ಚಲಿಸುತ್ತಿರುವ ರೈಲಿನಲ್ಲಿ ವಿದ್ಯಾರ್ಥಿನಿಯಿಂದ ಅಪಾಯಕಾರಿ 'ಸ್ಟಂಟ್ಸ್'; ಆಘಾತಕಾರಿ ವಿಡಿಯೋ ವೈರಲ್
ರಸ್ತೆಯಲ್ಲಿ ಅಥವಾ ಅನೇಕ ಸ್ಥಳಗಳಲ್ಲಿ ಅಪಾಯಕಾರಿ ಸಾಹಸಗಳನ್ನು ಮಾಡುವ ಜನರನ್ನು ನೋಡಿರುತ್ತೀರೀ. ನಿಜವಾಗಿಯೂ ರಾತ್ರೋರಾತ್ರಿ ಫೇಮಸ್ ಆಗಲು ತಮ್ಮ ಪ್ರಾಣವನ್ನೇ ಪಣಕ್ಕಿಟ್ಟು ಸ್ಟಂಟ್‌ಗಳನ್ನು ಮಾಡುತ್ತಾರೆ.
Published: 25th November 2021 11:35 PM | Last Updated: 25th November 2021 11:35 PM | A+A A-

ರೈಲು ಸ್ಟಂಟ್ಸ್
ಚೆನ್ನೈ: ರಸ್ತೆಯಲ್ಲಿ ಅಥವಾ ಅನೇಕ ಸ್ಥಳಗಳಲ್ಲಿ ಅಪಾಯಕಾರಿ ಸಾಹಸಗಳನ್ನು ಮಾಡುವ ಜನರನ್ನು ನೋಡಿರುತ್ತೀರೀ. ನಿಜವಾಗಿಯೂ ರಾತ್ರೋರಾತ್ರಿ ಫೇಮಸ್ ಆಗಲು ತಮ್ಮ ಪ್ರಾಣವನ್ನೇ ಪಣಕ್ಕಿಟ್ಟು ಸ್ಟಂಟ್‌ಗಳನ್ನು ಮಾಡುತ್ತಾರೆ.
ಆಘಾತಕಾರಿ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, ವಿಡಿಯೋದಲ್ಲಿ ಶಾಲಾ ವಿದ್ಯಾರ್ಥಿನಿ ಹಾಗೂ ವಿದ್ಯಾರ್ಥಿ ಚಲಿಸುತ್ತಿರುವ ರೈಲಿನಿಂದ ಮಾರಣಾಂತಿಕ ಸಾಹಸಗಳನ್ನು ಪ್ರದರ್ಶಿಸುತ್ತಿರುವುದನ್ನು ಕಾಣಬಹುದು. ಚೆನ್ನೈನ ಉಪನಗರದಲ್ಲಿರುವ ಕವರಪೆಟ್ಟೈ ರೈಲು ನಿಲ್ದಾಣದಲ್ಲಿ ನಡೆದಿರುವ ಈ ಘಟನೆ ಜನರಲ್ಲಿ ಅಚ್ಚರಿ ಮೂಡಿಸಿದೆ.
ವೀಡಿಯೋದಲ್ಲಿ ಶಾಲಾ ಸಮವಸ್ತ್ರ ಧರಿಸಿದ ಬಾಲಕ ಮತ್ತು ಬಾಲಕಿ ಚಲಿಸುತ್ತಿರುವ ರೈಲಿನಲ್ಲಿ ಓಡುತ್ತಿರುವುದನ್ನು ಕಾಣಬಹುದು. ರೈಲಿನ ವೇಗ ಹೆಚ್ಚಾದಂತೆ, ವಿದ್ಯಾರ್ಥಿಗಳು ಬಾಗಿಲಿಗೆ ಜೋಡಿಸಲಾದ ಬಾರ್ ಅನ್ನು ಹಿಡಿದುಕೊಂಡು. ರೋಮಾಂಚನಕ್ಕಾಗಿ ಪ್ಲಾಟ್‌ಫಾರ್ಮ್‌ಗೆ ಅಡ್ಡಲಾಗಿ ತಮ್ಮ ಪಾದಗಳನ್ನು ಎಳೆಯುವುದನ್ನು ಕಾಣಬಹುದು. ನಂತರ ರೈಲು ನಿಲ್ದಾಣದಿಂದ ಹೊರಡುವಾಗ, ಇಬ್ಬರೂ ರೈಲಿನೊಳಗೆ ಏರುತ್ತಾರೆ. ವಿಡಿಯೋವನ್ನು ಪತ್ತೆಯಾಗಿಲ್ಲ ಆದರೆ ಕೊರುಕ್ಕುಪೇಟೆ ಪೊಲೀಸರು ಈ ಬಗ್ಗೆ ತನಿಖೆ ಆರಂಭಿಸಿದ್ದಾರೆ.
In a video that has been trending on social media, two school students can be seen dangerously boarding a running electric train and performing ‘stunts' at the Kavaraipettai Railway Station near Tamil Nadu's Gummidipoondi. pic.twitter.com/iiTnTqkRl1
— The New Indian Express (@NewIndianXpress) November 25, 2021