2022 ಪಂಜಾಬ್ ಚುನಾವಣೆ: ಪಟಿಯಾಲದಿಂದ ಅಮರಿಂದರ್ ಸಿಂಗ್ ಸ್ಪರ್ಧೆ!

ಪಂಜಾಬ್ ನ ಮಾಜಿ ಸಿಎಂ ಅಮರಿಂದರ್ ಸಿಂಗ್ 2022 ರ ವಿಧಾನಸಭಾ ಚುನಾವಣೆಯಲ್ಲಿ ಪಟಿಯಾಲದಿಂದ ಸ್ಪರ್ಧಿಸಲಿದ್ದಾರೆ. 
ಕ್ಯಾ.ಅಮರಿಂದರ್ ಸಿಂಗ್(ಸಂಗ್ರಹ ಚಿತ್ರ)
ಕ್ಯಾ.ಅಮರಿಂದರ್ ಸಿಂಗ್(ಸಂಗ್ರಹ ಚಿತ್ರ)

ಚಂಡೀಗಢ: ಪಂಜಾಬ್ ನ ಮಾಜಿ ಸಿಎಂ ಅಮರಿಂದರ್ ಸಿಂಗ್ 2022 ರ ವಿಧಾನಸಭಾ ಚುನಾವಣೆಯಲ್ಲಿ ಪಟಿಯಾಲದಿಂದ ಸ್ಪರ್ಧಿಸಲಿದ್ದಾರೆ. ಈ ಬಗ್ಗೆ ಫೇಸ್ ಬುಕ್ ಪೇಜ್ ನಲ್ಲಿ ಘೋಷಿಸಿರುವ ಅಮರಿಂದರ್ ಸಿಂಗ್, ನಾನು ಪಟಿಯಾಲದಲ್ಲೇ ಚುನಾವಣೆ ಎದುರಿಸುತ್ತೇನೆ ಎಂದು ಹೇಳಿದ್ದಾರೆ. 

ಪಟಿಯಾಲ ನಮ್ಮೊಂದಿಗೆ 400 ವರ್ಷಗಳಿಂದಲೂ ಇದೆ. ಸಿಧು ಅವರ ಕಾರಣಕ್ಕಾಗಿ ನಾನು ಅದನ್ನು ಬಿಡುವುದಿಲ್ಲ ಎಂದು ಅಮರಿಂದರ್ ಸಿಂಗ್ ತಮ್ಮ ಘೋಷಣೆಯಲ್ಲಿ ತಿಳಿಸಿದ್ದಾರೆ. 

ಪಟಿಯಾಲ ಕ್ಷೇತ್ರ ಅಮರಿಂದರ್ ಸಿಂಗ್ ಅವರ ಕುಟುಂಬದ ಭದ್ರಕೋಟೆಯಾಗಿದೆ. 2022, 2007, 2012, 2017 ರಲ್ಲಿ ನಾಲ್ಕು ಬಾರಿ ಈ ಕ್ಷೇತ್ರವನ್ನು ಅಮರಿಂದರ್ ಸಿಂಗ್ ಪ್ರತಿನಿಧಿಸಿದ್ದಾರೆ. 2014 ರಲ್ಲಿ ಅಮೃತ್ ಸರ ಲೋಕಸಭಾ ಕ್ಷೇತ್ರದಿಂದ ಗೆದ್ದ ನಂತರ ಈ ವಿಧಾನಸಭಾ ಕ್ಷೇತ್ರದ ಶಾಸಕ ಸ್ಥಾನಕ್ಕೆ ಅವರು ರಾಜೀನಾಮೆ ನೀಡಿದ್ದರು.

ಅಮರಿಂದರ್ ಸಿಂಗ್ ಪತ್ನಿ ಪ್ರಣೀತ್ ಕೌರ್ ಪಟಿಯಾಲ ಕ್ಷೇತ್ರದಿಂದ ಸ್ಪರ್ಧಿಸಿ ಮೂರು ವರ್ಷಗಳ ಕಾಲ ಆ ಕ್ಷೇತ್ರವನ್ನು ಪ್ರತಿನಿಧಿಸಿದ್ದರು. ಪಟಿಯಾಲದಿಂದ ಸ್ಪರ್ಧಿಸುವಂತೆ ನವಜೋತ್ ಸಿಂಗ್ ಸಿಧುಗೆ ಸವಾಲು ಹಾಕಿದ್ದ ಅಮರಿಂದರ್ ಸಿಂಗ್ ಒಂದು ವೇಳೆ ಸಿಧು ಆ ಕ್ಷೇತ್ರದಿಂದ ಸ್ಪರ್ಧಿಸಿದ್ದೇ ಆದಲ್ಲಿ ಅವರು ಠೇವಣಿ ಕಳೆದುಕೊಳ್ಳಲಿದ್ದಾರೆ ಎಂದೂ ಹೇಳಿದ್ದರು. ಸಿಧು ಹಾಗೂ ತಮ್ಮ ನಡುವಿನ ರಾಜಕೀಯ ತಿಕ್ಕಾಟದ ಕಾರಣದಿಂದಾಗಿ ಅಮರಿಂದರ್ ಸಿಂಗ್ ಪಂಜಾಬ್ ಸಿಎಂ ಸ್ಥಾನದಿಂದ ಸೆಪ್ಟೆಂಬರ್ ನಲ್ಲಿ ಕೆಳಗಿಳಿದಿದ್ದರು. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com