ಜಪಾನ್ ಸೊಸೈಟಿ ಆಫ್ ಸಿವಿಲ್ ಎಂಜಿನಿಯರ್ಸ್ ಪ್ರಶಸ್ತಿ ಪಡೆದ ದೆಹಲಿ ಮೆಟ್ರೋ

ದೆಹಲಿ ಮೆಟ್ರೋ ಜಪಾನ್ ಸೊಸೈಟಿ ಆಫ್ ಸಿವಿಲ್ ಎಂಜಿನಿಯರ್‌ಗಳಿಂದ 'ಉತ್ತಮ ಗುಣಮಟ್ಟದ' ಮೂಲಸೌಕರ್ಯ ಅಭಿವೃದ್ಧಿ ಯೋಜನೆಗಳಿಗಾಗಿ ಪ್ರಶಸ್ತಿಯನ್ನು ಪಡೆದುಕೊಂಡಿದೆ ಎಂದು ಅಧಿಕಾರಿಗಳು ಭಾನುವಾರ ತಿಳಿಸಿದ್ದಾರೆ.
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ

ನವದೆಹಲಿ: ದೆಹಲಿ ಮೆಟ್ರೋ ಜಪಾನ್ ಸೊಸೈಟಿ ಆಫ್ ಸಿವಿಲ್ ಎಂಜಿನಿಯರ್‌ಗಳಿಂದ 'ಉತ್ತಮ ಗುಣಮಟ್ಟದ' ಮೂಲಸೌಕರ್ಯ ಅಭಿವೃದ್ಧಿ ಯೋಜನೆಗಳಿಗಾಗಿ ಪ್ರಶಸ್ತಿಯನ್ನು ಪಡೆದುಕೊಂಡಿದೆ ಎಂದು ಅಧಿಕಾರಿಗಳು ಭಾನುವಾರ ತಿಳಿಸಿದ್ದಾರೆ.

ದೆಹಲಿ ಮೆಟ್ರೋ 2020ರ ಅತ್ಯುತ್ತಮ ಸಿವಿಲ್ ಎಂಜಿನಿಯರಿಂಗ್ ಸಾಧನೆ ಪ್ರಶಸ್ತಿ ಪಡೆದುಕೊಂಡಿದೆ. ವಿಶ್ವದಾದ್ಯಂತ ಸಿವಿಲ್ ಎಂಜಿನಿಯರಿಂಗ್ ತಂತ್ರಜ್ಞಾನದ ಅಭಿವೃದ್ಧಿಯಲ್ಲಿ ಹೆಚ್ಚು ಆಯ್ದ ಪ್ರದರ್ಶನ ಯೋಜನೆಗಳಿಗೆ ಈ ಪ್ರಶಸ್ತಿಯನ್ನು ನೀಡಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

'ದೆಹಲಿ ಮೆಟ್ರೊದ ಮೊದಲ, ಎರಡನೇ ಹಾಗೂ ಮೂರನೇ ಹಂತದ ಯೋಜನೆಗಳಿಗೆ 2020ರ ಪ್ರತಿಷ್ಠಿತ ಜಪಾನ್ ಸೊಸೈಟಿ ಆಫ್ ಸಿವಿಲ್ ಎಂಜಿನಿಯರ್ಸ್(ಜೆಎಸ್ಸಿಇ) 'ಅತ್ಯುತ್ತಮ ಸಿವಿಲ್ ಎಂಜಿನಿಯರಿಂಗ್ ಸಾಧನೆ ಪ್ರಶಸ್ತಿ' ನೀಡಲಾಗಿದೆ.

ಜೆಎಸ್ಸಿಇ ತನ್ನ ಪ್ರಶಸ್ತಿ ಟಿಪ್ಪಣಿಯಲ್ಲಿ ದೆಹಲಿ ಮೆಟ್ರೋ ಯೋಜನೆಗಳು ಭಾರತದ ನಿರ್ಮಾಣ ಸ್ಥಳಗಳಲ್ಲಿ ಸುರಕ್ಷತೆ ಮತ್ತು ದಕ್ಷತೆಯ ಬಗ್ಗೆ ಜಾಗೃತಿ ಮೂಡಿಸಿವೆ. ನಿವಾಸಿಗಳಿಗೆ ಸುರಕ್ಷಿತ, ಆರಾಮದಾಯಕ ಸಾರಿಗೆಯನ್ನು ಒದಗಿಸಿವೆ ಎಂದು ಉಲ್ಲೇಖಿಸಿದೆ.

ಕಳೆದ ಎರಡು ದಶಕಗಳಲ್ಲಿ ದೆಹಲಿ ಮೆಟ್ರೊದ ಸಿವಿಲ್ ಎಂಜಿನಿಯರಿಂಗ್ ಸಾಧನೆಗಳು ಜಾಗತಿಕ ಮನ್ನಣೆಯನ್ನು ಪಡೆದಿವೆ. ಪ್ರಮುಖ ಅಂತಾರಾಷ್ಟ್ರೀಯ ಸಂಸ್ಥೆಗಳಿಂದ ಮೆಚ್ಚುಗೆ ಪಡೆದಿವೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com