ಕೋವಿಡ್-19 ಸಾಂಕ್ರಾಮಿಕ ಅವಧಿಯಲ್ಲಿ ಮಾಡಿದ ಪರಿಹಾರ ಕಾರ್ಯಗಳ ಬಗ್ಗೆ ವಿವರ ನೀಡಿ: ಸಂಸದರಿಗೆ ಸ್ಪೀಕರ್

ಕೋವಿಡ್-19 ಸಾಂಕ್ರಾಮಿಕದ ಅವಧಿಯಲ್ಲಿ ಕ್ಷೇತ್ರಗಳಲ್ಲಿ ಮಾಡಿರುವ ಪರಿಹಾರ ಕಾರ್ಯಗಳ ಬಗ್ಗೆ ವಿವರ ಮಾಹಿತಿಯನ್ನು ಹಂಚಿಕೊಳ್ಳುವುದಕ್ಕೆ ಸಂಸದರಿಗೆ ಲೋಕಸಭಾ ಸ್ಪೀಕರ್ ಓಂ ಬಿರ್ಲಾ ಸಲಹೆ ನೀಡಿದ್ದಾರೆ. 
ಸ್ಪೀಕರ್ ಓಂ ಪ್ರಕಾಶ್ ಬಿರ್ಲಾ
ಸ್ಪೀಕರ್ ಓಂ ಪ್ರಕಾಶ್ ಬಿರ್ಲಾ

ನವದೆಹಲಿ: ಕೋವಿಡ್-19 ಸಾಂಕ್ರಾಮಿಕದ ಅವಧಿಯಲ್ಲಿ ಕ್ಷೇತ್ರಗಳಲ್ಲಿ ಮಾಡಿರುವ ಪರಿಹಾರ ಕಾರ್ಯಗಳ ಬಗ್ಗೆ ವಿವರ ಮಾಹಿತಿಯನ್ನು ಹಂಚಿಕೊಳ್ಳುವುದಕ್ಕೆ ಸಂಸದರಿಗೆ ಲೋಕಸಭಾ ಸ್ಪೀಕರ್ ಓಂ ಬಿರ್ಲಾ ಸಲಹೆ ನೀಡಿದ್ದಾರೆ. 

ಸಂಸದರು ನೀಡುವ ಮಾಹಿತಿಯನ್ನು ಕೋವಿಡ್-19 ನ್ನು ಎದುರಿಸುವುದಕ್ಕೆ ರಾಷ್ಟ್ರವ್ಯಾಪಿ ಅತ್ಯುತ್ತಮವಾದುದ್ದನ್ನು ಅಳವಡಿಸಿಕೊಳ್ಳುವುದಕ್ಕೆ ಸಹಕಾರಿಯಾಗಲಿದೆ ಎಂದು ಓಂ ಬಿರ್ಲಾ ಹೇಳಿದ್ದಾರೆ. 

ಈ ಸಂಬಂಧ ಎಲ್ಲಾ ಸಂಸದರಿಗೂ ಪತ್ರ ಬರೆದಿರುವ ಓಂ ಬಿರ್ಲಾ ಸಾರ್ವಜನಿಕ ಪ್ರತಿನಿಧಿಗಳಾಗಿ, ಈ ರೀತಿಯ ಸಂಕಷ್ಟದ ಪರಿಸ್ಥಿತಿಯಲ್ಲಿ ಜನರೊಂದಿಗೆ ನಿಲ್ಲುವುದು ಪ್ರತಿ ವಿಷಯದಲ್ಲಿ ಸಹಕರಿಸುವುದು ಕರ್ತವ್ಯವಾಗಿದೆ.  

"ಜನರ ಸಂಕಷ್ಟಕ್ಕೆ ಸ್ಪಂದಿಸುವುದಕ್ಕಾಗಿ ನೀವು ನಿಮ್ಮ ಹೆಚ್ಚಿನ ಸಮಯವನ್ನು ಕಳೆದಿದ್ದೀರಿ ಎಂದು ನಂಬಿದ್ದೇನೆ. ಜನರಿಗೆ ಮನೋಸ್ಥೈರ್ಯ ತುಂಬುವುದಷ್ಟೇ ಅಲ್ಲದೇ,  ಜನರ ಸಂಕಷ್ಟಗಳನ್ನು ಪರಿಹರಿಸುವುದಕ್ಕೆ ಶ್ರಮಿಸಿದ್ದೀರಿ" ಎಂದು ಪತ್ರದಲ್ಲಿ ಸಂಸದರಿಗೆ ಓಂ ಬಿರ್ಲಾ ಸಂದೇಶ ನೀಡಿದ್ದಾರೆ. 

ನಿಮ್ಮ ಕ್ಷೇತ್ರಗಳಲ್ಲಿ ನೀವು ಮಾಡಿರುವ ಕೆಲಸಗಳ ಬಗ್ಗೆ ಮಾಹಿತಿ ಹಂಚಿಕೊಳ್ಳುವುದು ಈಗಿನ ತುರ್ತು ಅವಶ್ಯಕತೆಯಾಗಿದ್ದು, ಇದು ಕೋವಿಡ್-19 ನ್ನು ಎದುರಿಸುವುದಕ್ಕೆ ರಾಷ್ಟ್ರವ್ಯಾಪಿ ಅತ್ಯುತ್ತಮವಾದುದ್ದನ್ನು ಅಳವಡಿಸಿಕೊಳ್ಳುವುದಕ್ಕೆ ಸಹಕಾರಿಯಾಗಲಿದೆ. 

ರಾಜಸ್ಥಾನದ ಕೋಟದ ಸಂಸದರಾಗಿರುವ ಬಿರ್ಲಾ ಕೋವಿಡ್-19 ವೈದ್ಯಕೀಯ ಹಾಗೂ ಇಂಜಿನಿಯರಿಂಗ್ ಪ್ರವೇಶ ಪಡೆಯುವ ವಿದ್ಯಾರ್ಥಿಗಳಿಗೆ ಹಾಗೂ ಕೋವಿಡ್-19 ನಿಂದ ಪೋಷಕರನ್ನು ಕಳೆದುಕೊಂಡ ವಿದ್ಯಾರ್ಥಿಗಳಿಗೆ ಉಚಿತ ಕೋಚಿಂಗ್ ನೀಡುವುದಾಗಿ ಘೋಷಿಸಿದ್ದಾರೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com