ಸೌರಭ್ ಕೃಪಾಲ್: ಹೈಕೋರ್ಟ್ ಗೆ ಮೊದಲ ಸಲಿಂಗಿ ನ್ಯಾಯಾಧೀಶರಾಗಿ ನೇಮಕಗೊಳ್ಳುವ ಸಾಧ್ಯತೆ

ಸುಪ್ರೀಂ ಕೋರ್ಟ್ ನ ಹಿರಿಯ ಅಡ್ವೊಕೇಟ್ ಸೌರಭ್ ಕೃಪಾಲ್ ದೇಶದ ಹೈಕೋರ್ಟ್ ಗೆ ನ್ಯಾಯಾಧೀಶರಾಗಿ ನೇಮಕಗೊಳ್ಳುವ ಮೊದಲ ಸಲಿಂಗಿಯಾಗುವ ಸಾಧ್ಯತೆ ಇದೆ. 
ಕೋರ್ಟ್ (ಸಾಂಕೇತಿಕ ಚಿತ್ರ)
ಕೋರ್ಟ್ (ಸಾಂಕೇತಿಕ ಚಿತ್ರ)

ನವದೆಹಲಿ: ಸುಪ್ರೀಂ ಕೋರ್ಟ್ ನ ಹಿರಿಯ ಅಡ್ವೊಕೇಟ್ ಸೌರಭ್ ಕೃಪಾಲ್ ದೇಶದ ಹೈಕೋರ್ಟ್ ಗೆ ನ್ಯಾಯಾಧೀಶರಾಗಿ ನೇಮಕಗೊಳ್ಳುವ ಮೊದಲ ಸಲಿಂಗಿಯಾಗುವ ಸಾಧ್ಯತೆ ಇದೆ. 

ದೆಹಲಿ ಹೈಕೋರ್ಟ್ ಗೆ ಸೌರಭ್ ಕೃಪಾಲ್ ಅವರನ್ನು ನ್ಯಾಯಾಧೀಶರಾಗಿ ನೇಮಕ ಮಾಡಲು ಸುಪ್ರೀಂ ಕೋರ್ಟ್ ನ ಕೊಲಿಜಿಯಂ ಶಿಫಾರಸ್ಸು ಮಾಡಿದ್ದು, ಈ ಶಿಫಾರಸ್ಸನ್ನು ಕೇಂದ್ರ ಸರ್ಕಾರ ಅಂಗೀಕರಿಸಬೇಕಿದೆ. 

ಸೌರಭ್ ಕೃಪಾಲ್ ಅವರ ಲೈಂಗಿಕ ದೃಷ್ಟಿಕೋನದ ಕಾರಣದಿಂದ ಅವರ ನೇಮಕಾತಿ ವಿವಾದದ ವಿಷಯವಾಗುವ ಸಾಧ್ಯತೆ ಇದೆ. ಆದರೆ ಅವರ ನೇಮಕಾತಿಯ ವಿಷಯ ಕೇಂದ್ರದ ಅನುಮೋದನೆಯ ಮೇಲೆ ಆಧರಿತವಾಗಿದೆ. 

ಸಲಿಂಗ ಕಾಮಿಗಳ ಲೈಂಗಿಕ ಆಸಕ್ತಿಗಳನ್ನು ಅಪರಾಧದ ಪರಿಧಿಯಿಂದ ಹೊರಗಿಡುವುದಕ್ಕೆ ಸುಪ್ರೀಂ ಕೋರ್ಟ್ ಮಹತ್ವದ ತೀರ್ಪು ನೀಡಿತ್ತು. ಈ ಪ್ರಕರಣದಲ್ಲಿ ಸಲಿಂಗಿಗಳ ಹಿತಾಸಕ್ತಿಯ ಪರವಾಗಿ ಪ್ರತಿನಿಧಿಸಿದ್ದ ವಕೀಲರೂ ಆಗಿದ್ದಾರೆ ಕೃಪಾಲ್. 

ದೆಹಲಿ ಹೈಕೋರ್ಟ್ ನಲ್ಲಿ ಎಲ್ಲಾ 31 ನ್ಯಾಯಾಧೀಶರ ಮತಗಳನ್ನು ಪಡೆದು ಮಾರ್ಚ್ ತಿಂಗಳಲ್ಲಿ ಹಿರಿಯ ಅಡ್ವೊಕೇಟ್ ಪದವಿಯನ್ನು ಪಡೆದಿದ್ದರು. ಸೌರಭ್ ಕೃಪಾಲ್ 2002 ರಲ್ಲಿ ಭಾರತದ ಸಿಜೆಐ ಆಗಿದ್ದ ಭೂಪೇಂದ್ರ ನಾಥ್ ಕೃಪಾಲ್ ಅವರ ಪುತ್ರರಾಗಿದ್ದಾರೆ. 

ಎರಡು ದಶಕಗಳಿಗೂ ಹೆಚ್ಚು ಸಮಯದಿಂದ ಕಾನೂನು ಅಭ್ಯಾಸದಲ್ಲಿ ತೊಡಗಿರುವ ಸೌರಭ್ ಕೃಪಾಲ್ ಆಕ್ಸ್ಫರ್ಡ್, ಕೇಂಬ್ರಿಡ್ಜ್ ವಿಶ್ವವಿದ್ಯಾನಿಲಯಗಳಿಂದ ಕಾನೂನು ಪದವಿ ಪಡೆದಿದ್ದಾರೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com