ಸೂರತ್: ಒಂದೇ ದಿನ 34 ಆಟೋರಿಕ್ಷಾ ಚಾಲಕರಲ್ಲಿ ಕೊರೋನಾ ಸೋಂಕು ದೃಢ!

ಗುಜರಾತ್ ರಾಜ್ಯದ ಸೂರತ್ ನಗರದಲ್ಲಿ ನಿನ್ನೆ ಒಂದೇ ದಿನ 34 ಆಟೋ ರಿಕ್ಷಾ ಚಾಲಕರಲ್ಲಿ ಕೊರೋನಾ ಸೋಂಕು ದೃಢಪಟ್ಟಿದೆ.

Published: 23rd March 2021 02:27 PM  |   Last Updated: 23rd March 2021 02:43 PM   |  A+A-


casual_images1

ಸಾಂದರ್ಭಿಕ ಚಿತ್ರ

Posted By : Nagaraja AB
Source : PTI

ಸೂರತ್: ಗುಜರಾತ್ ರಾಜ್ಯದ ಸೂರತ್ ನಗರದಲ್ಲಿ ನಿನ್ನೆ ಒಂದೇ ದಿನ 34 ಆಟೋ ರಿಕ್ಷಾ ಚಾಲಕರಲ್ಲಿ ಕೊರೋನಾ ಸೋಂಕು ದೃಢಪಟ್ಟಿದೆ. ಸಂಭಾವ್ಯ ಕೊರೋನಾ ಸೋಂಕಿತರನ್ನು ಗುರುತಿಸಲು ನಡೆದ ವಿಶೇಷ ಕಾರ್ಯಕ್ರಮದಲ್ಲಿ ಒಂದೇ ದಿನ 34 ಆಟೋ ರಿಕ್ಷಾ ಚಾಲಕರಲ್ಲಿ ಕೊರೋನಾ ಪಾಸಿಟಿವ್ ದೃಢಪಟ್ಟಿದೆ ಎಂದು ಅಧಿಕಾರಿಯೊಬ್ಬರು ಮಂಗಳವಾರ ತಿಳಿಸಿದ್ದಾರೆ.

ಸೂರತ್ ನಗರದಲ್ಲಿ ಕೋವಿಡ್-19 ಪ್ರಕರಣಗಳ ಸಂಖ್ಯೆ ಹೆಚ್ಚಾಗುತ್ತಿದ್ದು, ಸೋಮವಾರ 429 ಹೊಸ ಸೋಂಕು ಪ್ರಕರಣಗಳು ಪತ್ತೆಯಾಗಿವೆ. ಆಟೋ ರಿಕ್ಷಾ ಚಾಲಕರು, ತರಕಾರಿ ವರ್ತಕರು ಮತ್ತು ದಿನಸಿ ಅಂಗಡಿಗಳ ಕೆಲಸಗಾರರಿಗೆ ಹೆಚ್ಚಿನ ಪ್ರಮಾಣದಲ್ಲಿ ಪರೀಕ್ಷೆ ನಡೆಸಲಾಗಿದೆ. ನೆಗೆಟಿವ್ ಪರೀಕ್ಷಾ ವರದಿ ಬಂದವರಿಗೆ ಆರೋಗ್ಯ ಕಾರ್ಡ್ ನೀಡಲಾಗಿದೆ ಎಂದು ಸೂರತ್ ಮಹಾನಗರ ಪಾಲಿಕೆ ಆಯುಕ್ತ ಬಿಎನ್ ಪಣಿ ಸುದ್ದಿಗಾರರಿಗೆ ತಿಳಿಸಿದ್ದಾರೆ. 

ಆಟೋ ರಿಕ್ಷಾಗಳಲ್ಲಿ ಪ್ರಯಾಣಿಸುವಾಗ ಕಡ್ಡಾಯವಾಗಿ ಮಾಸ್ಕ್ ಧರಿಸುವಂತೆ ಅವರು ಮನವಿ ಮಾಡಿದ್ದಾರೆ. ಕೊರೋನಾವೈರಸ್ ತಡೆಗಟ್ಟುವ ನಿಟ್ಟಿನಲ್ಲಿ ಮಾರುಕಟ್ಟೆ ಪ್ರದೇಶಗಳಲ್ಲಿ ಅಂಗಡಿ ಮಾಲೀಕರಿಗೆ ಕೊರೋನಾ ಪರೀಕ್ಷೆ ಮಾಡಲಾಗುತ್ತಿದೆ. ಒಟ್ಟಾರೇ ಈವರೆಗೂ ಸೂರತ್ ನಲ್ಲಿ 45,182 ಪ್ರಕರಣಗಳು ಕಂಡುಬಂದಿದ್ದು, 42, 544 ಜನರು ಗುಣಮುಖರಾಗಿದ್ದಾರೆ. 862 ಸೋಂಕಿತರು ಮೃತಪಟ್ಟಿದ್ದಾರೆ.


Stay up to date on all the latest ರಾಷ್ಟ್ರೀಯ news
Poll
Rahul gandhi

ಕಾಂಗ್ರೆಸ್‌ನಲ್ಲಿನ ಯುವ, ಕ್ರಿಯಾಶೀಲ ನಾಯಕರಿಂದ ರಾಹುಲ್ ಗಾಂಧಿಗೆ ಅಭದ್ರತೆ ಕಾಡುತ್ತಿದೆಯೇ?


Result
ಹೌದು
ಇಲ್ಲ
flipboard facebook twitter whatsapp