ಛತ್ತೀಸ್ ಗಢ: 25 ಪ್ರಕರಣಗಳಲ್ಲಿ ಬೇಕಿದ್ದ ನಕ್ಸಲ್ ಎನ್ ಕೌಂಟರ್ ನಲ್ಲಿ ಹತ್ಯೆ 

25 ಕ್ರಿಮಿನಲ್ ಪ್ರಕರಣಗಳಿದ್ದ,  ತಲೆಗೆ 5 ಲಕ್ಷ ರೂಪಾಯಿ ಬಹುಮಾನಗಳನ್ನು ಹೊಂದಿದ್ದ ನಕ್ಸಲ್ ಓರ್ವನನ್ನು ಛತ್ತೀಸ್ ಗಢದಲ್ಲಿ ಭದ್ರತಾ ಸಿಬ್ಬಂದಿಗಳು ಎನ್ ಕೌಂಟರ್ ನಲ್ಲಿ ಹತ್ಯೆ ಮಾಡಿದ್ದಾರೆ. 
ಮಾವೋವಾದಿಗಳು
ಮಾವೋವಾದಿಗಳು

ರಾಯ್ ಪುರ: 25 ಕ್ರಿಮಿನಲ್ ಪ್ರಕರಣಗಳಿದ್ದ,  ತಲೆಗೆ 5 ಲಕ್ಷ ರೂಪಾಯಿ ಬಹುಮಾನಗಳನ್ನು ಹೊಂದಿದ್ದ ನಕ್ಸಲ್ ಓರ್ವನನ್ನು ಛತ್ತೀಸ್ ಗಢದಲ್ಲಿ ಭದ್ರತಾ ಸಿಬ್ಬಂದಿಗಳು ಎನ್ ಕೌಂಟರ್ ನಲ್ಲಿ ಹತ್ಯೆ ಮಾಡಿದ್ದಾರೆ. 

ದಾಂತೇವಾಡದಲ್ಲಿ ಈ ಘಟನೆ ನಡೆದಿದ್ದು, ಮಧ್ಯಾಹ್ನ 12:30 ಕ್ಕೆ ಗುಂಡಿನ ಚಕಮಕಿ ನಡೆದಿದೆ. ನಕ್ಸಲ್ ನಿಗ್ರಹ ಕಾರ್ಯಾಚರಣೆ ವೇಳೆ ನಕ್ಸಲರಿಂದ ಭದ್ರತಾ ಪಡೆಗಳ ಮೇಲೆ ಗುಂಡಿನ ದಾಳಿ ನಡೆದಿದ್ದು, ಭದ್ರತಾ ಸಿಬ್ಬಂದಿಗಳು ಪ್ರತಿ ದಾಳಿ ನಡೆಸಿದ್ದಾರೆ. 

ಕೆಲವು ಮಂದಿ ನಕ್ಸಲರು ಸ್ಥಳದಿಂದ ಪಲಾಯನ ಮಾಡಿ ದಟ್ಟ ಅರಣ್ಯ ಸೇರಿದ್ದಾರೆ. ಶೋಧ ಕಾರ್ಯಾಚರಣೆ ವೇಳೆ ಭದ್ರತಾ ಸಿಬ್ಬಂದಿಗಳು ನಕ್ಸಲರೊಬ್ಬರ ಮೃತದೇಹವನ್ನು ವಶಕ್ಕೆ ಪಡೆದಿದ್ದು, ಪಿಸ್ತೋಲ್ ಹಾಗೂ ಇನ್ನಿತರ ವಸ್ತುಗಳನ್ನು ವಶಕ್ಕೆ ಪಡೆದಿದ್ದಾರೆ. 

ಮೃತ ನಕ್ಸಲ್ ನ್ನು ಸಂತೋಶ್ ಮರ್ಕಮ್ ಎಂದು ಗುರುತಿಸಲಾಗಿದ್ದು, ಮಲಂಗಿರ್ ಪ್ರದೇಶ ಸಮಿತಿಯ ಸದಸ್ಯ ಎಂದು ತಿಳಿದುಬಂದಿದೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com