ಮಹಾರಾಷ್ಟ್ರ ಸರ್ಕಾರದಿಂದ ನೂತನ ವಿದ್ಯುತ್ ವಾಹನಗಳ ನೀತಿ: 2025 ರ ವೇಳೆಗೆ ಶೇ.10 ರಷ್ಟು ನೋಂದಣಿ ಗುರಿ

ಮಹಾರಾಷ್ಟ್ರ ಸರ್ಕಾರ ನೂತನ ಇವಿ (ವಿದ್ಯುತ್ ಚಾಲಿತ ವಾಹನ) ನೀತಿಯನ್ನು ಬಿಡುಗಡೆಗೊಳಿಸಿದ್ದು, 2025 ರ ವೇಳೆಗೆ ರಾಜ್ಯದಲ್ಲಿ ನೋಂದಣಿಯಾಗುವ ವಾಹನಗಳ ಪೈಕಿ ಶೇ.10 ರಷ್ಟು ವಿದ್ಯುತ್ ವಾಹನಗಳಿಗೆ ಗುರಿ ಹೊಂದಿದೆ. 
ವಿದ್ಯುತ್ ಚಾಲಿತ ವಾಹನ (ಸಂಗ್ರಹ ಚಿತ್ರ)
ವಿದ್ಯುತ್ ಚಾಲಿತ ವಾಹನ (ಸಂಗ್ರಹ ಚಿತ್ರ)

ಮುಂಬೈ: ಮಹಾರಾಷ್ಟ್ರ ಸರ್ಕಾರ ನೂತನ ಇವಿ (ವಿದ್ಯುತ್ ಚಾಲಿತ ವಾಹನ) ನೀತಿಯನ್ನು ಬಿಡುಗಡೆಗೊಳಿಸಿದ್ದು, 2025 ರ ವೇಳೆಗೆ ರಾಜ್ಯದಲ್ಲಿ ನೋಂದಣಿಯಾಗುವ ವಾಹನಗಳ ಪೈಕಿ ಶೇ.10 ರಷ್ಟು ವಿದ್ಯುತ್ ವಾಹನಗಳಿಗೆ ಗುರಿ ಹೊಂದಿದೆ. 

2018 ರಲ್ಲಿ ಪರಿಚಯಿಸಲಾಗಿದ್ದ ನೀತಿಯ ಪರಿಷ್ಕೃತ ರೂಪ ಇದಾಗಿದ್ದು, ಜು.13 ರಂದು ರಾಜ್ಯದ ಸಾರಿಗೆ ವಿಭಾಗದ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಆಶೀಶ್ ಸಿಂಗ್ ಹಾಗೂ ರಾಜ್ಯದ ಪರಿಸರ ಖಾತೆ ಸಚಿವ ಆದಿತ್ಯ ಠಾಕ್ರೆ ಮತ್ತಿತರು ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದರು. 

"ನೀತಿಯಲ್ಲಿ ಮಹತ್ವಾಕಾಂಕ್ಷೆಗಳಿವೆ. ಮುಂಬೈ, ಪುಣೆ, ನಾಗ್ಪುರ, ಔರಂಗಾಬಾದ್, ನಾಶಿಕ್ ಗಳ ಸಾರ್ವಜನಿಕ ಸಾರಿಗೆ ವ್ಯವಸ್ಥೆಯಲ್ಲಿ ಶೇ.25 ರಷ್ಟನ್ನು ವಿದ್ಯುತ್ ಚಾಲಿತ ವಾಹನಗಳಿರುವಂತೆ ಮಾಡಲು ಗುರಿ ಹೊಂದಲಾಗಿದೆ. 

ಎಂಎಸ್ ಆರ್ ಟಿಸಿಯಲ್ಲಿ 2025 ವೇಳೆಗೆ ಶೇ.15 ರಷ್ಟು ರಷ್ಟು ವಾಹನಗಳನ್ನು ವಿದ್ಯುತ್ ವಾಹನಗಳನ್ನಾಗಿ ಪರಿವರ್ತಿಸುವ ಯೋಜನೆ ಇದ್ದು ಮಹಾರಾಷ್ಟ್ರವನ್ನು ಬ್ಯಾಟರಿ ಚಾಲಿತ ಇವಿಗಳ ಉತ್ಪಾದನೆಯಲ್ಲಿ ದೇಶದ ಟಾಪ್ ಉತ್ಪಾದಕ ರಾಜ್ಯವನ್ನಾಗಿ ಮಾಡಲಾಗುತ್ತದೆ ಎಂದು ಸಿಂಗ್ ಹೇಳಿದ್ದಾರೆ. ರಾಜ್ಯದಲ್ಲಿ ಒಂದು ಗಿಗಾವಾಟ್ ನ ಬ್ಯಾಟರಿ ಉತ್ಪಾದನೆ ಸಾಮರ್ಥ್ಯವನ್ನು ಸ್ಥಾಪಿಸುವುದು ಮುಂದಿನ ಗುರಿಯಾಗಿದೆ ಎಂದೂ ಸಿಂಗ್ ಮಾಹಿತಿ ನೀಡಿದ್ದಾರೆ. 

ಕಾರ್ಯಕ್ರಮದಲ್ಲಿ ಮಾತನಾಡಿರುವ ಸಚಿವ ಆದಿತ್ಯ ಠಾಕ್ರೆ, ಇಂಜಿನ್ ಗಳು ಯುರೋ-IV  ರಿಂದ V ಮಾದರಿಗಳಿಗೆ ಅಪ್ ಗ್ರೇಡ್ ಆಗುತ್ತಿದ್ದು, ಇಂಧನ ಚಾಲಿತ ಪ್ರಯಾಣಿಕ ವಾಹನಗಳು ಮಾರುಕಟ್ಟೆಯಲ್ಲಿ ಅನಿಶ್ಚಿತತೆ ಕಾಣಬಹುದು, ಆದರೆ ಎಂಎಸ್ ಆರ್ ಟಿಸಿ ಹಾಗೂ ಸರ್ಕಾರಿ ಸ್ವಾಮ್ಯದ ಸಂಸ್ಥೆಗಳಲ್ಲಿ ಇವಿ ಉಪಕ್ರಮದಿಂದ ಮಹತ್ತರ ಬದಲಾವಣೆ ತರಲು ಸಾಧ್ಯ ಎಂದು ಠಾಕ್ರೆ ಹೇಳಿದ್ದಾರೆ. 

ಕೇಂದ್ರ ಸರ್ಕಾರದ FAME-II ನೀತಿ ಹಾಗೂ ಮಹಾರಾಷ್ಟ್ರದ ಹೊಸ ಇವಿ ನೀತಿಗಳನ್ನು ಒಗ್ಗೂಡಿಸಿದರೆ ಅತ್ಯುತ್ತಮ ಪರಿಣಾಮಗಳನ್ನು ಕಾಣಬಹುದು. ಪ್ರಮುಖ 5 ನಗರಗಳಲ್ಲಿ ಇವಿ ಚಾರ್ಜಿಂಗ್ ಸ್ಟೇಷನ್ ಗಳನ್ನು ಸ್ಥಾಪಿಸಲಾಗುತ್ತಿದ್ದು, ವಸತಿ ಮತ್ತು ಕಚೇರಿಗಳಿರುವ ಪ್ರದೇಶಗಳು ಆದ್ಯತೆಯ ಪಟ್ಟಿಯಲ್ಲಿದೆ ಎಂದು ಸಚಿವ ಠಾಕ್ರೆ ತಿಳಿಸಿದ್ದಾರೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com