ಹೊಸ ಸ್ಕೂಟಿ ಖರೀದಿಸಿದ ವಿದ್ಯಾರ್ಥಿನಿಗೆ ಸಂಕಷ್ಟ: ನಂಬರ್ ಪ್ಲೇಟ್ ನಿಂದ ಹೊರಬರೋದಕ್ಕೂ ಕಷ್ಟವಾಗಿದೆ; ಯಾಕೆ ಅಂತೀರಾ!
ನಿಮ್ಮ ಹೊಸ ವಾಹನದ ಸಂಖ್ಯೆ ನಿಮಗೆ ತೊಂದರೆ ಮತ್ತು ಮುಜುಗರಕ್ಕೆ ಕಾರಣವಾದರೆ ನೀವೇನ್ ಮಾಡ್ತೀರಾ? ಹೀಗೊಂದು ಪ್ರಶ್ನೆ ಎದುರಾದ್ರೆ ಏನ್ಮಾಡ್ತೀರಾ? ಈ ಪ್ರಶ್ನೆಗಳು ಆಶ್ಚರ್ಯ ಎನಿಸಬಹುದು. ಇಂತಹ ಆಶ್ಚರ್ಯದ ಪ್ರಶ್ನೆ ಹುಟ್ಟೋಕೆ ಕಾರಣ ಸ್ಕೂಟಿ ನಂಬರ್.
Published: 30th November 2021 04:08 PM | Last Updated: 30th November 2021 04:08 PM | A+A A-

ಸಂಗ್ರಹ ಚಿತ್ರ
ನವದೆಹಲಿ: ನಿಮ್ಮ ಹೊಸ ವಾಹನದ ಸಂಖ್ಯೆ ನಿಮಗೆ ತೊಂದರೆ ಮತ್ತು ಮುಜುಗರಕ್ಕೆ ಕಾರಣವಾದರೆ ನೀವೇನ್ ಮಾಡ್ತೀರಾ? ಹೀಗೊಂದು ಪ್ರಶ್ನೆ ಎದುರಾದ್ರೆ ಏನ್ಮಾಡ್ತೀರಾ? ಈ ಪ್ರಶ್ನೆಗಳು ಆಶ್ಚರ್ಯ ಎನಿಸಬಹುದು. ಇಂತಹ ಆಶ್ಚರ್ಯದ ಪ್ರಶ್ನೆ ಹುಟ್ಟೋಕೆ ಕಾರಣ ಸ್ಕೂಟಿ ನಂಬರ್.
ದೆಹಲಿಯಿಂದ ಕಾಲೇಜಿಗೆ ಹೋಗುತ್ತಿದ್ದ ವಿದ್ಯಾರ್ಥಿನಿಗೆ ಸ್ಕೂಟಿ ನಂಬರ್ ಸಖತ್ ತೊಂದರೆ ಕೊಟ್ಟಿದೆ. ಯಾಕಂದ್ರೆ ಈ ವಿದ್ಯಾರ್ಥಿನಿಯ ಸ್ಕೂಟಿಯ ಮೇಲೆಯೇ ಎಲ್ಲರ ಕಣ್ಣು. ಕಳೆದ ತಿಂಗಳು ಈ ವಿದ್ಯಾರ್ಥಿನಿಯ ಹುಟ್ಟು ಹಬ್ಬವಾಗಿದ್ದು, ಹುಟ್ಟುಹಬ್ಬದ ಉಡುಗೊರೆಯಾಗಿ ತಂದೆಯಿಂದ ಸ್ಕೂಟಿ ಬೇಕೆಂದು ಬೇಡಿಕೆ ಇಟ್ಟಿದ್ದಳು ಈಕೆ. ಮಗಳು ಕಾಲೇಜಿಗೆ ಹೋಗುತ್ತಿರುವ ಕಾರಣ ತಂದೆ ತನ್ನ ಠೇವಣಿಯಿಂದ ದೆಹಲಿಯ ಸ್ಟೋರ್‌ನಿಂದ ಅವಳಿಗೊಂದು ಸ್ಕೂಟಿ ಬುಕ್ ಮಾಡಿದ್ದಾರೆ. ಇಲ್ಲಿಯವರೆಗೆ ಎಲ್ಲವೂ ಚೆನ್ನಾಗಿತ್ತು.
ಆದರೆ ಸ್ಕೂಟಿ ಬಂದಿದ್ದೇ ಬಂದಿದ್ದು, ಈಕೆಗೆ ಟೆನ್ಷನ್ ಶುರುವಾಯಿತು. ಸ್ಕೂಟಿ ಸಂಖ್ಯೆಯಿಂದ ತೊಂದರೆ ಪ್ರಾರಂಭವಾಯಿತು. RTO ನಿಂದ ಪಡೆದ ಸಂಖ್ಯೆಯು ಸಂಖ್ಯೆಗಳ ಮಧ್ಯದಲ್ಲಿ S.E.X ಅಕ್ಷರಮಾಲೆಯಾಗಿತ್ತು. ಬೈಕಿನ ನಂಬರ್ ಪ್ಲೇಟ್ ಹಾಕಲು ಹೋದ ವಿದ್ಯಾರ್ಥಿನಿಯ ಅಣ್ಣನಿಗೆ ಈ ಮೂರು ಅಕ್ಷರಗಳು ತನ್ನ ಸಂಸಾರದ ಸಮಸ್ಯೆಗಳನ್ನು ಹೆಚ್ಚಿಸಲಿವೆ ಎಂಬ ಅರಿವೇ ಇರಲಿಲ್ಲ. ಏಕೆಂದರೆ ವಾಹನದ ನಂಬರ್ ಪ್ಲೇಟ್ ಮೇಲೆ ಬರೆದಿರುವ SEX ವರ್ಣಮಾಲೆಯು ಅನೇಕ ಜನರಿಗೆ ವಿಚಿತ್ರವಾಗಿ ಕಾಣೋಕೆ ಶುರುವಾಯಿತು. ದಾರಿಯಲ್ಲಿ ಬರುವವರು ಹೋಗುವವರು ಈಕೆಯ ಅಣ್ಣನ ಮೇಲೆ ಟೀಕೆ ಮಾಡೋಕೆ ಶುರುಮಾಡಿದರು. ಜನರ ಹಾಸ್ಯ ಟೀಕೆಗಳಿಂದ ಅಣ್ಣನಿಗೆ ರೋಸಿಹೋಯಿತು.
ಹೀಗೆ ಎಲ್ಲರ ಗೇಲಿ ಟೀಕೆಗಳಿಂದ ಬೇಸತ್ತ ವಿದ್ಯಾರ್ಥಿನಿಯ ಅಣ್ಣ, ಮನೆಯವರಿಗೆ ಈ ವಿಷಯ ತಿಳಿಸಿದಾಗ ವಿದ್ಯಾರ್ಥಿನಿಗೆ ಭಯವಾಗಿ ತನ್ನ ತಂದೆಗೆ ಕಾರಿನ ನಂಬರ್ ಬದಲಾಯಿಸುವಂತೆ ಕೇಳಿದ್ದಾಳೆ.ಈ ಕುರಿತು ದೆಹಲಿಯ ಆರ್‌ಟಿಒ ಅಧಿಕಾರಿಯೊಂದಿಗೆ ಮಾತನಾಡಿದ ಅವರು, ಸುಮಾರು ಹತ್ತು ಸಾವಿರ ವಾಹನಗಳಿಗೆ ಈ ಸರಣಿಯ ಸಂಖ್ಯೆಗಳನ್ನು ನೀಡಲಾಗಿದೆ ಎಂದರು.
ದೆಹಲಿ ಸಾರಿಗೆ ಆಯುಕ್ತ ಕೆಕೆ ದಹಿಯಾ ಮಾತನಾಡಿ, "ಒಮ್ಮೆ ವಾಹನದ ಸಂಖ್ಯೆಯನ್ನು ನಿಗದಿಪಡಿಸಿದ ನಂತರ, ಅದನ್ನು ಬದಲಾಯಿಸಲು ಯಾವುದೇ ಅವಕಾಶವಿಲ್ಲ" ಎಂದು ಖಾಸಗಿ ವಾಹಿನಿಯೊಂದಕ್ಕೆ ಪ್ರತಿಕ್ರಿಯಿಸಿದ್ದಾರೆ.
ಜನರ ಮೂದಲಿಕೆಯಿಂದ ತಪ್ಪಿಸಿಕೊಳ್ಳಲು ವಿದ್ಯಾರ್ಥಿನಿ ಇದೀಗ ಮನೆಯಿಂದ ಹೊರ ಬರುವುದೂ ಕಷ್ಟವಾಗಿದೆ. ಪಾಪ ಆಸೆಯಿಂದ ಮಗಳಿಗೆ ಸ್ಕೂಟಿ ಕೊಡಿಸಿದ ತಂದೆಗೂ,ಹುಟ್ಟಿದಬ್ಬಕ್ಕೆ ಅಪ್ಪನಿಂದ ಆಸೆಯಿಂದ ಉಡುಗೊರೆ ಪಡೆದ ಮಗಳೂ ಈಗ ತನ್ನ ವಾಹನದ ಸಂಖ್ಯೆಯನ್ನು ಬದಲಾಯಿಸಲು ಬಯಸಿದ್ದಾರೆ.ಆದರೆ ಅದು ಸಾಧ್ಯವೇ ಎಂಬುದು ಇಲ್ಲಿ ಪ್ರಶ್ನೆಯಾಗಿದೆ.