಾ ವೈರಸ್ ನಿಯಂತ್ರಣಕ್ಕೆ ನೀಡಲಾಗುತ್ತಿರುವ ಲಸಿಕೆಯ ಅಭಿಯಾನದಲ್ಲಿ ಜೂನ್ 21 ರಿಂದ ದೈನದಿಂದ ಸರಾಸರಿ ಲಸಿಕೆ ನೀಡುವಿಕೆ ಪ್ರಮಾಣ ಕುಸಿತ ಕಂಡಿದೆ. 
ಅಹ್ಮದಾಬಾದ್ ನ ಸಮುದಾಯ ಭವನದ ಬಳಿ ಲಸಿಕೆ ಪಡೆಯಲು ಸರತಿ ಸಾಲಿನಲ್ಲಿ ನಿಂತಿರುವ ಜನ
ಅಹ್ಮದಾಬಾದ್ ನ ಸಮುದಾಯ ಭವನದ ಬಳಿ ಲಸಿಕೆ ಪಡೆಯಲು ಸರತಿ ಸಾಲಿನಲ್ಲಿ ನಿಂತಿರುವ ಜನ

ನವದೆಹಲಿ: ಕೊರೋನಾ ವೈರಸ್ ನಿಯಂತ್ರಣಕ್ಕೆ ನೀಡಲಾಗುತ್ತಿರುವ ಲಸಿಕೆಯ ಅಭಿಯಾನದಲ್ಲಿ ಜೂನ್ 21 ರಿಂದ ದೈನದಿಂದ ಸರಾಸರಿ ಲಸಿಕೆ ನೀಡುವಿಕೆ ಪ್ರಮಾಣ ಕುಸಿತ ಕಂಡಿದೆ. 

ಕೊರೋನಾ ಲಸಿಕೆಯ ಸಾರ್ವತ್ರೀಕರಣದ ಹೊಸ ಹಂತ ಪ್ರಾರಂಭವಾದಾಗಿನಿಂದ ಈ ಕುಸಿತ ದಾಖಲಾಗಿದೆ ಎಂದು ಸರ್ಕಾರಿ ಅಂಕಿ-ಅಂಶಗಳಿಂದ ತಿಳಿದುಬಂದಿದೆ. 

ಕೋವಿನ್ ವೇದಿಕೆಯಲ್ಲಿ ಲಭ್ಯವಿರುವ ಡೇಟಾ ಪ್ರಕಾರ, ಜೂನ್ 21-27 ರ ವಾರದಲ್ಲಿ 61.14 ಲಕ್ಷ ಡೋಸ್ ಗಳಷ್ಟು ಲಸಿಕೆ ನೀಡಲಾಗಿತ್ತು. ಜೂ.28 ರಿಂದ ಜುಲೈ.4 ರ ವಾರದಲ್ಲಿ ಲಸಿಕೆ ಡೋಸ್ ಗಳು 41.92 ಲಕ್ಷಕ್ಕೆ ಇಳಿಕೆಯಾಗಿತ್ತು. 

ಜುಲೈ 5 ರಿಂದ ಜುಲೈ 11 ರ ಅವಧಿಯಲ್ಲಿ ಸರಾಸರಿ ಲಸಿಕೆ ಡೋಸ್ ಗಳು 34.32 ಲಕ್ಷಕ್ಕೆ ಇಳಿಕೆಯಾಗಿದೆ.ರಾಜ್ಯಗಳಲ್ಲಿ ಮಿಶ್ರ ಟ್ರೆಂಡ್ ದಾಖಲಾಗಿದ್ದು, ಕೆಲವು ರಾಜ್ಯಗಳು ಹಾಗೂ ಕೇಂದ್ರಾಡಳಿತ ಪ್ರದೇಶಗಳಲ್ಲಿ ಲಸಿಕೆ ಅಭಿಯಾನದಲ್ಲಿ ಸ್ಥಿರವಾದ ಟ್ರೆಂಡ್ ದಾಖಲಾಗಿದೆ. 

ಹರ್ಯಾಣ, ಆಂಧ್ರಪ್ರದೇಶ, ಕರ್ನಾಟಕ, ಗುಜರಾತ್ ಛತ್ತೀಸ್ ಗಢಗಳಲ್ಲಿ ಸರಾಸರರಿ ದೈನಂದಿನ ಲಸಿಕೆ ಪ್ರಮಾಣ ಜೂನ್21-27 ವರೆಗೂ ಇಳಿಕೆಯಾಗಿದ್ದರೆ, ಕೇರಳ, ಅಂಡಮಾನ್ ನಿಕೋಬಾರ್ ದ್ವೀಪ, ದಾದ್ರಾ ಹಾಗೂ ನಗರ್ ಹವೇಲಿ, ಜಮ್ಮು-ಕಾಶ್ಮೀರಗಳಲ್ಲಿ ಲಸಿಕೆ ನೀಡುವಿಕೆ ಪ್ರಮಾಣ ಸ್ಥಿರವಾಗಿದೆ ಎಂದು ಕೋವಿನ್ ಡೇಟಾ ಹೇಳುತ್ತಿದೆ. 

ಇತ್ತೀಚೆಗೆ ಕೋವಿಡ್ ಪ್ರಕರಣಗಳ ಹೆಚ್ಚಳ ಕಂಡಿದ್ದ ಅಸ್ಸಾಂ ಹಾಗೂ ತ್ರಿಪುರಾಗಳಲ್ಲಿಯೂ ಸರಾಸರಿ ದೈನನಿಂದ ಕೋವಿಡ್-19 ಲಸಿಕೆ ನೀಡುವಿಕೆ ಕುಸಿತ ಕಂಡಿದೆ. ಆದಾಗ್ಯೂ ಈ ಹಿಂದಿನ ಹಂತಗಳಲ್ಲಿದ್ದ ದೈನಂದಿನ ಸರಾಸರಿ ಕೋವಿಡ್-19 ಲಸಿಕೆ ನೀಡುವಿಕೆಗಿಂತಲೂ ಈ ಬಾರಿ ಏರುಗತಿಯಲ್ಲಿದೆ. 
 
ಜೂ.14-20 ರ ಅವಧಿಯಲ್ಲಿ 33.97 ಲಕ್ಷ ಡೋಸ್ ಗಳಷ್ಟು ಲಸಿಕೆಯನ್ನು ದಿನನಿತ್ಯ ನೀಡಲಾಗುತಿತ್ತು. ರಾಜ್ಯ, ಕೇಂದ್ರಾಡಳಿತ ಪ್ರದೇಶಗಳು, ಖಾಸಗಿ ಆಸ್ಪತ್ರೆಗಳ ಬಳಿ 1.54 ಕೋಟಿ ಲಸಿಕೆ ಬಾಕಿ ಇದ್ದು, ಇನ್ನಷ್ಟೇ ನೀಡಬೇಕಿದೆ. ಒಟ್ಟಾರೆ ರಾಷ್ಟ್ರವ್ಯಾಪಿ ಲಸಿಕೆ ಅಭಿಯಾನದಲ್ಲಿ ಈ ವರೆಗೂ 37.73 ಕೋಟಿ ಲಸಿಕೆಗಳನ್ನು ನೀಡಲಾಗಿದೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com