ಟೌಕ್ಟೇ ಚಂಡಮಾರುತ: ಗುಜರಾತ್ ತೀರದತ್ತ ಪಯಣ; ರಾಜ್ಯದಲ್ಲಿ ಮೇ 20 ರವರೆಗೆ ಮಳೆ ಸಾಧ್ಯತೆ, ಮೀನುಗಾರರಿಗೆ ಮುನ್ನೆಚ್ಚರಿಕೆ

ಟೌಕ್ಟೇ ಚಂಡಮಾರುತ ಕೇರಳ ಮತ್ತು ಕರ್ನಾಟಕದ ಕರಾವಳಿ ಭಾಗದಿಂದ ನಿಧಾನವಾಗಿ ಗುಜರಾತ್ ತೀರದತ್ತ ಹೊರಟಿದೆ. ಉತ್ತರ ವಾಯವ್ಯ ಭಾಗದತ್ತ ಹೊರಟಿರುವ ಚಂಡಮಾರುತ ಇಂದು ಸಾಯಂಕಾಲ ಗುಜರಾತ್ ತೀರಕ್ಕೆ ತಲುಪಿ ಪೋರಬಂದರ್ ಮತ್ತು ಭಾವನಗರ್ ಮಧ್ಯೆ ನಾಳೆ ಮುಂಜಾನೆ ದಾಟಲಿದೆ. 
ಟೌಕ್ಟೇ ಚಂಡಮಾರುತದ ಪ್ರಭಾವದಿಂದ ಮುಂಬೈಯ ವಡಲಾ ಪ್ರದೇಶದಲ್ಲಿ ಇಂದು ಬೆಳಗ್ಗೆ ಕಂಡುಬಂದಿದ್ದು ಹೀಗೆ
ಟೌಕ್ಟೇ ಚಂಡಮಾರುತದ ಪ್ರಭಾವದಿಂದ ಮುಂಬೈಯ ವಡಲಾ ಪ್ರದೇಶದಲ್ಲಿ ಇಂದು ಬೆಳಗ್ಗೆ ಕಂಡುಬಂದಿದ್ದು ಹೀಗೆ

ನವದೆಹಲಿ/ಬೆಂಗಳೂರು: ಟೌಕ್ಟೇ ಚಂಡಮಾರುತ ಕೇರಳ ಮತ್ತು ಕರ್ನಾಟಕದ ಕರಾವಳಿ ಭಾಗದಿಂದ ನಿಧಾನವಾಗಿ ಗುಜರಾತ್ ತೀರದತ್ತ ಹೊರಟಿದೆ. ಉತ್ತರ ವಾಯವ್ಯ ಭಾಗದತ್ತ ಹೊರಟಿರುವ ಚಂಡಮಾರುತ ಇಂದು ಸಾಯಂಕಾಲ ಗುಜರಾತ್ ತೀರಕ್ಕೆ ತಲುಪಿ ಪೋರಬಂದರ್ ಮತ್ತು ಭಾವನಗರ್ ಮಧ್ಯೆ ನಾಳೆ ಮುಂಜಾನೆ ದಾಟಲಿದೆ. ಗುಜರಾತ್ ತೀರದ ತಗ್ಗು ಪ್ರದೇಶಗಳಿಂದ ಸುಮಾರು 1 ಲಕ್ಷದ 50 ಸಾವಿರ ಮಂದಿಯನ್ನು ಸುರಕ್ಷಿತ ಪ್ರದೇಶಗಳಿಗೆ ಸ್ಥಳಾಂತರ ಮಾಡಲಾಗಿದೆ.

ರಾಷ್ಟ್ರೀಯ ವಿಪತ್ತು ನಿರ್ವಹಣಾ ತಂಡ ಈಗಾಗಲೇ ತುರ್ತು ಕೆಲಸಗಳಿಗೆ 100 ತಂಡಗಳನ್ನು ಕೇರಳ, ಕರ್ನಾಟಕ, ತಮಿಳು ನಾಡು, ಗುಜರಾತ್, ಗೋವಾ ಮತ್ತು ಮಹಾರಾಷ್ಟ್ರ ಭಾಗಗಳಲ್ಲಿ ನಿಯೋಜಿಸಿದೆ. 

ಉತ್ತರ ವಾಯವ್ಯ ಭಾಗದತ್ತ ಗಂಟೆಗೆ 18 ಕಿಲೋ ಮೀಟರ್ ವೇಗದಲ್ಲಿ ಕಳೆದ 6 ಗಂಟೆಗಳಿಂದ ಬೀಸುತ್ತಿದ್ದು ಗಾಳಿಯ ವೇಗ 155ರಿಂದ 165 ಕಿಲೋ ಮೀಟರ್ ನಷ್ಟು ಇರಲಿದೆ. ಚಂಡಮಾರುತದ ಪ್ರಭಾವದಿಂದ ಮಹಾರಾಷ್ಟ್ರಾದ್ಯಂತ ಇಂದು ಮಳೆಯಾಗುತ್ತಿದೆ. ಮಹಾರಾಷ್ಟ್ರದ ಜಲ್ಗೌನ್ ನಲ್ಲಿ ಮರವೊಂದು ಬುಡಸಮೇತ ಕುಸಿತು ಬಿದ್ದು 17 ವರ್ಷದ ಮತ್ತು 12 ವರ್ಷದ ಇಬ್ಬರು ಬಾಲಕಿಯರು ಮೃತಪಟ್ಟಿದ್ದಾರೆ.

ಭಾರತದ ಪಶ್ಚಿಮ ಕರಾವಳಿಯಲ್ಲಿ ಹಗುರ ಗಾಳಿಯಿಂದ ಕೂಡಿದ ಸಾಧಾರಣ ಮಳೆಯಾಗುವ ಸಾಧ್ಯತೆಯಿದೆ. ಸೌರಾಷ್ಟ್ರ ಮತ್ತು ಕಚ್ ಒಳನಾಡು ಪ್ರದೇಶದ ಹಲವೆಡೆ ಅಧಿಕದಿಂದ ಕೂಡಿದ ಭಾರೀ ಮಳೆಯಾಗಲಿದೆ.

ಮುಂದಿನ 6 ಗಂಟೆಗಳಲ್ಲಿ ಮಾಲ್ಡವೀಸ್ ಪ್ರದೇಶ ಮತ್ತು ಹಿಂದೂ ಮಹಾಸಾಗರದ ಸಮಭಾಜಕ ಪ್ರದೇಶದಲ್ಲಿ ತಂಪನೆಯ ವಾತಾವರಣ ಇರಲಿದ್ದು, ಬಿರುಗಾಳಿ ಪ್ರತಿ ಗಂಟೆಗೆ 45-55 ಕಿ.ಮೀ.ನಿಂದ 65 ಕಿ.ಮೀ. ವೇಗದಲ್ಲಿ ಸಾಗಲಿದೆ. ಲಕ್ಷದ್ವೀಪ ಪ್ರದೇಶ ಮತ್ತು ಅರಬ್ಬೀ ಸಮುದ್ರದ ವಾಯವ್ಯಕ್ಕೆ ಹೊಂದಿಕೊಂಡಿರುವ ಮತ್ತು ಅರಬ್ಬೀ ಸಮುದ್ರದ ಪಶ್ಚಿಮ ಕೇಂದ್ರದ ಪ್ರದೇಶದಲ್ಲಿ ಚಂಡಮಾರುತ ಪ್ರತಿ ಗಂಟೆಗೆ 75-85 ಕಿ.ಮೀ. ವೇಗದಿಂದ 95 ಕಿ.ಮೀ. ವೇಗದಲ್ಲಿ ಹಾದು ಹೋಗಲಿದೆ ಎಂದು ಭಾರತೀಯ ಹವಾಮಾನ ಇಲಾಖೆ ತಿಳಿಸಿದೆ.

ಟೌಕ್ಟೇ ಚಂಡಮಾರುತದ ಪ್ರಭಾವ ಇಂದು ಮತ್ತೆ ನಾಳೆ ಗೋವಾ, ಗುಜರಾತ್,ಒಡಿಶಾಗಳ ಮೇಲೆ ಬೀರಲಿದೆ. ಗುಜರಾತ್ ತೀರದ ನವ್ಸಾರಿಯಲ್ಲಿ ಮೀನುಗಾರಿಕೆ ದೋಣಿ ಕಡಲ ತೀರದಲ್ಲಿ ತೇಲುತ್ತಿರುವ ದೃಶ್ಯ ಕಂಡುಬಂದಿದೆ.

ಕೋಲ್ಕತ್ತಾದಿಂದ ಅಹಮದಾಬಾದ್‌ಗೆ 167 ಸಿಬ್ಬಂದಿ ಮತ್ತು 16.5 ಟನ್ ಲೋಡ್ ಎನ್‌ಡಿಆರ್‌ಎಫ್ ಸಾಗಿಸಲು ಭಾರತೀಯ ವಾಯುಪಡೆಯು ಎರಡು ಸಿ -130 ಜೆ ಮತ್ತು ಆನ್ -32 ವಿಮಾನವನ್ನು ನಿಯೋಜಿಸಲಾಗಿದೆ ಎಂದು ಭಾರತೀಯ ವಾಯುಪಡೆ ತಿಳಿಸಿದೆ.

ತೇಲಿಬಂದ ನೀರುನಾಯಿ: ಕರಾವಳಿ ಮೇಲೆ ತೀವ್ರ ಪ್ರಭಾವ ಬೀರಿತ ಟೌಕ್ಟೇ ಚಂಡಮಾರುತದಿಂದಾಗಿ ಬೆಳ್ತಂಗಡಿ ತಾಲ್ಲೂಕಿನ ಗರ್ದಾಡಿ ಗ್ರಾಮದ ಫಲ್ಗುಣಿ ನದಿಯ ಸಮೀಪ ತೊರೆಯಲ್ಲಿ ನಿನ್ನೆ ರಭಸವಾಗಿ ಹರಿದು ಬಂದ ನೀರಿನಲ್ಲಿ ನೀರು ನಾಯಿ ಕೊಚ್ಚಿಕೊಂಡು ಬಂದಿದ್ದು ಕಂಡುಬಂತು. 

ರಾಜ್ಯದಲ್ಲಿ ಮೇ 20ರವರೆಗೆ ಮಳೆ: ಟೌಕ್ಟೇ ಚಂಡಮಾರುತ ಬಿರುಸುಗೊಂಡಿರುವುದರಿಂದ ರಾಜ್ಯದ ಕರಾವಳಿ ಜಿಲ್ಲೆಗಳಲ್ಲಿ ಇದೇ 20ರ ವರೆಗೆ ಗುಡುಗು, ಸಿಡಿಲು ಸಹಿತ ಧಾರಾಕಾರ ಮಳೆಯಾಗುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ. ಕರಾವಳಿ ಜಿಲ್ಲೆಗಳಾದ ಉತ್ತರ ಕನ್ನಡ, ದಕ್ಷಿಣ ಕನ್ನಡ ಹಾಗೂ ಉಡುಪಿಯಲ್ಲಿ ಇದೇ 20ರವರೆಗೆ ಯೆಲ್ಲೊ ಅಲರ್ಟ್ ಘೋಷಿಸಲಾಗಿದೆ. ಕರಾವಳಿಯಲ್ಲಿ ಗಾಳಿಯ ವೇಗ ಹೆಚ್ಚಿರುವ ಕಾರಣ ಮೀನುಗಾರರು ಕಡಲಿಗೆ ಇಳಿಯದಂತೆ ಇಲಾಖೆ ಎಚ್ಚರಿಕೆ ನೀಡಿದೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com