ಕೋವಿಶೀಲ್ಡ್ ಎರಡು ಡೋಸ್ ವ್ಯವಸ್ಥೆ ಮುಂದುವರಿಕೆ; ಯಾವುದೇ ಸಂದರ್ಭದಲ್ಲೂ ಲಸಿಕೆಗಳ ಮಿಶ್ರಣವಿಲ್ಲ: ವಿಕೆ ಪೌಲ್

ಕೋವಿಶೀಲ್ಡ್ ಲಸಿಕೆಯ ಎರಡನೇ ಡೋಸ್ ನ್ನು ಸರ್ಕಾರ ಸಂಪೂರ್ಣವಾಗಿ ತೆಗೆದುಹಾಕಬಹುದು ಎಂಬ ಗೊಂದಲದ ನಡುವೆ ಪ್ರಸ್ತುತದಲ್ಲಿರುವ ಡೋಸಿಂಗ್ ಕಾರ್ಯಾಚರಣೆ ವಿಧಾನದಲ್ಲಿ ಯಾವುದೇ ಬದಲಾವಣೆಗಳಿಲ್ಲ ಎಂದು ಕೇಂದ್ರ ಸರ್ಕಾರ ಮಂಗಳವಾರ ಸ್ಪಷ್ಟಪಡಿಸಿದೆ.
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ
Updated on

ನವದೆಹಲಿ: ಕೋವಿಶೀಲ್ಡ್ ಲಸಿಕೆಯ ಎರಡನೇ ಡೋಸ್ ನ್ನು ಸರ್ಕಾರ ಸಂಪೂರ್ಣವಾಗಿ ತೆಗೆದುಹಾಕಬಹುದು ಎಂಬ ಗೊಂದಲದ ನಡುವೆ ಪ್ರಸ್ತುತದಲ್ಲಿರುವ ಡೋಸಿಂಗ್ ಕಾರ್ಯಾಚರಣೆ ವಿಧಾನದಲ್ಲಿ ಯಾವುದೇ ಬದಲಾವಣೆಗಳಿಲ್ಲ ಎಂದು ಕೇಂದ್ರ ಸರ್ಕಾರ ಮಂಗಳವಾರ ಸ್ಪಷ್ಟಪಡಿಸಿದೆ. ಅಲ್ಲದೇ, ಮುಂದಿನ ದಿನಗಳಲ್ಲಿ ಲಸಿಕೆಗಳ ಮಿಶ್ರಣದ ಸಾಧ್ಯತೆ ಇಲ್ಲ ಎಂದು ಹೇಳಿದೆ.

ಯಾವುದೇ ಗೊಂದಲ ಮತ್ತು ತಪ್ಪು ತಿಳುವಳಿಕೆ ಇಲ್ಲ ಆದರೆ, ಕೋವಿಶೀಲ್ಡ್ ಲಸಿಕೆಯ ಎರಡು ಡೋಸ್ ಗಳ ನಡುವಣ
12 ವಾರಗಳ ವಿರಾಮವಿರಲಿದೆ. ಪ್ರತಿಯೊಬ್ಬರು ಎರಡು ಡೋಸ್ ಕೋವಿಶೀಲ್ಡ್ ಲಸಿಕೆ ಪಡೆದುಕೊಳ್ಳಲಿದ್ದಾರೆ ಎಂದು ನೀತಿ ಆಯೋಗದ ಸದಸ್ಯ ಹಾಗೂ ರಾಷ್ಟ್ರೀಯ ಕೋವಿಡ್ ಕಾರ್ಯಪಡೆ ಅಧ್ಯಕ್ಷ ವಿಕೆ ಪೌಲ್ ಹೇಳಿದ್ದಾರೆ.

ದೇಶದಲ್ಲಿನ ಕೋವಿಡ್ ಪರಿಸ್ಥಿತಿ ಕುರಿತಂತೆ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು,ಬೇರೆ ಬೇರೆ ಕೋವಿಡ್ ಲಸಿಕೆಗಳ
ಬೆರೆಸುವಿಕೆ ಕಾರ್ಯವಿಧಾನ ವಿಶ್ವದಲ್ಲಿಯೇ ಎಲ್ಲಿಯೂ ಇಲ್ಲ. ಇದು ಬಗೆಹರಿಸಲಾಗದ ವೈಜ್ಞಾನಿಕ ಪ್ರಶ್ನೆಯಾಗಿ ಉಳಿದಿದೆ, ಸಂಶೋಧನೆಯಿಂದ ಮಾತ್ರ ಅದು ಬಗೆಹರಿಯಲಿದೆ ಎಂದರು.

ಲಸಿಕೆ ಬೆರೆಸುವುದರಿಂದ ಆಗುವ ಪರಿಣಾಮಗಳ ಬಗ್ಗೆ ಅಂತಾರಾಷ್ಟ್ರೀಯ ಮಟ್ಟದಲ್ಲಿ ಸಂಶೋಧನೆಗಳು ನಡೆಯುತ್ತಿವೆ. ಅದರಿಂದ ಸಕಾರಾತ್ಮಕ ಪರಿಣಾಮ ಸಾಧ್ಯವಾಗಬಹುದು, ಅದರೊಂದಿಗೆ ಅಡ್ಡ ಪರಿಣಾಮಗಳನ್ನೂ ತಳ್ಳಿ ಹಾಕುವಂತಿಲ್ಲ. ಆ ಬಗ್ಗೆ ಸಂಶೋಧನೆಗಳಿಂದಲೇ ಉತ್ತರ ದೊರೆಯಬೇಕು. ಪ್ರಸ್ತುತ ಕೋವಾಕ್ಸಿನ್ ಮತ್ತು ಕೋವಿಶೀಲ್ಡ್ ನ ಎರಡೂ ಡೋಸ್ ಗಳನ್ನು ಪಡೆಯಬೇಕಾಗುತ್ತದೆ ಎಂದರು.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com