ಪರಿಸ್ಥಿತಿ ಸ್ಥಿರವಾಗುವವರೆಗೂ ಯಾವುದೇ ಇ-ಹರಾಜು ನಡೆಸದಂತೆ ಕೋಲ್ ಇಂಡಿಯಾದಿಂದ ತಡೆ
ವಿದ್ಯುತ್ ಉತ್ಪಾದನಾ ಘಟಕಗಳಲ್ಲಿ ಕಲ್ಲಿದ್ದಲು ದಾಸ್ತಾನು ಕಡಿಮೆ ಇರುವಂತೆಯೇ ವಿದ್ಯುತ್ ಕ್ಷೇತ್ರಕ್ಕೆ ವಿಶೇಷ ಫಾರ್ವಡ್ ಇ- ಹರಾಜು ಹೊರತುಪಡಿಸಿ, ಪರಿಸ್ಥಿತಿ ಸ್ಥಿರವಾಗುವವರೆಗೂ ಯಾವುದೇ ಕಲ್ಲಿದ್ದಲು ಇ- ಹರಾಜು ನಡೆಸದಂತೆ ತಡೆಯಬೇಕೆಂದು ಕೋಲ್ ಇಂಡಿಯಾ ಲಿಮಿಟೆಡ್ ತನ್ನ ಅಂಗಸಂಸ್ಥೆಗಳಿಗೆ ಸೂಚಿಸಿದೆ.
Published: 15th October 2021 06:22 PM | Last Updated: 15th October 2021 06:22 PM | A+A A-

ಕೋಲ್ ಇಂಡಿಯಾ ಲಿಮಿಟೆಡ್
ನವದೆಹಲಿ: ವಿದ್ಯುತ್ ಉತ್ಪಾದನಾ ಘಟಕಗಳಲ್ಲಿ ಕಲ್ಲಿದ್ದಲು ದಾಸ್ತಾನು ಕಡಿಮೆ ಇರುವಂತೆಯೇ ವಿದ್ಯುತ್ ಕ್ಷೇತ್ರಕ್ಕೆ ವಿಶೇಷ ಫಾರ್ವಡ್ ಇ- ಹರಾಜು ಹೊರತುಪಡಿಸಿ, ಪರಿಸ್ಥಿತಿ ಸ್ಥಿರವಾಗುವವರೆಗೂ ಯಾವುದೇ ಕಲ್ಲಿದ್ದಲು ಇ- ಹರಾಜು ನಡೆಸದಂತೆ ತಡೆಯಬೇಕೆಂದು ಕೋಲ್ ಇಂಡಿಯಾ ಲಿಮಿಟೆಡ್ ತನ್ನ ಅಂಗಸಂಸ್ಥೆಗಳಿಗೆ ಸೂಚಿಸಿದೆ.
ವಿದ್ಯುತ್ ಬಿಕ್ಕಟ್ಟಿನ ವರದಿಗಳ ಹಿನ್ನೆಲೆಯಲ್ಲಿ ಕ್ಷೀಣಿಸುತ್ತಿರುವ ದಾಸ್ತಾನನ್ನು ಮರುಪೂರಣಗೊಳಿಸಲು ವಿದ್ಯುತ್ ವಲಯಕ್ಕೆ
ಕಲ್ಲಿದ್ದಲು ಪೂರೈಕೆಗೆ ಆದ್ಯತೆ ನೀಡುತ್ತಿರುವುದರಿಂದ ಕೋಲ್ ಇಂಡಿಯಾ ಬೆಳವಣಿಗೆ ಮಹತ್ವ ಪಡೆದುಕೊಂಡಿದೆ.
ಪ್ರಸ್ತುತ ವಿದ್ಯುತ್ ಉತ್ಪಾದನಾ ಘಟಕಗಳಲ್ಲಿ ಕಡಿಮೆ ದಾಸ್ತಾನು ಹಿನ್ನೆಲೆಯಲ್ಲಿ ವಿದ್ಯುತ್ ವಲಯಕ್ಕೆ ಕಲ್ಲಿದ್ದಲು ಪೂರೈಕೆಗೆ ಆದ್ಯತೆ ನೀಡಲಾಗುತ್ತಿದ್ದು, ಪರಿಸ್ಥಿತಿ ಸ್ಥಿರವಾಗುವವರೆಗೂ ಮುಂದೆ ಯಾವುದೇ ಕಲ್ಲಿದ್ದಲು ಇ- ಹರಾಜು ನಡೆಸದಂತೆ ಈಸ್ಟರ್ನ್ ಕೋಲ್ ಫೀಲ್ಡ್ಸ್ ಲಿಮಿಟೆಡ್ (ಇಸಿಎಲ್ ) ಭಾರತ್ ಕೋಕಿಂಗ್ ಕೋಲ್ ಲಿಮಿಟೆಡ್ (ಬಿಸಿಸಿಎಲ್ ) ಸೆಂಟ್ರಲ್ ಕೋಲ್ ಫೀಲ್ಡ್ಸ್ ಲಿಮಿಟೆಡ್ (ಸಿಸಿಎಲ್ ) ಸೇರಿದಂತೆ ತನ್ನ ಅಂಗ ಸಂಸ್ಥೆಗಳಿಗೆ ಇತ್ತೀಚಿಗೆ ಬರೆದಿರುವ ಪತ್ರದಲ್ಲಿ ಕೋಲ್ ಇಂಡಿಯಾ ತಿಳಿಸಿದೆ.
ಒಂದು ವೇಳೆ ವಿದ್ಯುತ್ ವಲಯಕ್ಕೆ ಪರಿಣಾಮ ಬೀರದ ರೀತಿ ಇ- ಹರಾಜು ಅಗತ್ಯವೆನಿಸಿದರೆ, ಅಂತಹ ಯಾವುದೇ ಯೋಜನೆ ಮುನ್ನ ಸೂಕ್ತ ಸಮರ್ಥನೆಯೊಂದಿಗೆ ಕೋಲ್ ಇಂಡಿಯಾದೊಂದಿಗೆ ಸಂಪರ್ಕ ಸಾಧಿಸಬೇಕಾಗುತ್ತದೆ ಎಂದು ಪತ್ರದಲ್ಲಿ ಹೇಳಲಾಗಿದೆ.
ದೇಶದ ಹಿತದೃಷ್ಟಿಯಿಂದ ಇದು ತಾತ್ಕಾಲಿಕ ಆದ್ಯತೆಯಾಗಿದೆ. ಕಲ್ಲಿದ್ದಲು ದಾಸ್ತಾನು ಕಡಿಮೆಯಿಂದಾಗಿ ವಿದ್ಯುತ್ ಉತ್ಪಾದನಾ ಘಟಕಗಳಲ್ಲಿ ಬೇಡಿಕೆ ಹೆಚ್ಚಿದ್ದು, ಅವುಗಳಿಗೆ ಪೂರೈಕೆಯನ್ನು ಹೆಚ್ಚಿಸಬೇಕಾಗಿದೆ. ಅಂದ ಮಾತ್ರಕ್ಕೆ ಇ- ಹರಾಜು ಮಾದರಿ ಸ್ಥಗಿತ ಎಂದು ಭಾವಿಸಬೇಕಾಗಿಲ್ಲ ಎಂದು ಕೋಲ್ ಇಂಡಿಯಾ ತಿಳಿಸಿದೆ.