ಪ್ರಧಾನಿ ಮೋದಿ ಓರ್ವ ಪ್ರಜಾಪ್ರಭುತ್ವದ ನಾಯಕ ಮತ್ತು ಉತ್ತಮ ಕೇಳುಗ: ಕೇಂದ್ರ ಗೃಹ ಸಚಿವ ಅಮಿತ್‌ ಶಾ

ಪ್ರಧಾನಿ ನರೇಂದ್ರ ಮೋದಿ ಏಕಪಕ್ಷೀಯವಾಗಿ ನಿರ್ಧಾರಗಳನ್ನು ತೆಗೆದುಕೊಳ್ಳುತ್ತಾರೆ ಎಂಬ ಟೀಕೆಗಳಿಗೆ ಪ್ರತ್ಯುತ್ತರ ನೀಡಿರುವ ಕೇಂದ್ರ ಗೃಹ ಸಚಿವ ಅಮಿತ್‌ ಶಾ, ಮೋದಿ ಓರ್ವ ಪ್ರಜಾಪ್ರಭುತ್ವದ ನಾಯಕ ಮತ್ತು ಅತ್ಯುತ್ತಮ ಕೇಳುಗ ಎಂದು ಭಾನುವಾರ ಶ್ಲಾಘಿಸಿದ್ದಾರೆ.
ಅಮಿತ್ ಶಾ
ಅಮಿತ್ ಶಾ

ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ಏಕಪಕ್ಷೀಯವಾಗಿ ನಿರ್ಧಾರಗಳನ್ನು ತೆಗೆದುಕೊಳ್ಳುತ್ತಾರೆ ಎಂಬ ಟೀಕೆಗಳಿಗೆ ಪ್ರತ್ಯುತ್ತರ ನೀಡಿರುವ ಕೇಂದ್ರ ಗೃಹ ಸಚಿವ ಅಮಿತ್‌ ಶಾ, ಮೋದಿ ಓರ್ವ ಪ್ರಜಾಪ್ರಭುತ್ವದ ನಾಯಕ ಮತ್ತು ಅತ್ಯುತ್ತಮ ಕೇಳುಗ ಎಂದು ಭಾನುವಾರ ಶ್ಲಾಘಿಸಿದ್ದಾರೆ.

ಪ್ರಧಾನಿ ಮೋದಿ ಅವರ 20 ವರ್ಷಗಳ ಸಾರ್ವಜನಿಕ ಜೀವನದ ಅಂಗವಾಗಿ ಸಂಸದ್‌ ಟಿವಿಗೆ ನೀಡಿದ ಸಂದರ್ಶನದಲ್ಲಿ ಅವರು, ನಾನು ಮೋದಿಯವರ ಕೆಲಸವನ್ನು ಹತ್ತಿರದಿಂದ ನೋಡಿದ್ದೇನೆ. ಅವರಂತಹ ಕೇಳುಗರನ್ನು ನಾನು ನೋಡಿಲ್ಲ. ಯಾವುದೇ ಸಭೆಯಲ್ಲಿ, ಅವರು ಮಾತನಾಡುವವರು ಕನಿಷ್ಠ ಮಾತ್ರ ಎಂದರು.

ಅವರು ತನ್ನ ಸ್ವಂತ ನಿರ್ಧಾರಗಳನ್ನು ಹೇರುವ ನಾಯಕನೆಂದು ಆರೋಪಿಸುವುದು ಸರಿಯಲ್ಲ. ಅವರೊಂದಿಗೆ ಕೆಲಸ ಮಾಡಿದವರು ಹೇಳುವಂತೆ, ಮೋದಿ ಅವರ ಅಡಿಯಲ್ಲಿ ಸಂಪುಟ ಹಿಂದೆಂದೂ ಇಂತಹ ಪ್ರಜಾಪ್ರಭುತ್ವ ವಿಧಾನದಲ್ಲಿ ಕಾರ್ಯನಿರ್ವಹಿಸಲಿಲ್ಲ ಎಂದರು.

ಪ್ರಧಾನಿಗೆ "ಶಿಸ್ತು" ಬೇಕು, ಮತ್ತು ವೇದಿಕೆಯಲ್ಲಿ ಚರ್ಚಿಸಿದ ವಿಷಯಗಳನ್ನು ಹೊರಗೆ ಚರ್ಚಿಸಬಾರದು ಎಂದು ಅವರು ಬಯಸುತ್ತಾರೆ. ಮೋದಿಜಿ ನಿರ್ಧಾರ ತೆಗೆದುಕೊಂಡಿದ್ದಾರೆ ಎಂದು ಜನರು ಭಾವಿಸುತ್ತಾರೆ. ಆದರೆ, ಇದು ಸಮಾಲೋಚನೆಯ ಫಲಿತಾಂಶ ಎಂದು ಅವರಿಗೆ ತಿಳಿದಿಲ್ಲ ಎಂದು ಅವರು ಹೇಳಿದರು.

ಪ್ರಧಾನಿಯಾಗಿ ನಿರ್ಧಾರಗಳನ್ನು ತೆಗೆದುಕೊಳ್ಳುವುದು ಅವರ ಹಕ್ಕು. ಆದರೆ, ಅವರು ನಿರ್ಧಾರ ತೆಗೆದುಕೊಳ್ಳುವ ಅಧಿಕಾರವನ್ನು ಇತರ ಮಂತ್ರಿಗಳಿಗೆ ವಹಿಸಿದ್ದಾರೆ. ಮೋದಿ ಅವರು ಇತರರ ಸಲಹೆ ಆಲಿಸಿ, ನಂತರ ನಂತರ ನಿರ್ಧಾರ ತೆಗೆದುಕೊಳ್ಳುತ್ತಾರೆ. ಈ ಸಿದ್ಧಾಂತವನ್ನು ವಿರೋಧಿಸುವವರು ಅವರ ವರ್ಚಸ್ಸಿಗೆ ಹಾನಿ ಮಾಡಲು ಪ್ರಯತ್ನಿಸುತ್ತಿದ್ದಾರೆ ಎಂದು ಆರೋಪಿಸಿದರು.

"ಕೆಲವು ಜನರು ನಮ್ಮ ಸೈದ್ಧಾಂತಿಕ ವಿರೋಧಿಗಳಾಗಿದ್ದಾರೆ, ಅವರು ಸತ್ಯಗಳನ್ನು ಕುಶಲತೆಯಿಂದ ನಿರ್ವಹಿಸುತ್ತಾರೆ ಮತ್ತು ಪ್ರಧಾನಿಯವರ ವರ್ಚಸ್ಸನ್ನು ಹಾಳು ಮಾಡಲು ಪ್ರಯತ್ನಿಸುತ್ತಾರೆ" ಎಂದರು.

ಪ್ರಧಾನ ಮಂತ್ರಿ ಅಪಾಯಕಾರಿ ನಿರ್ಧಾರಗಳನ್ನು ತೆಗೆದುಕೊಳ್ಳುತ್ತಾರೆ. ಏಕೆಂದರೆ, ಈ ಸರ್ಕಾರ ಅಧಿಕಾರದಲ್ಲಿರುವುದು ದೇಶವನ್ನು ಬದಲಿಸಲು ಎಂಬುದು ನಮ್ಮ ನಂಬಿಕೆ ಎಂದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com