ದೇಶದ ಶೇ.78 ರಷ್ಟು ವಯಸ್ಕರಿಗೆ ಕೋವಿಡ್ ಮೊದಲ ಡೋಸ್ ಲಸಿಕೆ, ಶೇ.38 ರಷ್ಟು ಜನ ಎರಡೂ ಡೋಸ್ ಪಡೆದಿದ್ದಾರೆ: ಕೇಂದ್ರ
ದೇಶದಲ್ಲಿ ಶೇ. 78 ರಷ್ಟು ವಯಸ್ಕರಿಗೆ ಕೋವಿಡ್ ಲಸಿಕೆಯ ಮೊದಲ ಡೋಸ್ ನೀಡಲಾಗಿದ್ದು, ಶೇ. 38 ರಷ್ಟು ಮಂದಿ ಎರಡೂ ಡೋಸ್ ಲಸಿಕೆ ಪಡೆದಿದ್ದಾರೆ ಎಂದು ಕೇಂದ್ರ ಆರೋಗ್ಯ ಸಚಿವ ಮನ್ಸುಖ್ ಮಾಂಡವಿಯಾ ಅವರು...
Published: 01st November 2021 07:28 PM | Last Updated: 02nd November 2021 08:16 PM | A+A A-

ಸಾಂದರ್ಭಿಕ ಚಿತ್ರ
ನವದೆಹಲಿ: ದೇಶದಲ್ಲಿ ಶೇ. 78 ರಷ್ಟು ವಯಸ್ಕರಿಗೆ ಕೋವಿಡ್ ಲಸಿಕೆಯ ಮೊದಲ ಡೋಸ್ ನೀಡಲಾಗಿದ್ದು, ಶೇ. 38 ರಷ್ಟು ಮಂದಿ ಎರಡೂ ಡೋಸ್ ಲಸಿಕೆ ಪಡೆದಿದ್ದಾರೆ ಎಂದು ಕೇಂದ್ರ ಆರೋಗ್ಯ ಸಚಿವ ಮನ್ಸುಖ್ ಮಾಂಡವಿಯಾ ಅವರು ಸೋಮವಾರ ಹೇಳಿದ್ದಾರೆ.
ಇದೊಂದು ಅಸಾಧಾರಣ ಸಾಧನೆ ಎಂದು ಬಣ್ಣಿಸಿದ ಕೇಂದ್ರ ಆರೋಗ್ಯ ಸಚಿವರು, ಭಾರತವು ವೈರಸ್ ಅನ್ನು ಸೋಲಿಸುವ ಹಾದಿಯಲ್ಲಿ ಅತೀ ವೇಗವಾಗಿ ಮುನ್ನಡೆಯುತ್ತಿದೆ ಎಂದಿದ್ದಾರೆ.
ಇದನ್ನು ಓದಿ: ದೇಶದ ಕನಿಷ್ಠ ಶೇ.66 ರಷ್ಟು ವಯಸ್ಕರಿಗೆ ಕೋವಿಡ್ ಮೊದಲ ಡೋಸ್ ಲಸಿಕೆ, ಶೇ. 23 ರಷ್ಟು ಜನ ಎರಡೂ ಡೋಸ್ ಪಡೆದಿದ್ದಾರೆ: ಕೇಂದ್ರ
ಇಂದು ಬೆಳಗ್ಗೆ 7 ಗಂಟೆಗೆ ನವೀಕರಿಸಲಾದ ಕೇಂದ್ರ ಆರೋಗ್ಯ ಸಚಿವಾಲಯದ ಅಂಕಿಅಂಶಗಳ ಪ್ರಕಾರ, ದೇಶದಲ್ಲಿ ನೀಡಲಾದ ಒಟ್ಟು ಕೋವಿಡ್ ಲಸಿಕೆ ಪ್ರಮಾಣ 106.31 ಕೋಟಿ ಡೋಸ್ ಮೀರಿದೆ.
"ಇದು ರಾಷ್ಟ್ರದ ಅಸಾಧಾರಣ ಸಾಧನೆ! ಭಾರತವು ಅರ್ಹ ಜನಸಂಖ್ಯೆಯ ಶೇ. 78 ರಷ್ಟು ಮಂದಿಗೆ ಕೋವಿಡ್-19 ಲಸಿಕೆಯ ಮೊದಲ ಡೋಸ್ ಮತ್ತು ಶೇ. 38 ರಷ್ಟು ಅರ್ಹ ಜನರಿಗೆ ಎರಡೂ ಡೋಸ್ ಲಸಿಕೆ ನೀಡಿದೆ. ನಾವು ಕೊರೋನಾ ಸೋಲಿಸುವ ಹಾದಿಯಲ್ಲಿ ವೇಗವಾಗಿ ಮುನ್ನಡೆಯುತ್ತಿದ್ದು, ಎಲ್ಲರಿಗೂ ಅಭಿನಂದನೆಗಳು!" ಎಂದು ಮಾಂಡವಿಯಾ ಅವರು ಟ್ವೀಟ್ ಮಾಡಿದ್ದಾರೆ.
An extraordinary feat of an extraordinary nation!
— Dr Mansukh Mandaviya (@mansukhmandviya) November 1, 2021
India has administered 1st #COVID19 vaccine dose to 7⃣8⃣% of the eligible population and 2nd dose to 3⃣5⃣% of the eligible people.
Congratulations to all as we rapidly progress on our path to defeat the virus! pic.twitter.com/CLveOMJVak