ಮಹಾರಷ್ಟ್ರದಲ್ಲಿ ಭೂಕುಸಿತ, ಪ್ರವಾಹಕ್ಕೆ 71 ಮಂದಿ ಸಾವು! 

ಮಹಾರಾಷ್ಟ್ರದಲ್ಲಿ ಸುರಿಯುತ್ತಿರುವ ಧಾರಾಕಾರವಾಗಿ ಭೂಕುಸಿತ ಹಾಗೂ ಗುಡ್ಡಗಳ ಕುಸಿತ ಉಂಟಾಗಿದ್ದು ಕನಿಷ್ಟ 71 ಗ್ರಾಮಸ್ಥರು ಸಾವನ್ನಪ್ಪಿದ್ದಾರೆ.
ಮಳೆಯ ಪರಿಣಾಮ ರಸ್ತೆಗಳು ಹಾನಿಗೀಡಾಗಿರುವುದು
ಮಳೆಯ ಪರಿಣಾಮ ರಸ್ತೆಗಳು ಹಾನಿಗೀಡಾಗಿರುವುದು

ಮುಂಬೈ: ಮಹಾರಾಷ್ಟ್ರದಲ್ಲಿ ಸುರಿಯುತ್ತಿರುವ ಧಾರಾಕಾರವಾಗಿ ಭೂಕುಸಿತ ಹಾಗೂ ಗುಡ್ಡಗಳ ಕುಸಿತ ಉಂಟಾಗಿದ್ದು ಕನಿಷ್ಟ 71 ಗ್ರಾಮಸ್ಥರು ಸಾವನ್ನಪ್ಪಿದ್ದಾರೆ. ರಾಯ್ ಗಢ, ರತ್ನಗಿರಿ, ಸತಾರ ಜಿಲ್ಲೆಗಳಲ್ಲಿ ಈ ಅನಾಹುತ ಸಂಭವಿಸಿದೆ. 

ತಲಿಯಾ ಗ್ರಾಮದಲ್ಲಿ ಸಂಭವಿಸಿದ ಭೂ ಕುಸಿತಕ್ಕೆ 38 ಮಂದಿ, ಪೊಲಾದ್ ಪುರದಲ್ಲಿ 11 (ಎರಡೂ ರಾಯ್ ಗಢ ಜಿಲ್ಲೆ) ಸತಾರ ಜಿಲ್ಲೆಯಲ್ಲಿ 14 ಹಾಗೂ ಚಿಪ್ಲುನ್ ನಲ್ಲಿ 8 ಮಂದಿ ಕಳೆದ 2 ದಿನಗಳಲ್ಲಿ ಸಾವನ್ನಪ್ಪಿದ್ದಾರೆ. ರಾಯ್ ಗಢ ಜಿಲ್ಲೆಯ ಉಸ್ತುವಾರಿ ಸಚಿವ ಅದಿತಿ ತಾತ್ಕರೆ, ಮಹದ್ ನ ತಹಿಲೆ ಗ್ರಾಮಕ್ಕೆ ಭೇಟಿ ನೀಡಿದ್ದು, ಈ ಭಾಗದಲ್ಲಿ ಕಳೆದ ಕೆಲವು ದಿನಗಳಿಂದ ಮಳೆಯಾಗಿರುವ ದಾಖಲೆ ಇಲ್ಲ ಎಂದು ಹೇಳಿದ್ದಾರೆ. 

ಗುಡ್ಡಗಾಡು ಪ್ರದೇಶದಲ್ಲಿ ವಾಸಿಸುತ್ತಿದ್ದವರು ಗುರುವಾರ ರಾತ್ರಿ ಸಂಭವಿಸಿದ ಗುಡ್ಡ ಕುಸಿತಕ್ಕೆ ಬಲಿಯಾಗಿದ್ದಾರೆ. ಗ್ರಾಮದ ಬಹುತೇಕ ಭಾಗ ಭೂಕುಸಿತ ಹಾಗೂ ಪ್ರವಾಹಕ್ಕೆ ಕೊಚ್ಚಿ ಹೋಗಿದೆ. ರಕ್ಷಣಾ ಕಾರ್ಯಾಚರಣೆ ಸಮರೋಪಾದಿಯಲ್ಲಿ ನಡೆಯುತ್ತಿದೆ ಎಂದು ತಾತ್ಕರೆ ಹೇಳಿದ್ದಾರೆ.
 
ಬೆಳಿಗ್ಗೆಯಿಂದಲೂ ಪರಿಸ್ಥಿತಿಯ ಬಗ್ಗೆ ಸಿಎಂ ಉದ್ಧವ್ ಠಾಕ್ರೆ ಮಾಹಿತಿ ಪಡೆಯುತ್ತಿದ್ದು, ಮಳೆ ಹಾಗೂ ಪ್ರವಾಹದಿಂದಾಗಿ ಸಂಭವಿಸಿರುವ ನಷ್ಟದ ಪ್ರಮಾಣ ಈಗಲೇ ಅಂದಾಜಿಗೆ ಸಿಗುತ್ತಿಲ್ಲ ಎಂದು ಹೇಳಿದ್ದಾರೆ. "ಪ್ರಧಾನಿ ನರೇಂದ್ರ ಮೋದಿ ನನ್ನೊಂದಿಗೆ ಮಾತನಾಡಿದ್ದು, ಪರಿಸ್ಥಿತಿ ಎದುರಿಸಲು ಎಲ್ಲಾ ರೀತಿಯ ನೆರವು ನೀಡುವುದಾಗಿ ಭರವಸೆ ನೀಡಿದ್ದಾರೆ" ಎಂದು ಉದ್ಧವ್ ಠಾಕ್ರೆ ಹೇಳಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com