ಒಡಿಶಾ: ಆಪ್ ಮೂಲಕ 1465 ಬೋಗಸ್ ರೈತರ ಪತ್ತೆ: ಉಪಗ್ರಹ ಚಿತ್ರಗಳ ನೆರವು

ಪತ್ತೆಯಾಗಿರುವ ಬೋಗಸ್ ರೈತರ ಅರ್ಜಿಗಳನ್ನು ತಿರಸ್ಕರಿಸಲಾಗಿದೆ ಎಂದು ಜಿಲ್ಲಾಡಳಿತ ತಿಳಿಸಿದೆ. ಅಲ್ಲದೆ ಅವರಿಗೆ ನಿರ್ಬಂಧ ವಿಧಿಸಲಾಗಿದೆ. 
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ
Updated on

ಭುವನೇಶ್ವರ: ಒಡಿಶಾದ ಕೊರಪುತ್ ಎಂಬಲ್ಲಿ ಭತ್ತ ಮಾರಾಟಕ್ಕೆಂದು 38,706 ಮಂದಿ ರೈತರು ಹೆಸರು ನೊಂದಾಯಿಸಿಕೊಂಡಿದ್ದರು. ಅವರಲ್ಲಿ 1465 ಮಂದಿ ನಕಲಿ ಎಂಬುದು ಪತ್ತೆಯಾಗಿದೆ. 

ಈ ಸಂದರ್ಭದಲ್ಲಿ ಜಿಲ್ಲಡಳಿತಕ್ಕೆ ಅನುಮಾನ ಬಂದು remote sensing application ಸಹಾಯದಿಂದ ಪರಿಶೀಲನೆ ನಡೆಸಿತ್ತು. ಸುಮಾರು 6,000 ಅರ್ಜಿಗಳು ಅನುಮಾನಾಸ್ಪದವಾಗಿ ಕಂಡುಬಂದ ಹಿನ್ನೆಲೆಯಲ್ಲಿ ತಪಾಸನೆಗೆ ಮುಂದಾಗಿತ್ತು. 

ಅದಕ್ಕಾಗಿ 6,000 ಭತ್ತದ ಗದ್ದೆಗಳ ಇರುವಿಕೆ ಖಾತರಿ ಪಡಿಸಿಕೊಳ್ಳಲು ಅಧಿಕಾರಿಗಳು ತಂತ್ರಜ್ನಾನದ ಮೊರೆ ಹೋಗಿದ್ದರು. ಉಪಗ್ರಹ ಚಿತ್ರಗಳ ನೆರವು ಪಡೆದುಕೊಳ್ಳಲಾಗಿದೆ ಎನ್ನುವುದು ವಿಶೇಷ.

ಪತ್ತೆಯಾಗಿರುವ ಬೋಗಸ್ ರೈತರ ಅರ್ಜಿಗಳನ್ನು ತಿರಸ್ಕರಿಸಲಾಗಿದೆ ಎಂದು ಜಿಲ್ಲಾಡಳಿತ ತಿಳಿಸಿದೆ. ಅಲ್ಲದೆ ಅವರಿಗೆ ನಿರ್ಬಂಧ ವಿಧಿಸಲಾಗಿದೆ. 

remote sensing app ಮೂಲಕ ಅಸಲಿ ರೈತರ ಪತ್ತೆ ಸುಲಭವಾಗಲಿದೆ, ವ್ಯವಸ್ಥೆ ಪಾರದರ್ಶಕವಾಗಲಿದೆ ಎಂದು ಅಧಿಕಾರಿಗಳು ವಿಶ್ವಾಸ ವ್ಯಕ್ತಪಡಿಸಿದ್ದಾರೆ. 

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com