ಮಹಾರಾಷ್ಟ್ರ: ಓಡಿ ಹೋಗಿದ್ದ, 'ಕಾಣೆಯಾಗಿದ್ದ' 56 ಯುವತಿಯರು ಮರಳಿ ಕುಟುಂಬಕ್ಕೆ ಸೇರ್ಪಡೆ!
ಮಹಾರಾಷ್ಟ್ರದ ರಾಯಗಡ್ ಜಿಲ್ಲೆಯಲ್ಲಿ 2020ರಲ್ಲಿ ನಡೆದ ಪ್ರತ್ಯೇಕ ಪ್ರಕರಣಗಳಲ್ಲಿ ನಾಪತ್ತೆಯಾಗಿದ್ದ 56 ಯುವತಿಯರು ಮತ್ತೆ ತಮ್ಮ ಕುಟುಂಬ ಸೇರಿದ್ದಾರೆ ಎಂದು ಪೊಲೀಸರು ಶನಿವಾರ ತಿಳಿಸಿದ್ದಾರೆ.
Published: 27th March 2021 03:40 PM | Last Updated: 27th March 2021 03:40 PM | A+A A-

ಸಾಂದರ್ಭಿಕ ಚಿತ್ರ
ರಾಯಗಡ್: ಮಹಾರಾಷ್ಟ್ರದ ರಾಯಗಡ್ ಜಿಲ್ಲೆಯಲ್ಲಿ 2020ರಲ್ಲಿ ನಡೆದ ಪ್ರತ್ಯೇಕ ಪ್ರಕರಣಗಳಲ್ಲಿ ನಾಪತ್ತೆಯಾಗಿದ್ದ 56 ಯುವತಿಯರು ಮತ್ತೆ ತಮ್ಮ ಕುಟುಂಬ ಸೇರಿದ್ದಾರೆ ಎಂದು ಪೊಲೀಸರು ಶನಿವಾರ ತಿಳಿಸಿದ್ದಾರೆ.
56 ಯುವತಿಯರಲ್ಲದೆ, ಮನೆಯಿಂದ ಓಡಿಹೋದ ಈ ಕರಾವಳಿ ಜಿಲ್ಲೆಯ 14 ಯುವಕರನ್ನು ಪತ್ತೆ ಹಚ್ಚಿ ಮತ್ತೆ ಅವರ ರಕ್ತಸಂಬಂಧಿಗಳೊಂದಿಗೆ ಸೇರಿಸಲಾಗಿದೆ ಎಂದು ರಾಯಗಡ್ ಪೊಲೀಸರು ಹೇಳಿದ್ದಾರೆ.
2020 ರಲ್ಲಿ ಒಟ್ಟು 57 ಯುವತಿಯರು ಜಿಲ್ಲೆಯ ವಿವಿಧ ಭಾಗಗಳಲ್ಲಿರುವ ತಮ್ಮ ಮನೆಗಳಿಂದ ಓಡಿಹೋಗಿದ್ದರು. ಇವರೆಲ್ಲರೂ 18 ವರ್ಷಕ್ಕಿಂತ ಮೇಲ್ಪಟ್ಟವರಾಗಿರುವುದರಿಂದ, ಕಾಣೆಯಾದ ವ್ಯಕ್ತಿಯಗಳ ಬಗ್ಗೆ ನಾಪತ್ತೆ ಪ್ರಕರಣ ದಾಖಲಿಸಲಾಗಿತ್ತು ಎಂದು ಪೊಲೀಸರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ನಾಪತ್ತೆಯಾಗಿದ್ದ ಯುವತಿಯರ ಪೈಕಿ ಹೆಚ್ಚಿನವರು ತಮ್ಮ ಪ್ರಿಯಕರನೊಂದಿಗೆ ಓಡಿಹೋಗಿದ್ದರು ಎಂದು ಪೊಲೀಸರು ಹೇಳಿದ್ದಾರೆ.
ನಾಪ್ತತ್ತೆಯಾಗಿದ್ದ 56 ಯುವತಿಯರನ್ನು ಪತ್ತೆ ಮಾಡಿ ಅವರ ಕುಟುಂಬಗಳಿಗೆ ಹಸ್ತಾಂತರಿಸಲಾಗಿದೆ. ಆದರೆ ಓರ್ವ ಯುವತಿ ಇನ್ನೂ ಪತ್ತೆ ಮಾಡಲಾಗಿಲ್ಲ ಎಂದು ತಿಳಿಸಿದ್ದಾರೆ.