ಏರ್ ಇಂಡಿಯಾ ಮರು ನಿರ್ಮಾಣಕ್ಕೆ ಗಮನಾರ್ಹ ಪ್ರಯತ್ನ: ರತನ್ ಟಾಟಾ
ಏರ್ ಇಂಡಿಯಾ ಪಡೆಯಲು 18,000 ಕೋಟಿ ಮೊತ್ತದ ಟಾಟಾ ಸನ್ಸ್ ಬಿಡ್ ನ್ನು ಭಾರತ ಸರ್ಕಾರ ಸ್ವೀಕರಿಸಿರುವುದನ್ನು ಶುಕ್ರವಾರ ಸ್ವಾಗತಿಸಿರುವ ರತನ್ ಟಾಟಾ, ಸಾಲದ ಸುಳಿಯಲ್ಲಿರುವ ಏರ್ ಇಂಡಿಯಾ ಕಂಪನಿ ಮರು ನಿರ್ಮಾಣಕ್ಕೆ ಗಮನಾರ್ಹ ರೀತಿಯಲ್ಲಿ ಪ್ರಯತ್ನಿಸಲಾಗುವುದು ಎಂದು ಹೇಳಿದ್ದಾರೆ.
Published: 08th October 2021 08:22 PM | Last Updated: 09th October 2021 01:18 PM | A+A A-

ರತನ್ ಟಾಟಾ
ನವದೆಹಲಿ: ಏರ್ ಇಂಡಿಯಾ ಪಡೆಯಲು 18,000 ಕೋಟಿ ಮೊತ್ತದ ಟಾಟಾ ಸನ್ಸ್ ಬಿಡ್ ನ್ನು ಭಾರತ ಸರ್ಕಾರ ಸ್ವೀಕರಿಸಿರುವುದನ್ನು ಶುಕ್ರವಾರ ಸ್ವಾಗತಿಸಿರುವ ರತನ್ ಟಾಟಾ, ಸಾಲದ ಸುಳಿಯಲ್ಲಿರುವ ಏರ್ ಇಂಡಿಯಾ ಕಂಪನಿ ಮರು ನಿರ್ಮಾಣಕ್ಕೆ ಗಮನಾರ್ಹ ರೀತಿಯಲ್ಲಿ ಪ್ರಯತ್ನಿಸಲಾಗುವುದು ಎಂದು ಹೇಳಿದ್ದಾರೆ.
ಈ ಕುರಿತಂತೆ ಟ್ವೀಟ್ ಮಾಡಿರುವ ರತನ್ ಟಾಟಾ, ''ವೆಲ್ ಕಮ್ ಬ್ಯಾಕ್ ಏರ್ ಇಂಡಿಯಾ' ಏರ್ ಇಂಡಿಯಾಗಾಗಿ ಟಾಟಾ ಗ್ರೂಪ್ ಬಿಡ್ ಪಡೆದಿರುವುದು ದೊಡ್ಡ ಸುದ್ದಿ ಎಂದು ಅವರು ಹೇಳಿಕೆಯಲ್ಲಿ ತಿಳಿಸಿದ್ದಾರೆ. ಏರ್ ಇಂಡಿಯಾ ಮರು ನಿರ್ಮಾಣಕ್ಕೆ ಗಮನಾರ್ಹ ರೀತಿಯಲ್ಲಿ ಪ್ರಯತ್ನಿಸಲಾಗುವುದು, ವಿಮಾನಯಾನ ಉದ್ಯಮದಲ್ಲಿ ಟಾಟಾ ಗ್ರೂಪ್ ಗೆ ಇದರಿಂದ ಅತ್ಯಂತ ಪ್ರಬಲ ಮಾರುಕಟ್ಟೆ ಒದಗುವ ವಿಶ್ವಾಸವಿದೆ ಎಂದು ಅವರು ಹೇಳಿದ್ದಾರೆ.
ಏರ್ ಇಂಡಿಯಾಕ್ಕಾಗಿ ಸ್ಪೈಸ್ ಜೆಟ್ ಪ್ರವರ್ತಕ ಅಜಯ್ ಸಿಂಗ್ ನೇತೃತ್ವದ ಸಿಪಿವಿ ಬಿಡ್ ಗೆ ಸೋಲಾಗಿರುವುದಾಗಿ ಸರ್ಕಾರ ಶುಕ್ರವಾರ ಘೋಷಿಸಿತ್ತು. ಇದರಿಂದಾಗಿ ಏರ್ ಇಂಡಿಯಾ ಮರಳಿ ಟಾಟಾ ತೆಕ್ಕೆಗೆ ಸೇರಿದೆ. ಏರ್ ಇಂಡಿಯಾ ರಾಷ್ಟ್ರೀಕರಣವಾಗುವ ಮೊದಲು ಟಾಟಾ ಕಂಪನಿಯೇ ಈ ಏರ್ ಲೈನ್ ಸ್ಥಾಪಿಸಿತ್ತು.
ಏರ್ ಇಂಡಿಯಾ ಕುರಿತಂತೆ ಭಾವನಾತ್ಮಕವಾಗಿ ಮಾತನಾಡಿರುವ ರತನ್ ಟಾಟಾ, ಒಂದು ಕಾಲದಲ್ಲಿ ಜೆ ಆರ್ ಡಿ ಟಾಟಾ ನಾಯಕತ್ವದಡಿ ಏರ್ ಇಂಡಿಯಾ ವಿಶ್ವದಲ್ಲಿಯೇ ಪ್ರತಿಷ್ಠಿತ ಮಾನ್ಯತೆ ಪಡೆದಿತ್ತು. ಆ ವರ್ಚಸ್ಸನ್ನು ಮರು ಪಡೆಯುವ ಅವಕಾಶವಿದೆ ಎಂದು ಹೇಳಿದ್ದಾರೆ.
Welcome back, Air India pic.twitter.com/euIREDIzkV
— Ratan N. Tata (@RNTata2000) October 8, 2021
ಜೆಆರ್ ಡಿ ಟಾಟಾ ಈಗ ಇದಿದ್ದರೆ ತೀವ್ರ ಸಂತೋಷಪಡುತ್ತಿದ್ದರು ಎಂದು ಹೇಳಿರುವ ರತನ್ ಟಾಟಾ, ಆಯ್ದ ಉದ್ಯಮಗಳನ್ನು ಖಾಸಗೀಕರಣಕ್ಕೆ ಮುಕ್ತಗೊಳಿಸುತ್ತಿರುವುದಕ್ಕೆ ಕೇಂದ್ರ ಸರ್ಕಾರಕ್ಕೆ ಧನ್ಯವಾದ ಸಲ್ಲಿಸಿದ್ದಾರೆ.