ಪಂಜಾಬ್ ಬಿಕ್ಕಟ್ಟು: ಮಾಜಿ ಸಿಎಂ ಅಮರಿಂದರ್ ಸಿಂಗ್ ಜೊತೆ ಅಮಿತ್ ಶಾ ಚರ್ಚೆ; ಶಿವಸೇನೆ ಕಿಡಿ
ಪಂಜಾಬ್ ಮಾಜಿ ಮುಖ್ಯಮಂತ್ರಿ ಕ್ಯಾಪ್ಟನ್ ಅಮರೀಂದರ್ ಸಿಂಗ್ ರಾಷ್ಟ್ರ ರಾಜಧಾನಿಯಲ್ಲಿ ಕೇಂದ್ರ ಸಚಿವ ಅಮಿತ್ ಶಾ ಅವರನ್ನು ಭೇಟಿಯಾದ ಕೆಲ ದಿನಗಳ ನಂತರ, ಶಿವಸೇನೆ ಕೇಂದ್ರದ ವಿರುದ್ಧ ವಾಗ್ದಾಳಿ ನಡೆಸಿದೆ.
Published: 02nd October 2021 03:21 PM | Last Updated: 02nd October 2021 03:30 PM | A+A A-

ಸಂಜಯ್ ರಾವತ್
ಮುಂಬೈ: ಪಂಜಾಬ್ ಮಾಜಿ ಮುಖ್ಯಮಂತ್ರಿ ಕ್ಯಾಪ್ಟನ್ ಅಮರೀಂದರ್ ಸಿಂಗ್ ರಾಷ್ಟ್ರ ರಾಜಧಾನಿಯಲ್ಲಿ ಕೇಂದ್ರ ಸಚಿವ ಅಮಿತ್ ಶಾ ಅವರನ್ನು ಭೇಟಿಯಾದ ಕೆಲ ದಿನಗಳ ನಂತರ, ಶಿವಸೇನೆ ಕೇಂದ್ರದ ವಿರುದ್ಧ ವಾಗ್ದಾಳಿ ನಡೆಸಿದೆ.
ರಾಜಿನಾಮೆ ನೀಡಿರುವ ಮುಖ್ಯಮಂತ್ರಿ ಜೊತೆ ರಾಜ್ಯದ ಸಮಸ್ಯೆ. ಗಡಿ ಭದ್ರತೆ ಕುರಿತು ಅಮರಿಂದರ್ ಜೊತೆ ಚರ್ಚಿಸಲು ಗೃಹ ಸಚಿವರಿಗೆ ಯಾವುದೇ ಹಕ್ಕಿಲ್ಲ ಎಂದು ಶಿವಸೇನೆ ಮುಖವಾಣಿ ಸಾಮ್ನಾದಲ್ಲಿ ಬರೆಯಲಾಗಿದೆ.
ಗಡಿ ಭದ್ರತೆಯ ವಿಷಯವು ಮುಖ್ಯವಾಗಿದ್ದರೆ ಅದನ್ನು ಕ್ಯಾಪ್ಟನ್ ಅಮರೀಂದರ್ ಸಿಂಗ್ ಬದಲಿಗೆ ಇಂದಿನ ಪಂಜಾಬ್ ಮುಖ್ಯಮಂತ್ರಿ ಚರಣ್ಜಿತ್ ಸಿಂಗ್ ಚನ್ನಿ ಜೊತೆ ಚರ್ಚಿಸಬೇಕಿತ್ತು. ಯಾರಾದರೂ ಕಾಶ್ಮೀರ ಮತ್ತು ಲಡಾಖ್ ನಂತಹ ಗಡಿಯೊಳಗೆ ನುಸುಳಲು ಆರಂಭಿಸಿದ್ದಾರೆಯೇ? ಈ ವಿಷಯ ನಿಜವಾಗಿಯೂ ಮುಖ್ಯವಾಗಿದ್ದರೆ ಗೃಹ ಸಚಿವರು ಈಗಿನ ಪಂಜಾಬ್ ಮುಖ್ಯಮಂತ್ರಿಯೊಂದಿಗೆ ಚರ್ಚಿಸಬೇಕು. ರಾಜ್ಯದ ಸಮಸ್ಯೆಗಳನ್ನು ರಾಜಿನಾಮೆ ನೀಡಿರುವ ಮುಖ್ಯಮಂತ್ರಿಯೊಂದಿಗೆ ಚರ್ಚಿಸುವ ವಿಧಾನ ಯಾವುದು? ಕೇಂದ್ರ ಸರ್ಕಾರವು ಈ ಹೊಸ ಸಂಪ್ರದಾಯವನ್ನು ಆರಂಭಿಸುತ್ತಿದೆ. ಇದು ನ್ಯಾಯಸಮ್ಮತವಲ್ಲ ಎಂದು ಸಾಮ್ನಾದಲ್ಲಿ ಪ್ರಕಟಿಸಲಾಗಿದೆ.
ಪಂಜಾಬ್ ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡಿದ ನಂತರವೇ ಗಡಿ ಭದ್ರತೆ ವಿಚಾರದಲ್ಲಿ ಕ್ಯಾಪ್ಟನ್ ಅಮರೀಂದರ್ ಸಿಂಗ್ ಎಚ್ಚೆತ್ತುಕೊಂಡಿದ್ದಾರೆ ಎಂದು ಶಿವಸೇನೆ ಮುಖವಾಣಿ ಪತ್ರಿಕೆ ಟೀಕಿಸಿತು. ಪಾಕಿಸ್ತಾನವು ಪ್ರತಿ ದಿನವೂ ಒಳನುಸುಳುತ್ತಿದೆ, ಆದರೆ ಮುಖ್ಯಮಂತ್ರಿ ಸ್ಥಾನವನ್ನು ತೊರೆದ ನಂತರ ಅಮರೀಂದರ್ ಗಡಿ ಭದ್ರತೆಯ ಬಗ್ಗೆ ಎಚ್ಚರಗೊಂಡರು ಎಂದು ಸಾಮ್ನಾ ಹೇಳಿದರು.
ಕ್ಯಾಪ್ಟನ್ ಅಮರಿಂದರ್ ಸಿಂಗ್ ತಾನು ಬಿಜೆಪಿ ಸೇರುವುದಿಲ್ಲ ಎಂದು ಹೇಳಿದ್ದರೂ, ಕಾಂಗ್ರೆಸ್ ನಿಂದ ಹೊರಗುಳಿಯುವ ಮೂಲಕ ಪಕ್ಷಕ್ಕೆ ಹಾನಿ ಮಾಡುವ ಉದ್ದೇಶ ಹೊಂದಿದ್ದಾರೆ ಎಂದು ಆರೋಪಿಸಿದ್ದಾರೆ. ತಾನು ಬಿಜೆಪಿಗೆ ಹೋಗುವುದಿಲ್ಲ ಎಂದು ಅಮರೀಂದರ್ ಸಿಂಗ್ ಸ್ಪಷ್ಟಪಡಿಸಿದ್ದರು, ಆದರೆ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರನ್ನು ಭೇಟಿಯಾದ ನಂತರ, ಅವರು ಕಾಂಗ್ರೆಸ್ ನಿಂದ ಹೊರಗುಳಿಯುವ ಮೂಲಕ ಹಾನಿ ಮಾಡುವಂತೆ ತೋರುತ್ತದೆ ಎಂದು ಸಾಮ್ನಾದಲ್ಲಿ ಬರೆಯಲಾಗಿದೆ.
ಸೆಪ್ಟೆಂಬರ್ 29ರಂದು ಮಾಜಿ ಪಂಜಾಬ್ ಮುಖ್ಯಮಂತ್ರಿ ಕ್ಯಾಪ್ಟನ್ ಅಮರೀಂದರ್ ಸಿಂಗ್ ಅವರು ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರನ್ನು ಭೇಟಿ ಮಾಡಿ ನಡೆಯುತ್ತಿರುವ ರೈತರ ಆಂದೋಲನದ ಬಗ್ಗೆ ಚರ್ಚಿಸಿದರು ಮತ್ತು ಮೂರು ಕೃಷಿ ಕಾನೂನುಗಳನ್ನು ತಕ್ಷಣವೇ ರದ್ದುಗೊಳಿಸುವ ಮೂಲಕ ಬಿಕ್ಕಟ್ಟನ್ನು ಪರಿಹರಿಸುವಂತೆ ಒತ್ತಾಯಿಸಿದರು ಎಂದು ಶಿವಸೇನಾ ಮುಖವಾಣಿ ಪ್ರತಿಕ್ರಿಯಿಸಿತು.