ಆಕ್ಸಿಜನ್ ಎಕ್ಸ್ ಪ್ರೆಸ್ ನ ಮಹಿಳಾ ಲೊಕೊ ಪೈಲಟ್ ಶಿರಿಶಾ ಜೊತೆ ಪ್ರಧಾನಿ ಸಂವಾದ

ವೈದ್ಯಕೀಯ ಆಕ್ಸಿಜನ್ ಹೊತ್ತ ಆಕ್ಸಿಜನ್ ಎಕ್ಸ್ ಪ್ರೆಸ್ ರೈಲನ್ನು ಕೆಲ ದಿನಗಳ ಹಿಂದೆ ಸಂಪೂರ್ಣ ಮಹಿಳಾ ಸಿಬ್ಬಂದಿಯೇ ಹೊತ್ತು ತಂದಿದ್ದರು. ಇದು ರಾಷ್ಟ್ರೀಯ ಮಟ್ಟದಲ್ಲಿ ಸುದ್ದಿಯಾಗಿತ್ತು.
ಲೊಕೊ ಪೈಲಟ್ ಶಿರಿಶಾ
ಲೊಕೊ ಪೈಲಟ್ ಶಿರಿಶಾ

ನವದೆಹಲಿ: ವೈದ್ಯಕೀಯ ಆಕ್ಸಿಜನ್ ಹೊತ್ತ ಆಕ್ಸಿಜನ್ ಎಕ್ಸ್ ಪ್ರೆಸ್ ರೈಲನ್ನು ಕೆಲ ದಿನಗಳ ಹಿಂದೆ ಸಂಪೂರ್ಣ ಮಹಿಳಾ ಸಿಬ್ಬಂದಿಯೇ ಹೊತ್ತು ತಂದಿದ್ದರು. ಇದು ರಾಷ್ಟ್ರೀಯ ಮಟ್ಟದಲ್ಲಿ ಸುದ್ದಿಯಾಗಿತ್ತು.

ಇದೀಗ ರೈಲನ್ನು ಚಲಾಯಿಸಿಕೊಂಡು ಬಂದ ಲೊಕೋ ಪೈಲಟ್ ಶಿರಿಶಾ ಗಜ್ನಿ ಅವರ ಜೊತೆಗೆ ಪ್ರಧಾನಿ ಮೋದಿ ಮನ್ ಕಿ ಬಾತ್ ಕಾರ್ಯಕ್ರಮದಲ್ಲಿ ಮಾತನಾಡಿ ಅವರ ಕಾರ್ಯಕ್ಕೆ ಶ್ಲಾಘಿಸಿದ್ದಾರೆ. ಈ ಮೂಲಕ ಮಹಿಳಾ ಲೊಕೋ ಪೈಲಟ್ ನ್ನು ಗುರುತಿಸಿದ್ದಾರೆ.

ಆಕ್ಸಿಜನ್ ಎಕ್ಸ್‌ಪ್ರೆಸ್ ರೈಲು, ರಸ್ತೆಯ ಮೂಲಕ ಪ್ರಯಾಣಿಸುವ ಆಮ್ಲಜನಕ ಟ್ಯಾಂಕರ್‌ಗಳಿಗಿಂತ ವೇಗವಾಗಿ ದೇಶದ ಎಲ್ಲಾ ಮೂಲೆಗಳಿಗೆ ಹೆಚ್ಚಿನ ಪ್ರಮಾಣದ ಆಮ್ಲಜನಕವನ್ನು ಸಾಗಿಸಿದೆ. ಒಂದು ಆಕ್ಸಿಜನ್ ಎಕ್ಸ್‌ಪ್ರೆಸ್ ರೈಲನ್ನು ಮಹಿಳೆಯರಿಂದ ಸಂಪೂರ್ಣವಾಗಿ ನಡೆಸಲಾಗುತ್ತಿದೆ ಎಂದು ಕೇಳಿದಾಗ ತಾಯಂದಿರು ಮತ್ತು ಸಹೋದರಿಯರು ಹೆಮ್ಮೆ ಪಡುತ್ತಾರೆ ಎಂದು ಪ್ರಧಾನಿ ಹೇಳಿದರು.

ಕೋವಿಡ್ ಸಂಕಷ್ಟ ಸಮಯದಲ್ಲಿ ಜನರ ಪರವಾಗಿ ಕೆಲಸ ಮಾಡುವ ಸ್ಪೂರ್ತಿಯನ್ನು ತಾನು ಪೋಷಕರಿಂದ ಪಡೆದುಕೊಂಡೆ, ಜನರ ಜೀವ ಉಳಿಸುವ ಕೆಲಸ ಮಾಡುತ್ತಿರುವ ಭಾಗವಾಗಿರುವುದಕ್ಕೆ ತಮಗೆ ಖುಷಿಯಿದೆ, ದೇವರ ಆಶೀರ್ವಾದವಿದು ಎಂದು ಶಿರಿಶಾ ಪ್ರಧಾನಿ ಜೊತೆ ಮಾತನಾಡುವಾಗ ಹೇಳಿದ್ದಾರೆ.

ಇನ್ನು ಪ್ರಧಾನಿಯವರು ಇದೇ ಸಂದರ್ಭದಲ್ಲಿ ಉತ್ತರ ಪ್ರದೇಶದ ಜೌನ್ಪುರ್ ನಲ್ಲಿ ದ್ರವ ಆಕ್ಸಿಜನ್ ಪೂರೈಕೆಗೆ ಆಕ್ಸಿಜನ್ ಟ್ಯಾಂಕರ್ ನ್ನು ಸರಬರಾಜು ಮಾಡುತ್ತಿರುವ ನಿವಾಸ್ ದಿನೇಶ್ ಉಪಾಧ್ಯಾಯ್ ಜೊತೆ ಮಾತನಾಡಿದರು.

ಕಳೆದ ಒಂದು ತಿಂಗಳಿನಿಂದ ನಿರಂತರವಾಗಿ ಆಕ್ಸಿಜನ್ ಟ್ಯಾಂಕರ್ ಮತ್ತು ದ್ರವ ಆಕ್ಸಿಜನ್ ಕಂಟೈನರ್ ಗಳನ್ನು ಸ್ಥಳೀಯ ಮತ್ತು ಅಂತಾರಾಷ್ಟ್ರೀಯ ಕೇಂದ್ರಗಳಿಂದ ಸಾಗಿಸುತ್ತಿದ್ದೇವೆ ಎಂದು ಪ್ರಧಾನಿ ಜೊತೆ ತಮ್ಮ ಅನುಭವವನ್ನು ಗ್ರೂಪ್ ಕ್ಯಾಪ್ಟನ್ ಎ ಕೆ ಪಟ್ನಾಯಕ್ ಹಂಚಿಕೊಂಡರು.

ದೆಹಲಿಯ ಪ್ರಕಾಶ್ ಕಂಡ್ ಪಾಲ್ ಪ್ರಧಾನಿ ಜೊತೆಗೆ ಸಂವಾದದಲ್ಲಿ, ಕಳೆದ 20 ವರ್ಷಗಳಿಂದ ಲ್ಯಾಪ್ ಟೆಕ್ನಿಷಿಯನ್ ಆಗಿ ಕೆಲಸ ಮಾಡುತ್ತಿದ್ದು, ಕೊರೋನಾ ಬಂದ ನಂತರ ಐಎಲ್ ಬಿಎಸ್ ದೆಹಲಿಯಲ್ಲಿ ಸೇವೆ ಸಲ್ಲಿಸುತ್ತಿರುವುದಾಗಿ ಹೇಳಿದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com