ಅಸ್ಸಾಂ- ಮಿಜೋರಾಂ ಗಡಿಯಲ್ಲಿ ನಾಲ್ಕು ಸಿಆರ್ ಪಿಎಫ್ ತುಕಡಿಗಳ ನಿಯೋಜನೆ

ಅಸ್ಸಾಂ- ಮಿಜೋರಾಂ ಗಡಿಯ ವಿವಾದಿತ ಪ್ರದೇಶದಲ್ಲಿ ನಾಲ್ಕು ಹೆಚ್ಚುವರಿ ಕೇಂದ್ರಿಯ ಮೀಸಲು ಪೊಲೀಸ್ ಪಡೆ (ಸಿಆರ್ ಪಿಎಫ್) ತುಕಡಿಗಳನ್ನು ನಿಯೋಜಿಸಲಾಗಿದೆ. ನಿನ್ನೆ ಇಲ್ಲಿ ಉಭಯ ರಾಜ್ಯಗಳ ಪೊಲೀಸರ ನಡುವೆ ಸಂಭವಿಸಿದ ಗುಂಡಿನ ಕಾಳಗದಲ್ಲಿ ಐವರು ಅಸ್ಸಾಂ ಪೊಲೀಸರು ಮೃತಪಟ್ಟಿದ್ದರು.
ಉದ್ವಿಗ್ನತೆ ಉಂಟಾಗಿದ್ದ ಅಸ್ಸಾಂ- ಮಿಜೋರಾಂ ವಿವಾದಿತ ಗಡಿ ಪ್ರದೇಶ
ಉದ್ವಿಗ್ನತೆ ಉಂಟಾಗಿದ್ದ ಅಸ್ಸಾಂ- ಮಿಜೋರಾಂ ವಿವಾದಿತ ಗಡಿ ಪ್ರದೇಶ

ಗುವಾಹಟಿ: ಅಸ್ಸಾಂ- ಮಿಜೋರಾಂ ಗಡಿಯ ವಿವಾದಿತ ಪ್ರದೇಶದಲ್ಲಿ ನಾಲ್ಕು ಹೆಚ್ಚುವರಿ ಕೇಂದ್ರಿಯ ಮೀಸಲು ಪೊಲೀಸ್ ಪಡೆ (ಸಿಆರ್ ಪಿಎಫ್) ತುಕಡಿಗಳನ್ನು ನಿಯೋಜಿಸಲಾಗಿದೆ. ನಿನ್ನೆ ಇಲ್ಲಿ ಉಭಯ ರಾಜ್ಯಗಳ ಪೊಲೀಸರ ನಡುವೆ ಸಂಭವಿಸಿದ ಗುಂಡಿನ ಕಾಳಗದಲ್ಲಿ ಐವರು ಅಸ್ಸಾಂ ಪೊಲೀಸರು ಮೃತಪಟ್ಟಿದ್ದರು. ಪರಿಸ್ಥಿತಿ ಸದ್ಯ ನಿಯಂತ್ರಣದಲ್ಲಿದ್ದು, ಶಾಂತಿಯುತವಾಗಿದೆ ಎಂದು ಸಿಆರ್ ಪಿಎಫ್ ಮಹಾನಿರ್ದೇಶಕ ಕುಲದೀಪ್ ಸಿಂಗ್ ತಿಳಿಸಿದ್ದಾರೆ.

ವಿವಾದಿತ ಗಡಿ ಪ್ರದೇಶದ ಬಗ್ಗೆ ನಿನ್ನೆ ಉಭಯ ರಾಜ್ಯಗಳ ಪೊಲೀಸರ ನಡುವೆ ಘರ್ಷಣೆ ನಡೆದು ಉದ್ವಿಗ್ನತೆ ಉಂಟಾಗಿತ್ತು. ಸಿಆರ್ ಪಿಎಫ್ ಪಡೆಗಳ ಮಧ್ಯ ಪ್ರವೇಶದಿಂದ ಪರಿಸ್ಥಿತಿ ತಹಬದಿಗೆ ಬಂದಿದೆ ಎಂದು ಸಿಂಗ್ ಹೇಳಿರುವುದಾಗಿ ಎಎನ್ ಐ ಸುದ್ದಿಸಂಸ್ಥೆ ವರದಿ ಮಾಡಿದೆ. ಈಗಾಗಲೇ ಎರಡು ಸಿಆರ್ ಪಿಎಫ್ ತುಕಡಿಗಳು ಅಲ್ಲಿದ್ದು,  ಹಿರಿಯ ಅಧಿಕಾರಿಗಳು ಸಹ ಅಲ್ಲಿದ್ದಾರೆ. ಸದ್ಯ ಪರಿಸ್ಥಿತಿ ಶಾಂತಯುತವಾಗಿದೆ ಎಂದು ಅವರು ತಿಳಿಸಿದ್ದಾರೆ.

ಅಸ್ಸಾಂ ಪೊಲೀಸರು ವಿವಾದಿತ ಪ್ರದೇಶದಿಂದ ಹಿಂದೆ ಸರಿದಿದ್ದಾರೆ ಎಂದು ಸಿಆರ್‌ಪಿಎಫ್ ಡಿಜಿ ಹೇಳಿದ್ದಾರೆ, ಆದಾಗ್ಯೂ, ಮಿಜೋರಾಂ ಪೊಲೀಸರು ತಮ್ಮ ತಾತ್ಕಾಲಿಕ ತಾಣಗಳಲ್ಲಿ ತಂಗಿದ್ದಾರೆ ಎಂದು ಸಿಆರ್ ಪಿಎಫ್ ಮಹಾನಿರ್ದೇಶಕ ಮಾಹಿತಿ ನೀಡಿದ್ದಾರೆ. 

ಅಸ್ಸಾಂ ಮತ್ತು ಮಿಜೋರಾಂ ರಾಜ್ಯಗಳ ಪೊಲೀಸರು ಗುಂಡು ಹಾರಿಸಿದ್ದರಿಂದ ಐವರು ಅಸ್ಸಾಂ ಪೊಲೀಸರು ಸಾವನ್ನಪ್ಪಿದ್ದಂತೆ ಉದ್ವಿಗ್ನತೆವೇರ್ಪಟ್ಟಿದ ನಂತರ ಈ ಬೆಳವಣಿಗೆ ನಡೆದಿತ್ತು. ಈ ಮಧ್ಯೆ, ಕೇಂದ್ರ ಗೃಹ ಕಾರ್ಯದರ್ಶಿ ಅಜಯ್ ಬಲ್ಲಾ ಬುಧವಾರ ಅಸ್ಸಾಂ ಮತ್ತು ಮಿಜೋರಾಂ ರಾಜ್ಯಗಳ ಮುಖ್ಯ ಕಾರ್ಯದರ್ಶಿಗಳೊಂದಿಗೆ ಸಭೆ ನಡೆಸಲಿದ್ದಾರೆ ಎಂದು ಮೂಲಗಳು ತಿಳಿಸಿವೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com