'ಬೀಜಿಂಗ್ ಜನತಾ ಪಕ್ಷ': ಚೀನಾದ ಅತಿಕ್ರಮಣ ಕುರಿತು ಬಿಜೆಪಿ ವಿರುದ್ಧ ಮಲ್ಲಿಕಾರ್ಜುನ ಖರ್ಗೆ ವಾಗ್ದಾಳಿ
ಕೇಂದ್ರ ಸರ್ಕಾರ ಚೀನಾಗೆ ಭಾರತೀಯ ಭೂಪ್ರದೇಶವನ್ನು ಬಿಟ್ಟುಕೊಟ್ಟಿದೆ ಎಂದು ಶನಿವಾರ ಆರೋಪಿಸಿದ ರಾಜ್ಯಸಭೆಯ ಪ್ರತಿಪಕ್ಷ ನಾಯಕ ಮಲ್ಲಿಕಾರ್ಜುನ ಖರ್ಗೆ ಅವರು, ಬಿಜೆಪಿಯು "ಬೀಜಿಂಗ್ ಜನತಾ ಪಕ್ಷ" ವಾಗಿ...
Published: 27th November 2021 07:25 PM | Last Updated: 27th November 2021 07:25 PM | A+A A-

ಮಲ್ಲಿಕಾರ್ಜುನ ಖರ್ಗೆ
ನವದೆಹಲಿ: ಕೇಂದ್ರ ಸರ್ಕಾರ ಚೀನಾಗೆ ಭಾರತೀಯ ಭೂಪ್ರದೇಶವನ್ನು ಬಿಟ್ಟುಕೊಟ್ಟಿದೆ ಎಂದು ಶನಿವಾರ ಆರೋಪಿಸಿದ ರಾಜ್ಯಸಭೆಯ ಪ್ರತಿಪಕ್ಷ ನಾಯಕ ಮಲ್ಲಿಕಾರ್ಜುನ ಖರ್ಗೆ ಅವರು, ಬಿಜೆಪಿಯು "ಬೀಜಿಂಗ್ ಜನತಾ ಪಕ್ಷ" ವಾಗಿ ರೂಪಾಂತರಗೊಂಡಿದೆ ಎಂದು ಹೇಳಿದ್ದಾರೆ.
"ಅರುಣಾಚಲ ಪ್ರದೇಶದಲ್ಲಿ, ಬಿಜೆಪಿ ಸರ್ಕಾರ ಚೀನಾಗೆ ಹಳ್ಳಿಗಳನ್ನು ನಿರ್ಮಿಸಲು ಅವಕಾಶ ನೀಡುತ್ತಿದೆ, ಉತ್ತರ ಪ್ರದೇಶದಲ್ಲಿ ಬಿಜೆಪಿ ಸರ್ಕಾರವು ಚೀನಾದ ವಿಮಾನ ನಿಲ್ದಾಣವನ್ನು ತನ್ನದೇ ಎಂದು ತೋರಿಸುತ್ತಿದೆ ಎಂದು ಖರ್ಗೆ ವಾಗ್ದಾಳಿ ನಡೆಸಿದ್ದಾರೆ.
ಇದನ್ನು ಓದಿ: ಸಂಸತ್ ಚಳಿಗಾಲದ ಅಧಿವೇಶನದ ಮೊದಲ ದಿನ ಪ್ರತಿಪಕ್ಷಗಳ ನಾಯಕರ ಸಭೆ ಕರೆದ ಕಾಂಗ್ರೆಸ್
"ಕೇಂದ್ರ ಸರ್ಕಾರ ಲಡಾಖ್‌ನಲ್ಲಿ ನಮ್ಮ ಪ್ರದೇಶವನ್ನು ಚೀನಾಕ್ಕೆ ಒಪ್ಪಿಸುತ್ತಿದೆ ಮತ್ತು ಬಿಟ್ಟುಕೊಡುತ್ತದೆ. ಬಿಜೆಪಿ ಬೀಜಿಂಗ್ ಜನತಾ ಪಕ್ಷವಾಗಿ ರೂಪಾಂತರಗೊಂಡಿದೆ" ಎಂದು ಹಿರಿಯ ಕಾಂಗ್ರೆಸ್ ನಾಯಕ ಟ್ವೀಟ್ ಮಾಡಿದ್ದಾರೆ.
ಲಡಾಖ್ ಮತ್ತು ಉತ್ತರಾಖಂಡದಲ್ಲಿ ಚೀನಾದ ಆಕ್ರಮಣಗಳ ಟೀಕಿಸುತ್ತಿದ್ದ ಕಾಂಗ್ರೆಸ್, ಈಗ ಅರುಣಾಚಲ ಪ್ರದೇಶದಲ್ಲೂ ಚೀನಾ ಅತಿಕ್ರಮಣಕ್ಕೆ ಸಂಬಂಧಿಸಿದಂತೆ ಮೋದಿ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದೆ.
ಪ್ರಧಾನಿ ನರೇಂದ್ರ ಮೋದಿ ಅವರು ಚೀನಾ ವಿರುದ್ಧ ಕ್ರಮ ಕೈಗೊಳ್ಳಬೇಕು ಮತ್ತು ಭಾರತದ ಭೂಭಾಗವನ್ನು ಮರಳಿ ಪಡೆಯಬೇಕು ಎಂದು ರಾಜ್ಯಸಭೆ ಪ್ರತಿಪಕ್ಷ ನಾಯಕ ಖರ್ಗೆ ಒತ್ತಾಯಿಸಿದ್ದಾರೆ.