ದೇಶದಲ್ಲಿ ಕೋವಿಡ್ ವ್ಯಾಕ್ಸಿನೇಷನ್ 24 ಕೋಟಿ ಗಡಿ ದಾಟಿದೆ: ಕೇಂದ್ರ

ರಾಷ್ಟ್ರವ್ಯಾಪಿ ವ್ಯಾಕ್ಸಿನೇಷನ್ ಡ್ರೈವ್ ಅಡಿಯಲ್ಲಿ ನೀಡಲಾಗುವ ಕೋವಿಡ್ -19 ಲಸಿಕೆ ಡೋಸ್ ಗಳ ಒಟ್ಟು ಸಂಖ್ಯೆ 24 ಕೋಟಿ ಮೀರಿದೆ ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯ ಗುರುವಾರ ತಿಳಿಸಿದೆ.

Published: 10th June 2021 03:43 PM  |   Last Updated: 10th June 2021 03:43 PM   |  A+A-


Vaccination Camp

ವ್ಯಾಕ್ಸಿನೇಷನ್ ಕ್ಯಾಂಪ್

Posted By : Vishwanath S
Source : PTI

ನವದೆಹಲಿ: ರಾಷ್ಟ್ರವ್ಯಾಪಿ ವ್ಯಾಕ್ಸಿನೇಷನ್ ಡ್ರೈವ್ ಅಡಿಯಲ್ಲಿ ನೀಡಲಾಗುವ ಕೋವಿಡ್ -19 ಲಸಿಕೆ ಡೋಸ್ ಗಳ ಒಟ್ಟು ಸಂಖ್ಯೆ 24 ಕೋಟಿ ಮೀರಿದೆ ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯ ಗುರುವಾರ ತಿಳಿಸಿದೆ.

ಅಧಿಕೃತ ಪ್ರಕಟಣೆಯ ಪ್ರಕಾರ, ಕಳೆದ 24 ಗಂಟೆಗಳಲ್ಲಿ 33,79,261 ಲಸಿಕೆ ಡೋಸ್ ಗಳನ್ನು ನೀಡಲಾಗಿದೆ. ತಾತ್ಕಾಲಿಕ ವರದಿಯ ಪ್ರಕಾರ ಇಂದು ಬೆಳಿಗ್ಗೆ 7 ಗಂಟೆಯವರೆಗೆ ಒಟ್ಟು 24,27,26,693 ಲಸಿಕೆ ಡೋಸ್ ಗಳನ್ನು 33,82,775 ಸೆಷನ್‌ಗಳ ಮೂಲಕ ನೀಡಲಾಗಿದೆ ಎಂದು ಸಚಿವಾಲಯ ತಿಳಿಸಿದೆ.

ಏತನ್ಮಧ್ಯೆ, ಭಾರತದಲ್ಲಿ ಕಳೆದ 24 ಗಂಟೆಗಳಲ್ಲಿ ಹೊಸದಾಗಿ 94,052 ಕೊರೋನಾ ಪ್ರಕರಣಗಳನ್ನು ವರದಿಯಾಗಿದ್ದು, ದೇಶದಲ್ಲಿ ಸತತ ಮೂರನೇ ದಿನವೂ 1 ಲಕ್ಷಕ್ಕಿಂತ ಕಡಿಮೆ ಪ್ರಕರಣಗಳು ವರದಿಯಾಗಿವೆ.

ಭಾರತದಲ್ಲಿ ಸಕ್ರಿಯ ಪ್ರಕರಣ ಸಂಖ್ಯೆ ನಿರಂತರ ಕುಸಿತ ಕಂಡಿದ್ದು ದೇಶದ ಸಕ್ರಿಯ ಪ್ರಕರಣಗಳ ಸಂಖ್ಯೆ 11,67,952ಕ್ಕೆ ಇಳಿದಿದೆ. ಸತತ ಹತ್ತು ದಿನಗಳಿಂದ ಸಕ್ರಿಯ ಪ್ರಕರಣಗಳ ಸಂಖ್ಯೆಯನ್ನು 20 ಲಕ್ಷಕ್ಕಿಂತ ಕಡಿಮೆ ನಿರ್ವಹಿಸಲಾಗಿದೆ. ಕಳೆದ 24 ಗಂಟೆಗಳಲ್ಲಿ ಸಕ್ರಿಯತೆ ಸಂಖ್ಯೆ 63,463 ಕಡಿಮೆಯಾಗಿದೆ. ಇನ್ನು ದೇಶದಲ್ಲಿ ಒಟ್ಟು ಸಕಾರಾತ್ಮಕ ಪ್ರಕರಣಗಳಲ್ಲಿ ಕೇವಲ 4 ಪ್ರತಿಶತದಷ್ಟಿವೆ ಎಂದು ಅಧಿಕೃತ ಹೇಳಿಕೆ ತಿಳಿಸಿದೆ.

ಕಳೆದ 24 ಗಂಟೆಗಳಲ್ಲಿ 1,51,367 ಮಂದಿ ಚೇತರಿಸಿಕೊಂಡಿದ್ದಾರೆ. ಅಧಿಕೃತ ಮಾಹಿತಿಯ ಪ್ರಕಾರ, ಸಾಂಕ್ರಾಮಿಕ ರೋಗದ ಪ್ರಾರಂಭದಿಂದಲೂ ಒಟ್ಟಾರೆ 2,76,55,493 ಮಂದಿ ಚೇತರಿಸಿಕೊಂಡಿದ್ದಾರೆ. 


Stay up to date on all the latest ರಾಷ್ಟ್ರೀಯ news
Poll
Yediyurappa

ಯಡಿಯೂರಪ್ಪ ಅವರು ಕರ್ನಾಟಕದ ಮುಖ್ಯಮಂತ್ರಿಯಾಗಿ ತಮ್ಮ ಅವಧಿಯನ್ನು ಪೂರ್ಣಗೊಳಿಸಲು ಸಾಧ್ಯವಾಗುವುದೇ?


Result
ಹೌದು
ಇಲ್ಲ
flipboard facebook twitter whatsapp