ಜಮ್ಮು-ಕಾಶ್ಮೀರದಲ್ಲಿ ಆಟ ಈಗಷ್ಟೇ ಪ್ರಾರಂಭವಾಗಿದೆ: ಹೊಸ ಉಗ್ರ ಸಂಘಟನೆಯ ಎಚ್ಚರಿಕೆ

 ಜಮ್ಮು-ಕಾಶ್ಮೀರದಲ್ಲಿ ಆಟ ಈಗಷ್ಟೇ ಪ್ರಾರಂಭವಾಗಿದೆ ಎಂದು ಹೊಸ ಉಗ್ರ ಸಂಘಟನೆ ಎಚ್ಚರಿಕೆ ರವಾನಿಸಿದೆ. 
ಉಗ್ರರು ( ಸಾಂಕೇತಿಕ ಚಿತ್ರ)
ಉಗ್ರರು ( ಸಾಂಕೇತಿಕ ಚಿತ್ರ)

ನವದೆಹಲಿ: ಜಮ್ಮು-ಕಾಶ್ಮೀರದಲ್ಲಿ ಆಟ ಈಗಷ್ಟೇ ಪ್ರಾರಂಭವಾಗಿದೆ ಎಂದು ಹೊಸ ಉಗ್ರ ಸಂಘಟನೆ ಎಚ್ಚರಿಕೆ ರವಾನಿಸಿದೆ. ಇತ್ತೀಚೆಗಷ್ಟೇ ಜಮ್ಮು-ಕಾಶ್ಮೀರದಲ್ಲಿ ನಾಗರಿಕರ ಹತ್ಯೆ ಬೆನ್ನಲ್ಲೇ ಈ ಎಚ್ಚರಿಕೆ ಸಂದೇಶವನ್ನು ರೆಸಿಸ್ಟೆನ್ಸ್ ಫ್ರಂಟ್ ನೀಡಿದೆ.

ಟಿಆರ್ ಎಫ್ ನ ಉಗ್ರರನ್ನು ಬಂಧಿಸಲು ಎನ್ ಐಎ ಕೇಂದ್ರಾಡಳಿತ ಪ್ರದೇಶದ ಹಲವು ಭಾಗಗಳಲ್ಲಿ ದಾಳಿ ನಡೆಸಿದ ಬೆನ್ನಲ್ಲೇ " ಇನ್ನೂ ತೀವ್ರವಾಗಿ, ಆಕ್ರಮಣಕಾರಿಯಾಗಿ ದಾಳಿ ನಡೆಸುತ್ತೇವೆ" ಎಂದು ರೆಸಿಸ್ಟೆನ್ಸ್ ಫ್ರಂಟ್ ಎಚ್ಚರಿಸಿದೆ.

ಭದ್ರತಾ ಸಂಸ್ಥೆಗಳು ಈ ಎಚ್ಚರಿಕೆ ಸಂದೇಶವನ್ನೊಳಗೊಂಡ ಪತ್ರವನ್ನು ಹತಾಶಗೊಂಡಿರುವ ಉಗ್ರರು ಗಮನಸೆಳೆಯಲು ಯತ್ನಿಸುತ್ತಿರುವುದಾಗಿ ಎಂದು ಹೇಳಿವೆ. ಪಾಕಿಸ್ತಾನದ ಬೆಂಬಲಿತ ಭಯೋತ್ಪಾದಕ ಸಂಘಟನೆ ಲಷ್ಕರ್-ಎ-ತಯ್ಬಾ, ಟಿಆರ್ ಫ್ 2019 ರಲ್ಲಿ ಮೊದಲ ಬಾರಿಗೆ ಕಾಶ್ಮೀರದಲ್ಲಿ ಕಾಣಿಸಿಕೊಂಡಿತ್ತು.

ಟಿಆರ್ ಫ್ ನ ಹಿಂಸಾಚಾರಕ್ಕೆ ಸೇನೆ ನೀಡಿದ್ದ ಪ್ರತಿಕ್ರಿಯೆಯಿಂದ ಉಗ್ರ ಸಂಘಟನೆಯನ್ನು ಹತಾಶಗೊಳಿಸಿದೆ. ಕಳೆದ ಕೆಲವು ದಿನಗಳಿಂದ ಕಾಶ್ಮೀರದಲ್ಲಿ 8 ಮಂದಿ ಉಗ್ರರು ಹತರಾಗಿದ್ದಾರೆ. ಈ ಎಚ್ಚರಿಕೆ ಸಂದೇಶ ಹತಾಶಗೊಂಡಿರುವ ಉಗ್ರರ ಗಮನ ಸೆಳೆಯುವ ಯತ್ನವಾಗಿದೆ ಎಂದು ಭದ್ರತಾ ಅಧಿಕಾರಿಯೊಬ್ಬರು ಹೇಳಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com