ದೈನಿಕ್ ಭಾಸ್ಕರ್ ಮಾಧ್ಯಮ ಸಂಸ್ಥೆಯ ಮೇಲೆ ಆದಾಯ ತೆರಿಗೆ ಇಲಾಖೆ ದಾಳಿ: ಹಲವು ಕಡೆ ಶೋಧ ಕಾರ್ಯ
ದೇಶದ ಪ್ರಮುಖ ಮಾಧ್ಯಮ ಸಂಸ್ಥೆ ದೈನಿಕ ಭಾಸ್ಕರ ಗ್ರೂಪ್ ನ ಹಲವು ಕಚೇರಿಗಳ ಮೇಲೆ ಆದಾಯ ತೆರಿಗೆ ಇಲಾಖೆ ಗುರುವಾರ ಬೆಳಗ್ಗೆ ದಾಳಿ ನಡೆಸಿದೆ. ಮಾಧ್ಯಮ ಸಂಸ್ಥೆಯ ಕಚೇರಿಗಳಿರುವ ಕನಿಷ್ಠ 4 ರಾಜ್ಯಗಳಲ್ಲಿ ಈ ದಾಳಿ ನಡೆದಿದೆ.
Published: 22nd July 2021 12:09 PM | Last Updated: 22nd July 2021 01:09 PM | A+A A-

ದೈನಿಕ್ ಭಾಸ್ಕರ್ ಮಾಧ್ಯಮ ಸಂಸ್ಥೆಯ ಕಚೇರಿ
ಭೋಪಾಲ್: ದೇಶದ ಪ್ರಮುಖ ಮಾಧ್ಯಮ ಸಂಸ್ಥೆ ದೈನಿಕ ಭಾಸ್ಕರ ಗ್ರೂಪ್ ನ ಹಲವು ಕಚೇರಿಗಳ ಮೇಲೆ ಆದಾಯ ತೆರಿಗೆ ಇಲಾಖೆ ಗುರುವಾರ ಬೆಳಗ್ಗೆ ದಾಳಿ ನಡೆಸಿದೆ. ಮಾಧ್ಯಮ ಸಂಸ್ಥೆಯ ಕಚೇರಿಗಳಿರುವ ಕನಿಷ್ಠ 4 ರಾಜ್ಯಗಳಲ್ಲಿ ಈ ದಾಳಿ ನಡೆದಿದೆ.
ಮಧ್ಯ ಪ್ರದೇಶ, ಗುಜರಾತ್, ರಾಜಸ್ತಾನ ಮತ್ತು ಮಹಾರಾಷ್ಟ್ರ ರಾಜ್ಯಗಳಲ್ಲಿ ಮಾಧ್ಯಮ ಸಂಸ್ಥೆಯ ಕಚೇರಿಗಳು ಮತ್ತು ವಸತಿ ಗೃಹಗಳ ಮೇಲೆ ಆದಾಯ ತೆರಿಗೆ ಇಲಾಖೆ ಅಧಿಕಾರಿಗಳು ದಾಳಿ ನಡೆಸಿ ಶೋಧ ಕಾರ್ಯ ಮುಂದುವರಿಸಿದ್ದಾರೆ.
ಮಧ್ಯ ಪ್ರದೇಶದ ಭೋಪಾಲ್ ಮತ್ತು ಇಂದೋರ್ ನಲ್ಲಿ ದೈನಿಕ ಭಾಸ್ಕರ್ ಗ್ರೂಪ್ ನ ಮಾಲೀಕರು ಮತ್ತು ಪ್ರವರ್ತಕರ ಕಚೇರಿಗಳು ಮತ್ತು ನಿವಾಸಗಳ ಮೇಲೆ, ಮಹಾರಾಷ್ಟ್ರ, ಗುಜರಾತ್, ರಾಜಸ್ತಾನ, ದೆಹಲಿ-ಎನ್ ಸಿಆರ್ ಪ್ರದೇಶಗಳಲ್ಲಿ ಕೂಡ ದಾಳಿ ನಡೆದಿದೆ. ಜೈಪುರ, ಅಹಮದಾಬಾದ್, ಮುಂಬೈಗಳಲ್ಲಿ ಕೂಡ ಶೋಧ ಕಾರ್ಯ ಮುಂದುವರಿದಿದೆ.
ದೈನಿಕ ಭಾಸ್ಕರ ಮಾಧ್ಯಮ ಸಂಸ್ಥೆಯಿಂದ ತೆರಿಗೆ ಪಾವತಿಯಲ್ಲಿ ವಂಚನೆಯಾಗಿದೆ ಎಂದು ಮೂಲಗಳಿಂದ ಸಿಕ್ಕಿರುವ ನಿಖರ ಮಾಹಿತಿಯ ಆಧಾರದ ಮೇಲೆ ಇಂದಿನ ದಾಳಿ ಮತ್ತು ಶೋಧ ಕಾರ್ಯ ನಡೆಯುತ್ತಿದೆ. ದೇಶದ ಉದ್ದಗಲಕ್ಕೂ ಎಲ್ಲಾ ಭಾಗಗಳಲ್ಲಿ ದೈನಿಕ ಭಾಸ್ಕರ ಪತ್ರಿಕೆಯ ಸುಮಾರು 60 ಆವೃತ್ತಿಗಳನ್ನು ಹೊಂದಿದೆ, ಅಲ್ಲದೆ ಸಂಸ್ಥೆ ಇಂಧನ, ರಿಯಲ್ ಎಸ್ಟೇಟ್ ಮತ್ತು ಶಿಕ್ಷಣ ವಲಯದಲ್ಲಿ ಕೂಡ ಹೂಡಿಕೆ ಮಾಡಿದೆ.