ಅಫ್ಘಾನ್ ಪರಿಸ್ಥಿತಿ ಸ್ಥಿರವಾದಲ್ಲಿ ಅಲ್ಲಿನ ಉಗ್ರರಿಂದ ಜಮ್ಮು-ಕಾಶ್ಮೀರ ಪ್ರವೇಶಕ್ಕೆ ಯತ್ನ: ಸೇನಾ ಮುಖ್ಯಸ್ಥ

ಅಫ್ಘಾನಿಸ್ತಾನದಲ್ಲಿ ಪರಿಸ್ಥಿತಿ ಸ್ಥಿರವಾದಲ್ಲಿ ಅಲ್ಲಿನ ಉಗ್ರರು ಜಮ್ಮು-ಕಾಶ್ಮೀರಕ್ಕೆ ಪ್ರವೇಶ ಮಾಡುವುದಕ್ಕೆ ಯತ್ನಿಸುತ್ತಾರೆ ಎಂದು ಸೇನಾ ಮುಖ್ಯಸ್ಥ ಎಂಎಂ ನರವಾಣೆ ಹೇಳಿದ್ದಾರೆ. 
ಸೇನಾ ಮುಖ್ಯಸ್ಥ ಎಂಎಂ ನರಾವಣೆ
ಸೇನಾ ಮುಖ್ಯಸ್ಥ ಎಂಎಂ ನರಾವಣೆ

ನವದೆಹಲಿ: ಅಫ್ಘಾನಿಸ್ತಾನದಲ್ಲಿ ಪರಿಸ್ಥಿತಿ ಸ್ಥಿರವಾದಲ್ಲಿ ಅಲ್ಲಿನ ಉಗ್ರರು ಜಮ್ಮು-ಕಾಶ್ಮೀರಕ್ಕೆ ಪ್ರವೇಶ ಮಾಡುವುದಕ್ಕೆ ಯತ್ನಿಸುತ್ತಾರೆ ಎಂದು ಸೇನಾ ಮುಖ್ಯಸ್ಥ ಎಂಎಂ ನರವಾಣೆ ಹೇಳಿದ್ದಾರೆ. 

ಎರಡು ದಶಕಗಳ ಹಿಂದೆ ತಾಲೀಬಾನ್ ಅಫ್ಘಾನಿಸ್ತಾನದಲ್ಲಿ ಅಧಿಕಾರದಲ್ಲಿದ್ದಾಗ ಇಂಥಹದ್ದೇ ಘಟನೆಗಳನ್ನು ಉಲ್ಲೇಖಿಸಿ ಎಂಎಂ ನರವಾಣೆ ಹೇಳಿಕೆ ನೀಡಿದ್ದಾರೆ. 

ಇದೇ ವೇಳೆ ಭಾರತೀಯ ಪಡೆಗಳ ಬಳಿ ಒಳನುಸುಳುವಿಕೆಯನ್ನು ತಡೆಯುವ ಬಲಿಷ್ಠ ವ್ಯವಸ್ಥೆ ಇರುವುದರಿಂದ ಸೇನಾ ಪಡೆಗಳು ಯಾವುದೇ ಪರಿಸ್ಥಿತಿಯನ್ನು ಎದುರಿಸುವುದಕ್ಕೂ ಸಿದ್ಧವಿದೆ ಎನ್ನುತ್ತಾರೆ ಎಂಎಂ ನರವಾಣೆ

ಕಾಶ್ಮೀರದಲ್ಲಿ ಇತ್ತೀಚೆಗೆ ನಡೆದ ನಾಗರಿಕರ ಹತ್ಯೆಗಳಿಗೂ ಅಫ್ಘಾನಿಸ್ತಾನದಲ್ಲಿ ತಾಲೀಬಾನ್ ಆಡಳಿತ ಅಸ್ತಿತ್ವಕ್ಕೆ ಬಂದಿರುವುದಕ್ಕೂ ಏನಾದರೂ ಸಂಬಂಧವಿದೆಯೇ ಎಂಬ ಬಗ್ಗೆ ಇಂಡಿಯಾ ಟುಡೆ ಕಾನ್ಕ್ಲೇವ್ ನಲ್ಲಿ ಕೇಳಲಾದ ಪ್ರಶ್ನೆಗಳಿಗೆ ಉತ್ತರಿಸಿದ ಅವರು, ಇವೆರಡಕ್ಕೂ ನಂಟು ಇರಬಹುದು ಎಂದು ಹೇಳುವುದಕ್ಕೆ ಸಾಧ್ಯವಿಲ್ಲ ಎಂದು ಹೇಳಿದ್ದಾರೆ. 

"ಖಂಡಿತವಾಗಿಯೂ ಜಮ್ಮು-ಕಾಶ್ಮೀರದಲ್ಲಿ ಚಟುವಟಿಕೆಗಳು ಏರಿಕೆಯಾಗಿದೆ. ಆದರೆ ಅದಕ್ಕೂ ಅಫ್ಘಾನಿಸ್ತಾನದಲ್ಲಿನ ಬೆಳವಣಿಗೆಗೂ ಸಂಬಂಧವಿದೆ ಎಂಬ ಬಗ್ಗೆ ನಿಖರವಾಗಿ ಹೇಳಲು ಸಾಧ್ಯವಿಲ್ಲ, ಆದರೆ ಅಫ್ಘಾನಿಸ್ತಾನದಲ್ಲಿ ಈ ಹಿಂದೆ ತಾಲೀಬಾನ್ ಆಡಳಿತವಿದ್ದಾಗ ಅಫ್ಘಾನ್ ಮೂಲದ ಭಯೋತ್ಪಾದಕರು ಜಮ್ಮು-ಕಾಶ್ಮೀರದಲ್ಲಿದ್ದರು ಎಂಬುದು ಇತಿಹಾಸದಿಂದ ನಾವು ತಿಳಿಯಬಹುದು ಎಂದು ನರಾವಣೆ ಅಭಿಪ್ರಾಯಪಟ್ಟಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com