ಇಂಡಿಯಾ- ಚೀನಾ ಗಡಿ ಬಳಿ 16 ಐಟಿಬಿಪಿ ಸಿಬ್ಬಂದಿ ರಕ್ಷಿಸಿದ ಭಾರತೀಯ ಸೇನೆ
ಪ್ರತಿಕೂಲ ಹವಾಮಾನದಿಂದಾಗಿ ಚೀನಾ- ಭಾರತ ಗಡಿಯ ಕುಟಿ ಕಣಿವೆ ಬಳಿ ಸಿಲುಕಿಕೊಂಡಿದ್ದ 16 ಐಟಿಬಿಪಿ ಸಿಬ್ಬಂದಿಯನ್ನು ಭಾರತೀಯ ಸೇನೆಯ ಪಂಚ ಶೂಲ್ ಬ್ರಿಗೇಡ್ ನಿಂದ ಶನಿವಾರ ರಕ್ಷಿಸಲಾಗಿದೆ.
Published: 02nd October 2021 07:56 PM | Last Updated: 02nd October 2021 07:56 PM | A+A A-

ಸಾಂದರ್ಭಿಕ ಚಿತ್ರ
ನವದೆಹಲಿ: ಪ್ರತಿಕೂಲ ಹವಾಮಾನದಿಂದಾಗಿ ಚೀನಾ- ಭಾರತ ಗಡಿಯ ಕುಟಿ ಕಣಿವೆ ಬಳಿ ಸಿಲುಕಿಕೊಂಡಿದ್ದ 16 ಐಟಿಬಿಪಿ ಸಿಬ್ಬಂದಿಯನ್ನು ಭಾರತೀಯ ಸೇನೆಯ ಪಂಚ ಶೂಲ್ ಬ್ರಿಗೇಡ್ ನಿಂದ ಶನಿವಾರ ರಕ್ಷಿಸಲಾಗಿದೆ.
ಬೆಟ್ಟ, ಹಳ್ಳಗಳಿಂದ ಕೂಡಿದ ಒರಟಾದ ಕಣಿವೆಯಲ್ಲಿ ಗಸ್ತು ತಿರುಗುವಾಗ ಐಟಿಬಿಪಿ ಸಿಬ್ಬಂದಿ ಪ್ರತಿಕೂಲ ಹವಾಮಾನದಲ್ಲಿ ಸಿಲುಕಿದ್ದಾಗಿ ಸೇನೆಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಈ ಮಾಹಿತಿ ತಿಳಿದ ಕೂಡಲೇ ಸೇನೆಯ ಪಂಚಶೂಲ್ ಬ್ರಿಗೇಡ್ ಭಾರತ- ಚೀನಾ ಗಡಿ ಪ್ರದೇಶದ ಕುಟಿ ಕಣವೆ ವಲಯಕ್ಕೆ ಧಾವಿಸಿ, ಕ್ಷೀಪ್ರ ರಕ್ಷಣಾ ಕಾರ್ಯಾಚರಣೆ ನಡೆಸುವ ಮೂಲಕ ಸಂಕಷ್ಟದಲ್ಲಿ ಸಿಲುಕಿದ ಐಟಿಬಿಪಿ ಸಿಬ್ಬಂದಿಯನ್ನು ರಕ್ಷಿಸಲಾಗಿದೆ ಎಂದು ಪಂಚಶೂಲ್ ಬ್ರಿಗೇಡ್ ನ ಕ್ಯಾಪ್ಟನ್ ಕುಲಪೀದ್ ಸಿಂಗ್ ತಿಳಿಸಿದ್ದಾರೆ.