ಭಾರತೀಯ ಮೀನುಗಾರನ ಹತ್ಯೆ ಪ್ರಕರಣ: ಪಾಕಿಸ್ತಾನದ 10 ಕಡಲ ಭದ್ರತಾ ಸಿಬ್ಬಂದಿ ವಿರುದ್ಧ ಎಫ್ಐಆರ್
ಪೋರಬಂದರ್: ಗುಜರಾತ್ ಕರಾವಳಿಯ ಅರೇಬಿಯನ್ ಸಮುದ್ರದ ಗಡಿರೇಖೆ ಬಳಿ ಪಾಕಿಸ್ತಾನದ ಭದ್ರತಾ ಸಿಬ್ಬಂದಿ, ಭಾರತೀಯ ಮೀನುಗಾರರ ಮೇಲೆ ಗುಂಡಿನ ದಾಳಿ ನಡೆಸಿದ್ದರು. ಈ ಸಂಬಂಧ ಇದೀಗ 10 ಪಾಕ್ನ ನೌಕಾ ನೆಲೆಯ ಭದ್ರತಾ ಸಿಬ್ಬಂದಿ ವಿರುದ್ಧ ಎಫ್ ಐಆರ್ ದಾಖಲಿಸಲಾಗಿದೆ.
ಪೋರಬಂದರ್ ನ ನವಿಬಂದರ್ ಪೊಲೀಸರು ಓರ್ವ ಮೀನುಗಾರನನ್ನು ಕೊಲ್ಲುವುದರಲ್ಲಿ ಭಾಗಿಯಾಗಿರುವ ಸಿಬ್ಬಂದಿ ವಿರುದ್ಧ ಎಫ್ ಐಆರ್ ದಾಖಲಿಸಿದ್ದಾರೆ. ಭಾರತೀಯ ಮೀನುಗಾರರ ಮೇಲೆ ಗುಂಡಿನ ದಾಳಿ ನಡೆಸಿದ ಪಾಕಿಸ್ತಾನ ಪಡೆಗಳ ಎರಡು ದೋಣಿಗಳಲ್ಲಿದ್ದ 10 ಸಿಬ್ಬಂದಿ ವಿರುದ್ಧ ಆರೋಪ ಹೊರಿಸಲಾಗಿದೆ.
ಅಂತಾರಾಷ್ಟ್ರೀಯ ಕಡಲ ಗಡಿ ರೇಖೆ(IMBL)ಬಳಿ ಪಾಕಿಸ್ತಾನದ ಕಡಲ ಭದ್ರತಾ ಸಿಬ್ಬಂದಿ ಎರಡು ಭಾರತೀಯ ಮೀನುಗಾರಿಕಾ ದೋಣಿಗಳ ಮೇಲೆ ಗುಂಡಿನ ದಾಳಿ ನಡೆಸಿದ್ದರು. ಗುಜರಾತ್ ನ ದೇವಭೂಮಿ ದ್ವಾರಕಾ ಜಿಲ್ಲೆಯ ಓಖಾ ಕರಾವಳಿಯಲ್ಲಿ ಜಲ್ಪಾರಿ ಎಂಬ ದೋಣಿಯ ಮೇಲೆ ಗುಂಡಿನ ದಾಳಿ ನಡೆಸಲಾಗಿತ್ತು.
ಪಾಕ್ ನೌಕಾ ಸೇನೆಯಿಂದ ನಡೆದ ಈ ಫೈರಿಂಗ್ ನಲ್ಲಿ ಓರ್ವ ಮೀನುಗಾರ ಸಾವಿಗೀಡಾಗಿದ್ದು, ಮತ್ತೋರ್ವ ಗಾಯಗೊಂಡಿದ್ದಾರೆ.
Follow KannadaPrabha channel on WhatsApp
KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ