ಎಂಎಸ್ ಪಿ ಕಾನೂನು ಜಾರಿಗೊಳಿಸಿ ಅಥವಾ ಗಣರಾಜ್ಯ ದಿನದಂದು ಮತ್ತೊಂದು ಪ್ರಬಲ ಪ್ರತಿಭಟನೆ ಎದುರಿಸಿ: ಟಿಕಾಯತ್ 

ರೈತರಿಗೆ ಎಂಎಸ್ ಪಿ ಖಾತ್ರಿಪಡಿಸುವ ಕಾನೂನನ್ನು ಕೇಂದ್ರ ಸರ್ಕಾರ ಜಾರಿಗೆ ತರಬೇಕು ಇಲ್ಲದೇ ಇದ್ದಲ್ಲಿ ನಾಲ್ಕು ಲಕ್ಷ ಟ್ರಾಕ್ಟರ್ ಗಳನ್ನೊಳಗೊಂಡ ಮತ್ತೊಂದು ಬೃಹತ್ ಪ್ರತಿಭಟನಾ ಮೆರವಣಿಗೆಯನ್ನು ಗಣರಾಜ್ಯೋತ್ಸವ ದಿನದಂದು ಎದುರಿಸಬೇಕು-ಟಿಕಾಯತ್
ಮುಂಬೈ ನಲ್ಲಿ ನಡೆದ ಮಹಾಪಂಚಾಯತ್ ನಲ್ಲಿ ರೈತ ಮುಖಂಡರು
ಮುಂಬೈ ನಲ್ಲಿ ನಡೆದ ಮಹಾಪಂಚಾಯತ್ ನಲ್ಲಿ ರೈತ ಮುಖಂಡರು

ಮುಂಬೈ: ರೈತರಿಗೆ ಕನಿಷ್ಠ ಬೆಂಬಲ ಬೆಲೆ (ಎಂಎಸ್ ಪಿ) ಖಾತ್ರಿಪಡಿಸುವ ಕಾನೂನನ್ನು ಕೇಂದ್ರ ಸರ್ಕಾರ ಜಾರಿಗೆ ತರಬೇಕು ಇಲ್ಲದೇ ಇದ್ದಲ್ಲಿ ನಾಲ್ಕು ಲಕ್ಷ ಟ್ರಾಕ್ಟರ್ ಗಳನ್ನೊಳಗೊಂಡ ಮತ್ತೊಂದು ಬೃಹತ್ ಪ್ರತಿಭಟನಾ ಮೆರವಣಿಗೆಯನ್ನು ಗಣರಾಜ್ಯೋತ್ಸವ ದಿನದಂದು ಎದುರಿಸಬೇಕು ಎಂದು ರಾಕೇಶ್ ಟಿಕಾಯತ್ ಎಚ್ಚರಿಕೆ ನೀಡಿದ್ದಾರೆ. 
 
ಮುಂಬೈ ನ ಆಜಾದ್ ಮೈದಾನದಲ್ಲಿ ನಡೆದ ಮಹಾಪಂಚಾಯತ್ ನ ನಂತರ ಮಾತನಾಡಿರುವ ಟಿಕಾಯತ್, ಮೋದಿ ಸರ್ಕಾರ ಎಂಎಸ್ ಪಿ ವಿಷಯವಾಗಿ ಚರ್ಚೆಯಿಂದ ಓಡಿಹೋಗುತ್ತಿದೆ ಎಂದು ಆರೋಪಿಸಿದ್ದಾರೆ.

ಗುಜರಾತ್ ನ ಮುಖ್ಯಮಂತ್ರಿಯಾಗಿದ್ದಾಗ ಮೋದಿ ಅವರು ಎಂಎಸ್ ಪಿಯನ್ನು ಬೆಂಬಲಿಸುತ್ತಿದ್ದರು ಹಾಗೂ ರಾಷ್ಟ್ರವ್ಯಾಪಿ ಜಾರಿಗೆ ಸಹಮತ ಹೊಂದಿದ್ದರು ಎಂದು ಟಿಕಾಯತ್ ಹೇಳಿದ್ದಾರೆ. 

ಕೇಂದ್ರ ಸರ್ಕಾರ ಎಂಎಸ್ ಪಿ ಗೆ ಸಂಬಂಧಿಸಿದಂತೆ ಹೊಸ ಕಾನೂನನ್ನು ಜಾರಿಗೆ ತರಬೇಕು, ಇಲ್ಲದೇ ಇದ್ದಲ್ಲಿ ಜ.26 ದೂರವಿಲ್ಲ 4 ಲಕ್ಷ ಟ್ರಾಕ್ಟರ್ ಗಳು ಹಾಗೂ ರೈತರು ಇದ್ದೇ ಇದ್ದಾರೆ ಎಂದು ಟಿಕಾಯತ್ ಎಚ್ಚರಿಕೆ ನೀಡಿದ್ದಾರೆ.
 
ಮುಂಬರುವ ವಿಧಾನಸಭಾ ಚುನಾವಣೆಗಳಲ್ಲಿ ಬಿಜೆಪಿಯನ್ನು ಸೋಲಿಸುವುದಕ್ಕೆ ಕಿಸಾನ್ ಮಹಾಪಂಚಾಯತ್ ಕರೆ ನೀಡಿತ್ತು ಹಾಗೂ ಎಂಎಸ್ ಪಿ ಖಾತ್ರಿಪಡಿಸುವ ಕಾನೂನುಗಳ ಜಾರಿ, ವಿದ್ಯುತ್ ತಿದ್ದುಪಡಿ ಮಸೂದೆ ಹಿಂಪಡೆಯುವುದು, ಅಜಯ್ ಮಿಶ್ರಾ ಅವರನ್ನು ಕೇಂದ್ರ ಸಂಪುಟದಿಂದ ವಜಾ ಮಾಡಲು ಒತ್ತಾಯಿಸಿತ್ತು. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com