ಅಮರಿಂದರ್ ಸಿಂಗ್ ಜಾತ್ಯಾತೀತ ಬದ್ಧತೆ ಪ್ರಶ್ನಿಸಿದ ಹರೀಶ್ ರಾವತ್: ಕಾಂಗ್ರೆಸ್ ಶೋಚನೀಯ ಪರಿಸ್ಥಿತಿಯಲ್ಲಿದೆ- ಸಿಂಗ್
ಕಾಂಗ್ರೆಸ್ ನಾಯಕ ಹರೀಶ್ ರಾವತ್ ಪಂಜಾಬ್ ಮಾಜಿ ಸಿಎಂ ಅಮರಿಂದರ್ ಸಿಂಗ್ ಅವರ ಜಾತ್ಯಾತೀತ ಬದ್ಧತೆಯನ್ನು ಪ್ರಶ್ನಿಸಿದ ಬೆನ್ನಲ್ಲೇ ಅಮರಿಂದರ್ ಸಿಂಗ್ ತೀಕ್ಷ್ಣ ಪ್ರತಿಕ್ರಿಯೆ ನೀಡಿದ್ದಾರೆ.
Published: 01st October 2021 11:37 PM | Last Updated: 01st October 2021 11:37 PM | A+A A-

ಅಮರಿಂದರ್ ಸಿಂಗ್
ಚಂಡೀಗಢ: ಕಾಂಗ್ರೆಸ್ ನಾಯಕ ಹರೀಶ್ ರಾವತ್ ಪಂಜಾಬ್ ಮಾಜಿ ಸಿಎಂ ಅಮರಿಂದರ್ ಸಿಂಗ್ ಅವರ ಜಾತ್ಯಾತೀತ ಬದ್ಧತೆಯನ್ನು ಪ್ರಶ್ನಿಸಿದ ಬೆನ್ನಲ್ಲೇ ಅಮರಿಂದರ್ ಸಿಂಗ್ ತೀಕ್ಷ್ಣ ಪ್ರತಿಕ್ರಿಯೆ ನೀಡಿದ್ದಾರೆ.
ಹರೀಶ್ ರಾವತ್ ಹೇಳಿಕೆಗೆ ಪ್ರತಿಕ್ರಿಯೆ ನೀಡಿರುವ ಅಮರಿಂದರ್ ಸಿಂಗ್ ಕಾಂಗ್ರೆಸ್ ಶೋಚನೀಯ ಪರಿಸ್ಥಿತಿಯಲ್ಲಿದೆ ಎಂದು ಹೇಳಿದ್ದಾರೆ.
ರಾಜೀನಾಮೆ ನೀಡುವುದಕ್ಕೂ ಮೂರು ವಾರಗಳ ಮುನ್ನ ಸೋನಿಯಾ ಗಾಂಧಿಗೆ ನನ್ನ ರಾಜೀನಾಮೆ ಪತ್ರವನ್ನು ನೀಡಿದ್ದೆ. ಆದರೆ ಅವರು ನನ್ನನ್ನು ಮುಂದುವರೆಯುವಂತೆ ಸೂಚಿಸಿದ್ದರು ಎಂದು ಅಮರಿಂದರ್ ಸಿಂಗ್ ಹೇಳಿದ್ದಾರೆ.
ಅಮರಿಂದರ್ ಸಿಂಗ್ ಒತ್ತಡದಲ್ಲಿದ್ದಾರೆ ಎಂಬ ರಾವತ್ ಹೇಳಿಕೆಗೂ ಮಾಜಿ ಸಿಎಂ ಪ್ರತಿಕ್ರಿಯೆ ನೀಡಿದ್ದು, ನನಗಿದ್ದ ಒಂದೇ ಒತ್ತಡ ಎಂದರೆ ಅದು ಅವಮಾನದ ಮೇಲೆ ಅವಮಾನವಾದರೂ ಸಹ ಅದನ್ನು ಸಹಿಸಿಕೊಂಡು ಪಕ್ಷಕ್ಕೆ ನಿಷ್ಠೆ ತೋರಿದ್ದು ಎಂದಿದ್ದಾರೆ.
ಅಮರಿಂದರ್ ಸಿಂಗ್ ಬಿಜೆಪಿಯ ಆಹ್ವಾನವನ್ನು ತಿರಸ್ಕರಿಸಬೇಕು ಎಂದು ಹರೀಶ್ ರಾವತ್ ಹೇಳಿದ್ದರು. ಅಷ್ಟೇ ಅಲ್ಲದೇ ಬಿಜೆಪಿ ನಾಯಕರೊಂದಿಗೆ ಅಮರಿಂದರ್ ಸಿಂಗ್ ನಿಕಟವಾಗುತ್ತಿರುವುದನ್ನು ಪ್ರಶ್ನಿಸಿ, ಇದು ಅಮರಿಂದರ್ ಸಿಂಗ್ ಅವರ ಜಾತ್ಯಾತಿತ ಬದ್ಧತೆಯನ್ನು ಪ್ರಶ್ನಿಸುವಂತಿದೆ ಎಂದಿದ್ದರು.