ಬಂಗಾಳದಲ್ಲಿ ಬಿಜೆಪಿ ಪಂದ್ಯವನ್ನು ಎದುರಿಸಿ ಸೋತಿದೆ: ಶಶಿ ತರೂರ್

ಪಶ್ಚಿಮ ಬಂಗಾಳ ವಿಧಾನಸಭಾ ಚುನಾವಣೆಯಲ್ಲಿ ಮಮತಾ ಬ್ಯಾನರ್ಜಿ ಅವರ ಅದ್ಭುತ ಗೆಲುವನ್ನು ಕಾಂಗ್ರೆಸ್ ಹಿರಿಯ ಮುಖಂಡ ಶಶಿ ತರೂರ್ ಶ್ಲಾಘಿಸಿದ್ದಾರೆ ಮತ್ತು ಬಿಜೆಪಿ ಬಂಗಾಳದಲ್ಲಿ ತನ್ನ ಪಂದ್ಯವನ್ನು ಎದುರಿಸಿ ಸೋತಿದೆ ಎಂದು ಹೇಳಿದರು.

Published: 02nd May 2021 08:04 PM  |   Last Updated: 02nd May 2021 08:04 PM   |  A+A-


ಶಶಿ ತರೂರ್

Posted By : Raghavendra Adiga
Source : PTI

ತಿರುವನಂತಪುರಂ: ಪಶ್ಚಿಮ ಬಂಗಾಳ ವಿಧಾನಸಭಾ ಚುನಾವಣೆಯಲ್ಲಿ ಮಮತಾ ಬ್ಯಾನರ್ಜಿ ಅವರ ಅದ್ಭುತ ಗೆಲುವನ್ನು ಕಾಂಗ್ರೆಸ್ ಹಿರಿಯ ಮುಖಂಡ ಶಶಿ ತರೂರ್ ಶ್ಲಾಘಿಸಿದ್ದಾರೆ ಮತ್ತು ಬಿಜೆಪಿ ಬಂಗಾಳದಲ್ಲಿ ತನ್ನ ಪಂದ್ಯವನ್ನು ಎದುರಿಸಿ ಸೋತಿದೆ ಎಂದು ಹೇಳಿದರು.

ಕೇರಳ ಚುನಾವಣೆಯಲ್ಲಿ ಯುನೈಟೆಡ್ ಡೆಮಾಕ್ರಟಿಕ್ ಫ್ರಂಟ್ ಪರ ವ್ಯಾಪಕವಾಗಿ ಪ್ರಚಾರ ಮಾಡಿದ ತರೂರ್, ಆಡಳಿತಾರೂಢ  ಸಿಪಿಐ-ಎಂ ನೇತೃತ್ವದ ಲೆಫ್ಟ್ ಡೆಮಾಕ್ರಟಿಕ್ ಫ್ರಂಟ್ ಅಧಿಕಾರವನ್ನು ಉಳಿಸಿಕೊಂಡಿರುವ  ಫಲಿತಾಂಶಗಳ ಬಗ್ಗೆ ನಿರಾಶೆ ವ್ಯಕ್ತಪಡಿಸಿದರು.

"ಕೇರಳದಲ್ಲಿನ ನನ್ನ ಅನೇಕ ಸ್ನೇಹಿತರು ಮತ್ತು ಸಹೋದ್ಯೋಗಿಗಳಿಗೆ ಇದು ನಿರಾಶೆಯ ದಿನವಾಗಿದೆ. ನೀವು ಉತ್ತಮ ಹೋರಾಟ ಮಾಡಿದ್ದೀರಿ. ನಾನು ನಿಮ್ಮಲ್ಲಿ ನೋಡಿದ ಶಕ್ತಿ ಮತ್ತು ಬದ್ಧತೆಯು ಪಕ್ಷದ ದೊಡ್ಡ ಶಕ್ತಿ" ಎಂದು ತರೂರ್ ಹೇಳಿದರು. "ನಾವು ನಿರಾಶರಾಗಬಾರದು. ನಮ್ಮ ಪಕ್ಷವನ್ನು ಉತ್ತಮಪಡಿಸಲು ಪುನರುಜ್ಜೀವನಗೊಳಿಸಲು ಮತ್ತು ಜನರಿಗೆ ಸೇವೆ ಸಲ್ಲಿಸಲು ನಮಗಿನ್ನೂ ಅವಕಾಶವಿದೆ." ಎಂದು ಅವರು ಸರಣಿ ಟ್ವೀಟ್‌ಗಳಲ್ಲಿ ಹೇಳಿದ್ದಾರೆ.

ತರೂರ್ ಕೇರಳ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಅವರ ಗಮನಾರ್ಹ ಪುನರಾಗಮನಕ್ಕೆ ಅಭಿನಂದನೆ ಸಲ್ಲಿಸಿದ್ದಾರೆ. " ಅವರ ಸರ್ಕಾರದ ಮೇಲೆ ಜನರು ತೋರಿಸಿರುವ ವಿಶ್ವಾಸವನ್ನು ಗೌರವಿಸುವುದು ನಮ್ಮ ಕರ್ತವ್ಯವಾಗಿದೆ. ಕೋವಿಡ್ ಮತ್ತು ಕೋಮುವಾದದ ವಿರುದ್ಧದ ಹೋರಾಟದಲ್ಲಿ ಅವರು (ಕೇರಳ ಮುಖ್ಯಮಂತ್ರಿ) ನಮ್ಮ ಬೆಂಬಲವನ್ನು ಹೊಂದಿರಲಿದ್ದಾರೆ." ತಿರುವನಂತಪುರಂ ಸಂಸದ ಟ್ವೀಟ್ ಮಾಡಿದ್ದಾರೆ.

ಬಂಗಾಳದಲ್ಲಿ ತೃಣಮೂಲ ಕಾಂಗ್ರೆಸ್ ಸಾಧನೆ ಕುರಿತು ಮಮತಾ ಬ್ಯಾನರ್ಜಿಯನ್ನು ಶ್ಲಾಘಿಸಿದ ತರೂರ್, "ಕೋಮುವಾದ ಮತ್ತು ಅಸಹಿಷ್ಣುತೆಯ ಶಕ್ತಿಗಳ ವಿರುದ್ಧ ಅದ್ಭುತ ಗೆಲುವು ಸಾಧಿಸಿದ್ದಕ್ಕಾಗಿ ಮಮತಾ ಬ್ಯಾನರ್ಜಿ ಅವರಿಗೆ ಅಭಿನಂದನೆಗಳು" ಎಂದು ಟ್ವಿಟ್ಟರ್ ನಲ್ಲಿ ತಿಳಿಸಿದ್ದಾರೆ

"ಬಂಗಾಳದ ಮತದಾರರು (ಮತ್ತು ವಿಶೇಷವಾಗಿ ನಂದಿಗ್ರಾಮದ) ಮ್ಮ ಹೃದಯ ಎಲ್ಲಿದೆ ಎಂಬುದನ್ನು ಪ್ರದರ್ಶಿಸಿದ್ದಾರೆ. ಬಿಜೆಪಿ ತನ್ನ ಪಂದ್ಯವನ್ನು ಬಂಗಾಳದಲ್ಲಿ ಆಡಿ ಮುಗಿಸಿದೆ ಹಾಗೂ ಸೋತಿದೆ."

ತಮಿಳುನಾಡು ಚುನಾವಣೆಯಲ್ಲಿ  ನಿರ್ಣಾಯಕ" ಗೆಲುವು ಸಾಧಿಸಿದ ಬಗ್ಗೆ ಡಿಎಂಕೆ ಮುಖ್ಯಸ್ಥ ಎಂ ಕೆ ಸ್ಟಾಲಿನ್ ಅವರನ್ನು ತರೂರ್ ಅಭಿನಂದಿಸಿದರು. "ಕಾಂಗ್ರೆಸ್ ಕಾರ್ಯಕರ್ತರು ತಮಿಳುನಾಡಿಗೆ ಉತ್ತಮ ಆಡಳಿತವನ್ನು ನೀಡುವ ಪಕ್ಷದೊಂದಿಗೆ ಮೈತ್ರಿ ಮಾಡಿಕೊಂಡಿದ್ದಕ್ಕೆ ಸಂತೋಷವಾಗಿದೆ. ನಾವು ಒಟ್ಟಾಗಿ ಕೊಆಪರೇಟಿವ್ ಫೆಡರಲಿಸಂ ಮತ್ತು ಇನ್‌ಕ್ಲೂಸಿವ್ ಇಂಡಿಯಾಕ್ಕಾಗಿ ಒಗ್ಗಟ್ಟಾಗಬೇಕು," ತರೂರ್  ಡಿಎಂಕೆ-ಕಾಂಗ್ರೆಸ್ ಮೈತ್ರಿ ಗೆಲುವಿನ ಬಗ್ಗೆ ಹೇಳಿದರು. ಒಂದು ದಶಕದ ಬಳಿಕ ತಮಿಳುನಾಡಿನಲ್ಲಿ ಡಿಎಂಕೆ ಅಧಿಕಾರ ಚುಕ್ಕಾಣಿ ಹಿಡಿಯುತ್ತಿದೆ.

Stay up to date on all the latest ರಾಷ್ಟ್ರೀಯ news
Poll
Rahul_Gandhi1

ರಾಹುಲ್ ಗಾಂಧಿ ಟೀಕೆ ಮಾಡುವುದನ್ನು ನಿಲ್ಲಿಸಿ ಕೋವಿಡ್ ಬಿಕ್ಕಟ್ಟಿನ ವಿರುದ್ಧ ಹೋರಾಡಲು ಪಕ್ಷವನ್ನು ಸಜ್ಜುಗೊಳಿಸಬೇಕೇ?


Result
ಹೌದು, ರಾಹುಲ್ ಮುಂದಾಳತ್ವ ವಹಿಸಬೇಕು.
ಇಲ್ಲ, ಇದು ಕೇಂದ್ರ ಸರ್ಕಾರದ ಜವಾಬ್ದಾರಿ.
flipboard facebook twitter whatsapp