ಮೆಹುಲ್ ಚೋಕ್ಸಿ ಗಡಿಪಾರು: ಡೊಮಿನಿಕಾಗೆ ವಿಮಾನ ಕಳುಹಿಸಿದ ಭಾರತ!

ಪಂಜಾಬ್ ನ್ಯಾಷನಲ್ ಬ್ಯಾಂಕಿಗೆ 13,500 ಕೋಟಿ ರೂ. ವಂಚಿಸಿ ಭಾರತದಿಂದ ತಲೆಮರೆಸಿಕೊಂಡಿರುವ ವಜ್ರದವ್ಯಾಪಾರಿ ಮೆಹುಲ್ ಚೋಕ್ಸಿ ಗಡಿಪಾರಿಗೆ ಸಂಬಂಧಿಸಿದ ದಾಖಲಾತಿ ಇರುವ ಖಾಸಗಿ ಜೆಟ್ ವಿಮಾನವೊಂದನ್ನು ಭಾರತ ಕಳುಹಿಸಿದೆ ಎಂದು ಅಂಟಿಗುವಾ ಮತ್ತು ಬರ್ಬುಡಾ ಪ್ರಧಾನ ಮಂತ್ರಿ ಗಾಸ್ಟನ್ ಬ್ರೌನ್ ಆ ದೇಶದ ರೆಡಿಯೋವೊಂದಕ್ಕೆ ಹೇಳಿದ್ದಾರೆ.
ಮೆಹುಲ್ ಚೋಕ್ಸಿ
ಮೆಹುಲ್ ಚೋಕ್ಸಿ

ನವದೆಹಲಿ: ಪಂಜಾಬ್ ನ್ಯಾಷನಲ್ ಬ್ಯಾಂಕಿಗೆ 13,500 ಕೋಟಿ ರೂ. ವಂಚಿಸಿ ಭಾರತದಿಂದ ತಲೆಮರೆಸಿಕೊಂಡಿರುವ ವಜ್ರದ
ವ್ಯಾಪಾರಿ ಮೆಹುಲ್ ಚೋಕ್ಸಿ ಗಡಿಪಾರಿಗೆ ಸಂಬಂಧಿಸಿದ ದಾಖಲಾತಿ ಇರುವ ಖಾಸಗಿ  ವಿಮಾನವೊಂದನ್ನು ಭಾರತ ಕಳುಹಿಸಿದೆ ಎಂದು ಅಂಟಿಗುವಾ ಮತ್ತು ಬರ್ಬುಡಾ ಪ್ರಧಾನ ಮಂತ್ರಿ ಗಾಸ್ಟನ್ ಬ್ರೌನ್ ಆ ದೇಶದ ರೆಡಿಯೋವೊಂದಕ್ಕೆ ಹೇಳಿದ್ದಾರೆ.

ಆದಾಗ್ಯೂ, ಈ ಬಗ್ಗೆ ಭಾರತದ ಆಡಳಿತದಿಂದ ಅಧಿಕೃತ ಮಾಹಿತಿ ಹೊರಬಿದಿಲ್ಲ. ಕತಾರ್ ಏರ್ ವೆಸ್ ನ ಖಾಸಗಿ ವಿಮಾನವೊಂದು
ಡೊಮಿನಿಕಾದ ಡೌಗ್ಲಾಸ್-ಚಾರ್ಲ್ಸ್  ವಿಮಾನ ನಿಲ್ದಾಣದಲ್ಲಿ ಲ್ಯಾಂಡ್ ಆಗಿರುವುದಾಗಿ ಅಂಟಿಗುವಾ ನ್ಯೂಸ್ ರೂಮ್ ವರದಿ ಮಾಡಿದೆ.

ನೆರೆಯ ಅಂಟಿಗುವಾ ಮತ್ತು ಬರ್ಬುಡಾದಿಂದ ನಿಗೂಢ ರೀತಿಯಲ್ಲಿ ಕಾಣೆಯಾದ ನಂತರ ಕೆರಿಬಿಯನ್ ರಾಷ್ಟ್ರದಲ್ಲಿ ಬಂಧಿಸಲಾಗಿದ್ದ
ಚೋಕ್ಸಿ ಗಡಿಪಾರು ಬಗ್ಗೆ ಊಹಾಪೋಹಾಕ್ಕೆ ಇದು ಕಾರಣವಾಗಿದೆ.

ಚೋಕ್ಸಿ ಗಡಿಪಾರಿಗೆ ಅಗತ್ಯವಾದ ದಾಖಲಾತಿಗಳನ್ನು ಹೊತ್ತ ವಿಮಾನ ಭಾರತದಿಂದ ಬಂದಿದೆ ಎಂದು ಬ್ರೌನ್ ರೆಡಿಯೋ ಶೋವೊಂದರಲ್ಲಿ ಹೇಳಿದ್ದಾರೆ. ಕತಾರ್ ಏರ್ ವೇಸ್ ನ ಎ7ಸಿಇಇ ವಿಮಾನ ಮೇ 28 ರಂದ ಮಧ್ಯಾಹ್ನ 3.44ಕ್ಕೆ ದೆಹಲಿಯಿಂದ ನಿರ್ಗಮಿಸಿದ್ದು, ಅದೇ ದಿನ ಸ್ಥಳೀಯ ಕಾಲಮಾನ 13.16ಕ್ಕೆ ಮ್ಯಾಡ್ರಿಡ್ ಮಾರ್ಗವಾಗಿ ಡೊಮಿನಿಕಾ ತಲುಪಿದೆ ಎಂದು ಸಾರ್ವಜನಿ ಮಾಹಿತಿ ಲಭ್ಯವಾಗಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com