ಪ್ರಜ್ಞಾ ಠಾಕೂರ್ 'ಗೋಮೂತ್ರ' ಹೇಳಿಕೆಯನ್ನು ವೈಜ್ಞಾನಿಕವಾಗಿ ಸಾಬೀತುಪಡಿಸಿ: ಕೇಂದ್ರ ಸಚಿವರಿಗೆ ಕಾಂಗ್ರೆಸ್ ಶಾಸಕ ಪತ್ರ

ಕೊರೋನಾ ವಿರುದ್ಧದ 'ಗೋಮೂತ್ರ' ದ ಸಂರಕ್ಷಣೆ ಬಗ್ಗೆ ಭೋಪಾಲ್ ಬಿಜೆಪಿ ಸಂಸದೆ ಪ್ರಜ್ಞಾ ಸಿಂಗ್ ಠಾಕೂರ್ ಅವರ ಹೇಳಿಕೆಯನ್ನು ವೈಜ್ಞಾನಿಕವಾಗಿ ಸಾಬೀತುಪಡಿಸುವಂತೆ ಕಾಂಗ್ರೆಸ್ ಶಾಸಕರೊಬ್ಬರು ಕೇಂದ್ರ ಆರೋಗ್ಯ ಸಚಿವ ಹರ್ಷ್ ವರ್ಧನ್ ಮತ್ತು ರಾಷ್ಟ್ರೀಯ ಆರೋಗ್ಯ ಮಿಷನ್ ಗೆ ಮನವಿ ಮಾಡಿದ್ದಾರೆ.
ಪ್ರಜ್ಞಾ ಸಿಂಗ್ ಠಾಕೂರ್
ಪ್ರಜ್ಞಾ ಸಿಂಗ್ ಠಾಕೂರ್

ಭೋಪಾಲ್: ಕೊರೋನಾ ವಿರುದ್ಧದ 'ಗೋಮೂತ್ರ' ದ ಸಂರಕ್ಷಣೆ ಬಗ್ಗೆ ಭೋಪಾಲ್ ಬಿಜೆಪಿ ಸಂಸದೆ ಪ್ರಜ್ಞಾ ಸಿಂಗ್ ಠಾಕೂರ್ ಅವರ ಹೇಳಿಕೆಯನ್ನು ವೈಜ್ಞಾನಿಕವಾಗಿ ಸಾಬೀತುಪಡಿಸುವಂತೆ ಕಾಂಗ್ರೆಸ್ ಶಾಸಕರೊಬ್ಬರು ಕೇಂದ್ರ ಆರೋಗ್ಯ ಸಚಿವ ಹರ್ಷ್ ವರ್ಧನ್ ಮತ್ತು ರಾಷ್ಟ್ರೀಯ ಆರೋಗ್ಯ ಮಿಷನ್ ಗೆ ಮನವಿ ಮಾಡಿದ್ದಾರೆ.

ಹರ್ಷ್ ವರ್ಧನ್ ಅವರಿಗೆ ಬರೆದ ಪತ್ರದಲ್ಲಿ, ಕಾಂಗ್ರೆಸ್ ಹಿರಿಯ ಮುಖಂಡ ಪಿಸಿ ಶರ್ಮಾ, "ಪ್ರಜ್ಞಾ ಸಿಂಗ್ ಠಾಕೂರ್ ಅವರು ಬಿಜೆಪಿಯ ಹಿರಿಯ ಮುಖಂಡರು, ಭೋಪಾಲ್ ಸಂಸದರಾಗಿದ್ದಾರೆ. ಗೋಮೂತ್ರ  ಶ್ವಾಸಕೋಶದ ಸೋಂಕು ಮತ್ತು ಕೋವಿಡ್-19 ಅನ್ನು ಗುಣಪಡಿಸುತ್ತದೆ ಎಂದು ಅವರು ಹೇಳಿದ್ದಾರೆ. ಅವರ ಮಾತುಗಳು ವಿಶ್ವಾಸಾರ್ಹವಾಗಿರಬೇಕು". ಗೋಮೂತ್ರದ ರವು ಶ್ವಾಸಕೋಶದ ಸೋಂಕು ಮತ್ತು ಕೊರೋನಾ ವಿರುದ್ಧ ರಕ್ಷಣೆ ನೀಡುತ್ತದೆ ಎಂದು ಭಾನುವಾರ ಸಂಸದೆ ಒಂದು ಕಾರ್ಯಕ್ರಮದಲ್ಲಿ ಹೇಳಿದ್ದರು.

"ಈಗ ಗ್ರಾಮಗಳಲ್ಲಿ ಸಾಂಕ್ರಾಮಿಕ ರೋಗ ಹರಡಿದೆ. ಠಾಕೂರ್ ಅವರ ಹೇಳಿಕೆಗಳುಗೋಮೂತ್ರದಲ್ಲಿ ಹೊಂದಿರುವ ಗ್ರಾಮಸ್ಥರನ್ನು ಗೊಂದಲಕ್ಕೀಡುಮಾಡುತ್ತವೆ ಮತ್ತು ಅಲೋಪತಿಯ ಸುಸ್ಥಾಪಿತ ಚಿಕಿತ್ಸೆಯನ್ನು ನಿರ್ಲಕ್ಷಿಸಿ ಅವರು ಈ ಔಷಧಿಗಳನ್ನು ತೆಗೆದುಕೊಳ್ಲಲು ಪ್ರಾರಂಭಿಸುತ್ತಾರೆ" ಭೋಪಾಲ್ ನೈಋತ್ಯ ಕ್ಷೇತ್ರದ ಶಾಸಕ ಶರ್ಮಾ ಹೇಳಿದರು

"ಈ ಗೊಂದಲವನ್ನು ಕೊನೆಗೊಳಿಸಲು ಮತ್ತು ಠಾಕೂರ್ ಮಾಡಿದ 'ಗೋಮೂತ್ರ' ಹಕ್ಕನ್ನು ವೈಜ್ಞಾನಿಕವಾಗಿ ಪ್ರಮಾಣೀಕರಿಸಲು" ಅವರು ಹರ್ಷ್ ವರ್ಧನ್ ಮತ್ತು ರಾಷ್ಟ್ರೀಯ ಆರೋಗ್ಯ ಮಿಷನ್ ಆಯುಕ್ತರಿಗೆ ಪತ್ರ ಬರೆದಿದ್ದಾರೆ. ದೇಸಿ ಹಸುವಿನ ಮೂತ್ರದ ಸಾರವನ್ನು ಸೇವಿಸಿದರೆ ಶ್ವಾಸಕೋಶದ ಸೋಂಕಿನಿಂದ ದೂರವಾಗಲಿದೆ ಎಂದು ಸಂಸದೆ ಹೇಳಿದ್ದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com