ಇದು ಸರ್ಕಸ್ ಅಥವಾ ಸಿನಿಮಾ ಅಲ್ಲ: ಅರೆನಗ್ನನಾಗಿ ಆನ್ ಲೈನ್ ವಿಚಾರಣೆಗೆ ಹಾಜರಾದ ವ್ಯಕ್ತಿ ವಿರುದ್ಧ ಕೇರಳ ಹೈಕೋರ್ಟ್ ಕೆಂಡಾಮಂಡಲ

ಹೈಕೋರ್ಟ್ ವಿಚಾರಣೆಯ ಕಲಾಪಕ್ಕೆ ಶರ್ಟ್ ಧರಿಸದೇ ಹಾಜರಾಗಿದ್ದ ವ್ಯಕ್ತಿಯ ವಿರುದ್ಧ ಕೇರಳ ಹೈಕೋರ್ಟ್ ಕೆಂಡಾಮಂಡಲವಾಗಿದೆ. 
ಕೇರಳ ಹೈಕೋರ್ಟ್
ಕೇರಳ ಹೈಕೋರ್ಟ್

ಕೊಚ್ಚಿ: ಹೈಕೋರ್ಟ್ ವಿಚಾರಣೆಯ ಕಲಾಪಕ್ಕೆ ಶರ್ಟ್ ಧರಿಸದೇ ಹಾಜರಾಗಿದ್ದ ವ್ಯಕ್ತಿಯ ವಿರುದ್ಧ ಕೇರಳ ಹೈಕೋರ್ಟ್ ಕೆಂಡಾಮಂಡಲವಾಗಿದೆ. 

ವರ್ಚ್ಯುಯಲ್ ಕಲಾಪದ ವೇಳೆ ಶರ್ಟ್ ಧರಿಸದೇ ಅರೆನಗ್ನರಾಗಿ ಕ್ಯಾಮರಾ ಮುಂದೆ ಬಂದ ವ್ಯಕ್ತಿಗೆ "ಇದು ಸರ್ಕಸ್ ಅಥವಾ ಸಿನಿಮಾ ಅಲ್ಲ" ಎಂದು ಹೈಕೋರ್ಟ್ ತೀಕ್ಷ್ಣ ಎಚ್ಚರಿಕೆ ನೀಡಿದೆ. 

"ಏನಿದು? ಏನು ನಡೆಯುತ್ತಿದೆ. ಇದು ಕೋರ್ಟ್, ಸರ್ಕಸ್ ಅಥವಾ ಸಿನಿಮಾ ಅಲ್ಲ" ಎಂದು ನ್ಯಾ.ದೇವನ್ ರಾಮಚಂದ್ರನ್ ತೀವ್ರ ಅಸಮಾಧಾನ ವ್ಯಕ್ತಪಡಿಸಿದರು. 

ಎರಡು ಬಾರಿ ಆತನಿಗೆ ಎಚ್ಚರಿಕೆ ನೀಡಿದರೂ ಸಹ ಆ ವ್ಯಕ್ತಿ ತನ್ನ ನಡೆಯನ್ನು ಸರಿಪಡಿಸಿಕೊಳ್ಳದೇ ಇದ್ದದ್ದು ನ್ಯಾಯಾಧೀಶರನ್ನು ಮತ್ತಷ್ಟು ಕೆರಳಿಸಿತು. ಪರಿಣಾಮ ತೀಕ್ಷ್ಣವಾಗಿ ಪ್ರತಿಕ್ರಿಯೆ ನೀಡಿದ ನ್ಯಾಯಾಧೀಶರು ಅಂತಹ ವ್ಯಕ್ತಿಗಳನ್ನು ಕಲಾಪದಿಂದ ಹೊರಹಾಕುವುದಾಗಿ ಹೇಳಿದ್ದಾರೆ.

ನ್ಯಾಯಾಧೀಶರು ಈ ರೀತಿ ಎಚ್ಚರಿಕೆ ನೀಡುತ್ತಿದ್ದಂತೆಯೇ ಆ ವ್ಯಕ್ತಿ ಲಾಗ್ ಔಟ್ ಆಗಿದ್ದಾರೆ. ಕಳೆದ ವರ್ಷ ಕೋವಿಡ್-19 ಸಾಂಕ್ರಾಮಿಕ ಎದುರಾದಾಗಿನಿಂದಲೂ ಹೈಕೋರ್ಟ್ ವರ್ಚ್ಯುಯಲ್ ಕಲಾಪವನ್ನು ನಡೆಸುತ್ತಿದೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com