ಇಸ್ರೋ ಬೇಹುಗಾರಿಕೆ ಪ್ರಕರಣ: ಮಾಜಿ ಪೊಲೀಸ್ ಅಧಿಕಾರಿಗಳಿಗೆ ಕೇರಳ ಹೈಕೋರ್ಟ್ ನಿಂದ ಜಾಮೀನು
ಇಸ್ರೋ ಬೇಹುಗಾರಿಕೆ ಪ್ರಕರಣದಲ್ಲಿ ಕ್ರಮವಾಗಿ ಮೊದಲ ಮತ್ತು ಎರಡನೆಯ ಆರೋಪಿಗಳಾದ ಕೇರಳದ ಮಾಜಿ ಪೊಲೀಸ್
ಅಧಿಕಾರಿಗಳಾದ ಎಸ್ ವಿಜಯನ್ ಮತ್ತು ಥಾಂಪಿ ಎಸ್ ದುರ್ಗಾ ದತ್ ಅವರಿಗೆ ಕೇರಳ ಹೈಕೋರ್ಟ್....
Published: 26th July 2021 02:13 PM | Last Updated: 26th July 2021 02:13 PM | A+A A-

ಕೇರಳ ಉಚ್ಛ ನ್ಯಾಯಾಲಯ
ಕೊಚ್ಚಿ: ಇಸ್ರೋ ಬೇಹುಗಾರಿಕೆ ಪ್ರಕರಣದಲ್ಲಿ ಕ್ರಮವಾಗಿ ಮೊದಲ ಮತ್ತು ಎರಡನೆಯ ಆರೋಪಿಗಳಾದ ಕೇರಳದ ಮಾಜಿ ಪೊಲೀಸ್
ಅಧಿಕಾರಿಗಳಾದ ಎಸ್ ವಿಜಯನ್ ಮತ್ತು ಥಾಂಪಿ ಎಸ್ ದುರ್ಗಾ ದತ್ ಅವರಿಗೆ ಕೇರಳ ಹೈಕೋರ್ಟ್ ಸೋಮವಾರ ಮಧ್ಯಂತರ ಜಾಮೀನು ನೀಡಿದೆ.
ಇಬ್ಬರು ಮಾಜಿ ಪೊಲೀಸ್ ಅಧಿಕಾರಿಗಳು ಸಲ್ಲಿಸಿದ ನಿರೀಕ್ಷಣಾ ಜಾಮೀನು ಅರ್ಜಿಯ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಅಶೋಕ್ ಮೆನನ್ ಅವರು ಮಧ್ಯಂತರ ಜಾಮೀನು ಆದೇಶ ನೀಡಿದ್ದಾರೆ.
50 ಸಾವಿರ ರೂ. ಬಾಂಡ್ ಹಾಗೂ ಇಬ್ಬರ ಸ್ಯೂರಿಟಿ ಮೇಲೆ ಆರೋಪಿಗಳನ್ನು ಬಿಡುಗಡೆ ಮಾಡುವಂತೆ ಕೋರ್ಟ್ ಆದೇಶಿಸಿದೆ. ಆದಾಗ್ಯೂ, ಅರ್ಜಿದಾರರು ತನಿಖೆಗೆ ಸಹಕರಿಸಬೇಕು ಎಂದು ನ್ಯಾಯಾಲಯ ಸೂಚಿಸಿದೆ.
ಬೇಹುಗಾರಿಕೆ ಪ್ರಕರಣದಲ್ಲಿ ನಂಬಿ ನಾರಾಯಣನ್ ಅವರ ಬಂಧನಕ್ಕೆ ಸಂಬಂಧಿಸಿದಂತೆ ಎಸ್ ವಿಜಯನ್ ಮತ್ತು ಥಾಂಪಿ ಎಸ್ ದುರ್ಗಾ ದತ್ ಸೇರಿದಂತೆ 18 ಜನರ ವಿರುದ್ಧ ಸಿಬಿಐ ಪ್ರಕರಣ ದಾಖಲಿಸಿದೆ. ಇದಕ್ಕೆ ಸಂಬಂಧಿಸಿದಂತೆ ನಿರೀಕ್ಷಣಾ ಜಾಮೀನಿಗಾಗಿ ಅರ್ಜಿ ಸಲ್ಲಿಸಿದ್ದರು.