ಉಪ ರಾಷ್ಟ್ರಪತಿ ಎಂ. ವೆಂಕಯ್ಯ ನಾಯ್ಡು ಅವರ ಖಾತೆಯಿಂದ ಬ್ಲೂ ಟಿಕ್ ಮಾರ್ಕ್ ತೆಗೆದು ಮತ್ತೆ ಕೊಟ್ಟ ಟ್ವಿಟ್ಟರ್!
ಉಪ ರಾಷ್ಟ್ರಪತಿ ಎಂ ವೆಂಕಯ್ಯ ನಾಯ್ಡು ಅವರ ವೈಯಕ್ತಿಕ ಟ್ವಿಟ್ಟರ್ ಖಾತೆಯಿಂದ ಬೆಳಗ್ಗೆ ನೀಲಿ ಬಣ್ಣದ ಟಿಕ್ ಮಾರ್ಕ್ ತೆಗೆದಿದ್ದ ಟ್ವಿಟ್ಟರ್ ಈಗ ಮರು ನೀಡಿದೆ.
Published: 05th June 2021 11:37 AM | Last Updated: 05th June 2021 01:59 PM | A+A A-

ಎಂ ವೆಂಕಯ್ಯ ನಾಯ್ಡು
ನವದೆಹಲಿ: ಉಪ ರಾಷ್ಟ್ರಪತಿ ಎಂ. ವೆಂಕಯ್ಯ ನಾಯ್ಡು ಅವರ ವೈಯಕ್ತಿಕ ಟ್ವಿಟ್ಟರ್ ಖಾತೆಯಿಂದ ಬೆಳಗ್ಗೆ ನೀಲಿ ಬಣ್ಣದ ಟಿಕ್ ಮಾರ್ಕ್ ತೆಗೆದಿದ್ದ ಟ್ವಿಟ್ಟರ್ ಈಗ ಮರು ನೀಡಿದೆ.
ವೆಂಕಯ್ಯ ನಾಯ್ಡು ಅವರ ಅಧಿಕೃತ ಟ್ವಿಟ್ಟರ್ ಖಾತೆ ಕಳೆದ ವರ್ಷ 2020 ಜುಲೈ ನಂತರ ನಿಷ್ಕ್ರಿಯವಾಗಿತ್ತು. ಖಾತೆ ನಿಷ್ಕ್ರಿಯವಾದರೆ ಸಾಮಾನ್ಯವಾಗಿ ಟ್ವಿಟ್ಟರ್ ಸಂಸ್ಥೆ ನೀಲಿ ಬ್ಯಾಡ್ಜ್ ಮತ್ತು ವೆರಿಫೈಡ್ ಸ್ಟೇಟಸ್ ನ್ನು ತೆಗೆದುಹಾಕುತ್ತದೆ.
ಇದೀಗ ಉಪ ರಾಷ್ಟ್ರಪತಿಗಳ ಬ್ಲೂ ಟಿಕ್ ಮಾರ್ಕ್ ನ್ನು ಮತ್ತೆ ನೀಡಲಾಗಿದೆ. ಎಂದು ಟ್ವಿಟ್ಟರ್ ಸ್ಪಾಕ್ಸ್ ಹೇಳಿದೆ.
Always been a strong and vocal admirer of Chhatrapati Shivaji Maharaj and worshipper of Goddess Bhawani.
— M Venkaiah Naidu (@MVenkaiahNaidu) July 23, 2020
Reminded Members that as per conventional practice at the time of taking oath, no slogans are given.
No disrespect at all.