ನವಜೋತ್ ಸಿಂಗ್ ಸಿಧು
ದೇಶ
ಭಾರತ-ಪಾಕಿಸ್ತಾನ ಹೊಸ ಅಧ್ಯಾಯಕ್ಕೆ ಮುಂದಾಗಲಿ; ವ್ಯಾಪಾರ ವಹಿವಾಟು ಮುಂದುವರೆಯಲಿ: ನವಜೋತ್ ಸಿಂಗ್ ಸಿಧು
ಪಂಜಾಬ್ ಕಾಂಗ್ರೆಸ್ ನ ಅಧ್ಯಕ್ಷ ನವಜೋತ್ ಸಿಂಗ್ ಸಿಧು ಪಾಕಿಸ್ತಾನದ ವಿಷಯವಾಗಿ ಹೇಳಿಕೆ ನೀಡಿ ಮತ್ತೊಮ್ಮೆ ವಿವಾದಕ್ಕೆ ಗುರಿಯಾಗಿದ್ದಾರೆ.
ಲಾಹೋರ್: ಪಂಜಾಬ್ ಕಾಂಗ್ರೆಸ್ ನ ಅಧ್ಯಕ್ಷ ನವಜೋತ್ ಸಿಂಗ್ ಸಿಧು ಪಾಕಿಸ್ತಾನದ ವಿಷಯವಾಗಿ ಹೇಳಿಕೆ ನೀಡಿ ಮತ್ತೊಮ್ಮೆ ವಿವಾದಕ್ಕೆ ಗುರಿಯಾಗಿದ್ದಾರೆ.
ಕರ್ತಾರ್ ಪುರಕ್ಕೆ ಭೇಟಿ ನೀಡಿದ್ದ ಸಿಧು, ಬಾಬಾ ಗುರುನಾನಕ್ ಅವರ ಹೆಸರಿನಲ್ಲಿ ಹೊಸ ಸ್ನೇಹದ ಅಧ್ಯಾಯವೊಂದು ಪ್ರಾರಂಭವಾಗಬೇಕಿದೆ ಎಂದು ಅಭಿಪ್ರಾಯಪಟ್ಟಿದ್ದಾರೆ.
ಲಕ್ಷಾಂತರ ಮಂದಿ ಸಾವಿಗೆ ಕಾರಣವಾದ ವಿಶ್ವಯುದ್ಧದ ನಂತರ ಒಂದೇ ವೀಸಾ, ಒಂದೇ ಪಾಸ್ ಪೋರ್ಟ್, ಒಂದೇ ಕರೆನ್ಸಿಯಡಿ ಯುರೋಪ್ ಗಡಿಗಳನ್ನು ತೆರೆಯುತ್ತದೆ ಎಂದಾದರೆ, ಎಲ್ಲರೂ ಗೌರವಿಸುವ ಭಗತ್ ಸಿಂಗ್, ಮಹಾರಾಜ ರಂಜೀತ್ ಸಿಂಗ್ ಅವರುಗಳನ್ನು ಹೊಂದಿರುವ ನಾವೇಕೆ ಆ ರೀತಿ ಮಾಡಬಾರದು? ಎಂದು ಸಿಧು ಪ್ರಶ್ನಿಸಿದ್ದಾರೆ.
ತಾವು ಭಾರತ-ಪಾಕಿಸ್ತಾನದ ನಡುವೆ ಪರಸ್ಪರ ಪ್ರೀತಿ ಬಯಸುತ್ತಿರುವುದಾಗಿ ಹೇಳಿದ್ದಾರೆ. 74 ವರ್ಷಗಳಿಂದ ನಿರ್ಮಾಣ ಮಾಡಿರುವ ಗೋಡೆಗಳಿಗೆ ಕಿಟಕಿಗಳನ್ನು ತೆರೆಯುವ ಅಗತ್ಯವಿದೆ ಎಂದು ಸಿಧು ಹೇಳಿದ್ದು ಭಾರತ- ಪಾಕ್ ನಡುವೆ ; ವ್ಯಾಪಾರ ವಹಿವಾಟು ಮುಂದುವರೆಯಲಿ ಎಂದು ಆಶಿಸಿದ್ದಾರೆ.
Follow KannadaPrabha channel on WhatsApp
KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ