ಲಖಿಂಪುರ ಹಿಂಸಾಚಾರದಿಂದ 2022 ರಲ್ಲಿ ಟೆರಾಯ್ ಭಾಗದಲ್ಲಿ ಬಿಜೆಪಿ ಮೇಲೆ ಗಂಭೀರ ಪರಿಣಾಮ!

ಲಖಿಂಪುರ ಹಿಂಸಾಚಾರವನ್ನು 2022 ರ ವಿಧಾನಸಭಾ ಚುನಾವಣೆಗೆ ವಿಪಕ್ಷಗಳು ಬಿಜೆಪಿ ವಿರುದ್ಧದ ಅಸ್ತ್ರವನ್ನಾಗಿಸಿಕೊಳ್ಳಲಿದೆ.
ಲಖಿಂಪುರದಲ್ಲಿ ಹಿಂಸಾಚಾರ ನಡೆದ ಸ್ಥಳ
ಲಖಿಂಪುರದಲ್ಲಿ ಹಿಂಸಾಚಾರ ನಡೆದ ಸ್ಥಳ

ಲಖನೌ: ಲಖಿಂಪುರ ಹಿಂಸಾಚಾರವನ್ನು 2022 ರ ವಿಧಾನಸಭಾ ಚುನಾವಣೆಗೆ ವಿಪಕ್ಷಗಳು ಬಿಜೆಪಿ ವಿರುದ್ಧದ ಅಸ್ತ್ರವನ್ನಾಗಿಸಿಕೊಳ್ಳಲಿದೆ. ಆಡಳಿತಾರೂಢ ಪಕ್ಷ ಮತ್ತೊಂದೆಡೆ ಸಂಭಾವ್ಯವಾಗಿದ್ದ ದೀರ್ಘಕಾಲದ ಪ್ರತಿಭಟನೆಯ ಬೆಂಕಿಯನ್ನು ನಂದಿಸಿದರೂ ಆತಂಕದಲ್ಲಿದೆ.

ಲಖಿಂಪುರ್ ಖೇರಿ ಉತ್ತರ ಪ್ರದೇಶದ ಟೆರಾಯ್ ಪ್ರಾಂತ್ಯದಲ್ಲಿ ಅತಿ ದೊಡ್ಡ ಜಿಲ್ಲೆಯಾಗಿದ್ದು, ಸಿಖ್ ಸಮುದಾಯದ ರೈತರು ಬಹುಸಂಖ್ಯಾತರಾಗಿದ್ದಾರೆ.

ಜಿಲ್ಲೆಯಲ್ಲಿ 8 ಅಸೆಂಬ್ಲಿ ಸೆಗ್ಮೆಂಟ್ ಗಳನ್ನು ಹೊಂದಿದ್ದು 2017 ರ ವಿಧಾನಸಭಾ ಚುನಾವಣೆ ವೇಳೆ ಎಲ್ಲಾ ಕ್ಷೇತ್ರಗಳಲ್ಲೂ ಬಿಜೆಪಿ ಗೆಲುವು ಸಾಧಿಸಿತ್ತು. ಇದಕ್ಕೂ ಮುನ್ನ ಅಂದರೆ 2012 ರಲ್ಲಿ ಕೇವಲ ಒಂದು ಸ್ಥಾನದಲ್ಲಿ ಬಿಜೆಪಿ ಗೆಲುವು ಸಾಧಿಸಿತ್ತು.

ಸಿಖ್ ಸಮುದಾಯದ ಹೊರತಾಗಿ ಮೇಲ್ಜಾತಿಯ ಬ್ರಾಹ್ಮಣ ಸಮುದಾಯ, ಒಬಿಸಿಗಳಲ್ಲಿ ಕುರ್ಮಿಗಳು ಹಾಗೂ ಮುಸ್ಲಿಮರು ಪ್ರಬಲರಾಗಿದ್ದಾರೆ. ಲಖೀಂಪುರ್ ಖೇರಿ ಮುಖ್ಯವಾಗಿ ಕಬ್ಬು ಬೆಳೆಗೆ ಹೆಸರುವಾಸಿಯಾಗಿದೆ.

ಭಾನುವಾರದ ಹಿಂಸಾಚಾರದ ನಂತರ ವಿಪಕ್ಷಗಳ ನಾಯಕರು ಪ್ರತಿಭಟನೆಯನ್ನು ಕಾವನ್ನು ಕಾಪಿಟ್ಟುಕೊಳ್ಳಲು ಯತ್ನಿಸುತ್ತಿದ್ದು, 2022 ರ ವಿಧಾನಸಭಾ ಚುನಾವಣೆಯಲ್ಲಿ ಸರ್ಕಾರದ ವಿರುದ್ಧದ ಅಸ್ತ್ರವಾಗಿ ಬಳಕೆ ಮಾಡಿಕೊಳ್ಳುವುದಕ್ಕೆ ಸಿದ್ಧತೆ ನಡೆಸಿವೆ. ವಿಪಕ್ಷಗಳ ನಡೆಯ ಬಗ್ಗೆ ಬಿಜೆಪಿಗೂ ಆತಂಕವಿದ್ದು ನೆರೆಯ ಜಿಲ್ಲೆಗಳಾದ ಪಿಲಿಭಿಟ್, ಶಹಜಹಾನ್ ಪುರ, ಹರೋಡಿ, ಸೀತಾಪುರ, ಬಹ್ರೈಚ್ ಗಳಲ್ಲೂ ಪ್ರತಿಭಟನೆಯ ಬಿಸಿ ತಟ್ಟುವ ಆತಂಕವಿದೆ. ಈ ಪ್ರದೇಶಗಳಲ್ಲಿ 2017 ರಲ್ಲಿ ಬಿಜೆಪಿ 42 ಸ್ಥಾನಗಳ ಪೈಕಿ 37 ನ್ನು ಗೆದ್ದು ಬಹಳ ಲಾಭವನ್ನು ಗಳಿಸಿತ್ತು ಎಂಬುದು ಗಮನಾರ್ಹ

ಈ ನಡುವೆ ಪಿಲಿಭಿಟ್ ಕ್ಷೇತ್ರದ ಸಂಸದ ವರುಣ್ ಗಾಂಧಿ ಅವರಿಗೆ ರೈತರು ಓಟ್ ಬ್ಯಾಂಕ್ ಆಗಿದ್ದು ಅವರನ್ನು ಎದುರುಹಾಕಿಕೊಳ್ಳದಂತೆ ರೈತರ ಪರ  ಟ್ವೀಟ್ ಹಾಗೂ ಪತ್ರಗಳನ್ನು ಪ್ರಕಟಿಸುತ್ತಿದ್ದಾರೆ. 

"ಲಖಿಂಪುರ್ ಖೇರಿ ಪ್ರಕರಣ ನಿಶ್ಚಿತವಾಗಿ ಉತ್ತರ ಪ್ರದೇಶದ ಮುಂದಿನ ಚುನಾವಣೆಯಲ್ಲಿ ಪ್ರಮುಖ ಪಾತ್ರ ವಹಿಸಲಿದೆ ಎಂದು ರಾಜಕೀಯ ವಿಜ್ಞಾನಿ ಪ್ರೊಫೆಸರ್ ಎ.ಕೆ ಮಿಶ್ರಾ" ಹೇಳಿದ್ದಾರೆ

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com