ಅಫ್ಘಾನ್ ನಲ್ಲಿ ತಾಲೀಬಾನ್ ಆಡಳಿತದ ಬಳಿಕ ಜಮ್ಮು-ಕಾಶ್ಮೀರದಲ್ಲಿ ಭದ್ರತಾ ಸಿಬ್ಬಂದಿ, ಜನತೆಯ ಹತ್ಯೆ ಏರಿಕೆ!
ಅಫ್ಘಾನಿಸ್ತಾನದಲ್ಲಿ ತಾಲೀಬಾನ್ ಆಡಳಿತ ಜಾರಿಗೆ ಬಂದ ಬಳಿಕ ಜಮ್ಮು-ಕಾಶ್ಮೀರದಲ್ಲಿ ಭದ್ರತಾ ಸಿಬ್ಬಂದಿ, ಜನತೆಯ ಹತ್ಯೆಯ ಪ್ರಕರಣಗಳಲ್ಲೂ ಏರಿಕೆ ಕಂಡಿದೆ.
Published: 05th November 2021 10:21 AM | Last Updated: 05th November 2021 10:21 AM | A+A A-

ಸಾಂಕೇತಿಕ ಚಿತ್ರ
ಶ್ರೀನಗರ: ಅಫ್ಘಾನಿಸ್ತಾನದಲ್ಲಿ ತಾಲೀಬಾನ್ ಆಡಳಿತ ಜಾರಿಗೆ ಬಂದ ಬಳಿಕ ಜಮ್ಮು-ಕಾಶ್ಮೀರದಲ್ಲಿ ಭದ್ರತಾ ಸಿಬ್ಬಂದಿ, ಜನತೆಯ ಹತ್ಯೆಯ ಪ್ರಕರಣಗಳಲ್ಲೂ ಏರಿಕೆ ಕಂಡಿದೆ.
ಆಗಸ್ಟ್ ಮಧ್ಯದಲ್ಲಿ ಅಫ್ಘಾನಿಸ್ತಾನ ತಾಲೀಬಾನ್ ವಶವಾಗಿತ್ತು. ಅಂಕಿ-ಅಂಶಗಳ ಪ್ರಕಾರ ಆ.15 ರಿಂದ ಅಕ್ಟೋಬರ್ ಮಾಸಾಂತ್ಯದ ವರೆಗೂ ಜಮ್ಮು-ಕಾಶ್ಮೀರದಲ್ಲಿ 16 ಭದ್ರತಾ ಸಿಬ್ಬಂದಿಗಳು, 15 ಪ್ರಜೆಗಳು ಉಗ್ರರ ದಾಳಿಯಲ್ಲಿ ಪ್ರಾಣ ಕಳೆದುಕೊಂಡಿದ್ದಾರೆ.
ಇದೇ ಅವಧಿಯಲ್ಲಿ 39 ಉಗ್ರರನ್ನೂ, ಉಗ್ರ ಸಂಘಟನೆಗಳ ಕಮಾಂಡರ್ ಗಳನ್ನು ಎನ್ ಕೌಂಟರ್ ನಲ್ಲಿ ಹತ್ಯೆ ಮಾಡಲಾಗಿದೆ.
ಅಕ್ಟೋಬರ್ ತಿಂಗಳಲ್ಲಿ 12 ಭದ್ರತಾ ಸಿಬ್ಬಂದಿಗಳು, 20 ಉಗ್ರರು ಹಾಗೂ 12 ನಾಗರಿಕರು ಹತ್ಯೆಗೀಡಾಗಿದ್ದಾರೆ. ಸೆಪ್ಟೆಂಬರ್ ನಲ್ಲಿ ಮೂವರು ಭದ್ರತಾ ಸಿಬ್ಬಂದಿಗಳು 8 ಮಂದಿ ಉಗ್ರರು, ಓರ್ವ ನಾಗರಿಕ ಜೀವ ಕಳೆದುಕೊಂಡಿದ್ದರು.
"ಆ.15 ರಿಂದ ಆ.31 ರ ಅವಧಿಯಲ್ಲಿ ಓರ್ವ ಭದ್ರತಾ ಸಿಬ್ಬಂದಿ ಉಗ್ರರ ದಾಳಿಯಲ್ಲಿ ಹುತಾತ್ಮರಾಗಿದ್ದರೆ, 11 ಉಗ್ರರನ್ನು ಎನ್ ಕೌಂಟರ್ ನಲ್ಲಿ ಹತ್ಯೆ ಮಾಡಲಾಗಿತ್ತು. ಇಬ್ಬರು ನಾಗರಿಕರು ಸಾವನ್ನಪ್ಪಿದ್ದರು" ಎಂಬುದನ್ನು ಅಂಕಿ-ಅಂಶಗಳು ಬಹಿರಂಗಪಡಿಸುತ್ತಿದೆ.
ಆ.14 ರಂದು ತಾಲೀಬಾನ್ ಉಗ್ರರು ಅಫ್ಘಾನಿಸ್ತಾನವನ್ನು ವಶಪಡಿಸಿಕೊಂಡಿದ್ದರು. ಇದು ಉಗ್ರರಿಗೆ ಉತ್ತೇಜನ ನೀಡುವ ಬೆಳವಣಿಗೆಯಾಗಿ ಜಮ್ಮು-ಕಾಶ್ಮೀರದಲ್ಲಿ ಮತ್ತೆ ಉಗ್ರ ಚಟುವಟಿಕೆಗಳು ಹೆಚ್ಚಾಗಲಿವೆ ಎಂಬ ಎಚ್ಚರಿಕೆಯನ್ನು ಭದ್ರತಾ ತಜ್ಞರು ನೀಡಿದ್ದರು. ಕಳೆದ 2 ತಿಂಗಳ ಅಂಕಿ-ಅಂಶಗಳ ಪ್ರಕಾರ ಭದ್ರತಾ ಪಡೆಗಳು, ನಾಗರಿಕರ ಜೀವ ಹಾನಿ ಹೆಚ್ಚಾಗಿದ್ದರೆ, ಉಗ್ರರ ಸಾವುಗಳ ಸಂಖ್ಯೆ ಕಡಿಮೆಯಾಗಿದೆ.